Tuesday, 28 December 2021
Wednesday, 15 September 2021
Sahitya / kavana / kavite / ಕವಿತೆ / ಬಾಡಿಗೆ ಮನೆ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ
**ಬಾಡಿಗೆ ಮನೆ**
ದೇವರಿಗೊಂದು ಮನೆ ಕಟ್ಟಲಾಗಿದೆ
ಅದು ಬಾಡಿಗೆ ಮನೆ
ಮನೆಯೊಳಗೋ ಮೌನ ಬರಿಮೌನ
ದೇವರು ಮಾತ್ರ ಪ್ರಸನ್ನ
ಬೆಳಕಿನಲ್ಲಿ ಬೆಳಕು ಮೂಡಿಸಿ
ದೇವರು ನಗುತ್ತಿದ್ದಾನೆ..
ಕೆಲವು ಕಣ್ಣುಗಳು ದೇವರನ್ನು ಕಂಡು
ಕಣ್ಣೀರು ಸುರಿಸುತ್ತಿವೆ
ಮತ್ತೆ ಕೆಲವು ಕಣ್ಣುಗಳು
ದೇವರ ಸೌಂದರ್ಯವನು
ಕಣ್ಣತುಂಬ ತುಂಬಿಕೊಳ್ಳುತ್ತಿವೆ
ಬಾಡಿಗೆ ಮನೆಯ ತುಂಬಾ
ಆಸೆ ಆಮೀಷಗಳು ತುಂಬಿ ತುಳುಕುತಿವೆ
ದೇವರಿಗಷ್ಟೇ ಅಲ್ಲ
ಉಸಿರಾಡುವ ಕಲ್ಲುಗಳಲ್ಲೂ ಸಹ
ಗೋಡೆಯ ಮೇಲಿನ ಬಡವರು
ನಗುತ್ತಾ ನಗುತ್ತಾ ಅಳುತ್ತಿದ್ದಾರೆ
ಗ್ರಹಣ ಗ್ರಹಗತಿಗಳು
ಕಳ್ಳಕಾಕರೆಂದರೆ ದೇವರಿಗೂ ಭಯ
ನಗ ನಾಣ್ಯಗಳ ವ್ಯಾಮೋಹ
ಮುನಿಸು ಸಂತೃಪ್ತಿಗಳು ಮತ್ತಷ್ಟು
ಬಾಡಿಗೆ ಮನೆಗೊಮದು ದೊಡ್ಡಬೀಗ
ಆದರೂ ದೇವರಿಗೆ ಸಾಂತ್ವಾನ
ದೇವರು ಎಲ್ಲೆಡೆಯೂ ಇದ್ದಾನೆ
ರೋಗ ರುಜಿನಗಳು
ದೇವರಿಗೂ ಬರಬಹುದು
ದೇವರಿಗೆ ಮಾತ್ರ ಪರಿಶುದ್ಧತೆಯ ಕಾಳಜಿ
ಮೊರೆಯಿಡುವ ಖಾಲಿಕೈಗಳು
ನೂರಾರು ಸಾವಿರಾರು
ದೇವರು ಮಾತ್ರ ಸದಾ ಹಸನ್ಮುಖಿ
ತನ್ನ ಮನೆಗೆ ತಾನೇ ಬಾಡಿಗೆ ಕಟ್ಟುತ..
ದೇವರಿಗೂ ನಿಯಮಗಳ ಬಂಧನ
ಸಂಸಾರದ ತಾಪತ್ರಯಗಳಿಗಿಂತಲೂ
ಬಾಡಿಗೆ ಮನೆಯೊಳಗೆ ಅಧಿಕ
ದೇವರು ಎಲ್ಲವನೂ ಮರೆತಂತಿದೆ
ಇತಿಹಾಸದ ಪುಟಗಳಲ್ಲಿ ಅಮರ
ಮತ್ತೆ ಹೊಸ ಹುಟ್ಟು ಹೊಸ ಹೆಸರು
ಅದೇ ಬಾಡಿಗೆ ಮನೆಯಲ್ಲಿ..
ವೆಂಕಟೇಶ ಚಾಗಿ
Thursday, 9 September 2021
Sahitya / kavana / kavite / ಕವಿತೆ / ಧರೆಯ ನಕ್ಷತ್ರಗಳು - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ
**ಧರೆಯ ಮೇಲಿನ ಆಕಾಶಗಳು**
(ಕವಿತೆ)
ಆಕಾಶ ತಾನು ಸ್ವಚ್ಛವಾಗಬೇಕು
ಎಂದುಕೊಂಡಿತು
ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು
ಗಳಗಳನೇ ಅತ್ತುಬಿಟ್ಟಿತು
ದುಃಖ ತುಂಬಿದ ಮೋಡಗಳೆಲ್ಲಾ
ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ
ಒಂದನ್ನೊಂದು ಸೇರಿ
ಬಿಗಿದಪ್ಪಿಕೊಂಡವು
ಮತ್ತೆ ಅಗಲಲಾರದಂತೆ ಮತ್ತೆಂದು;
ಆಕಾಶ ಕೋಪದಿಂದ ಗುಡುಗಿ
ಮನದಲ್ಲಿದ್ದ ಬೆಂಕಿಯ ಸಿಡಿಲನ್ನು
ಹೀರಿ ತೆಗೆದು ಹೊರಹಾಕಿತು
ಕಾರ್ಮೋಡಗಳೆಲ್ಲಾ ಕರಗಿದವು
ಎಲ್ಲವೂ ಶಾಂತ
ಆಕಾಶವೂ ಸಹ;
ಆಕಾಶದ ನೋವುಗಳೀಗ
ನೆಲದ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ
ಕೆಲವು ಮಾಳಿಗೆಯ ಮೇಲೆ
ಕೆಲವು ಕೆಲವರ ಮೇಲೆ
ಕೆಲವಂತೂ ಚರಂಡಿಯಲ್ಲಿ
ಇನ್ನೂ ಕೆಲವನ್ನು ಕೆಲವರು
ಗುಡ್ಡೆ ಹಾಕಿದ್ದಾರೆ ಆಣೆಕಟ್ಟುಗಳಲ್ಲಿ;
ನಾಕಂಡಂತೆ ಆಕಾಶದ ನೋವುಗಳನ್ನು
ಹೆಚ್ಚು ಬಾಚಿಕೊಂಡವಳೆಂದರೆ
ಅವ್ವ ಒಬ್ಬಳೇ;
ಹಾಗಾಗಿ ಅವಳ ಕಣ್ಣುಗಳೂ ಸಹ
ಆಕಾಶಗಳಾಗಿವೆ
ಎಲ್ಲವನು ಕಂಡು ಎಲ್ಲವನು ಉಂಡು;
ಈಗ ಯಾರು ಮಿಗಿಲು
ಈ ಇಬ್ಬರಲಿ ?
ಆಕಾಶವೋ ಅಥವಾ ಅವ್ವ ?
ಆಕಾಶ, ಎಲ್ಲವನೂ ಉಂಡು
ಎಲ್ಲವನೂ ಮತ್ತೆ ಮರಳಿಸಿ
ಸ್ವಚ್ಛವಾಗಿಬಿಡುತ್ತದೆ
ಆದರೆ ಧರೆಯ ಮೇಲಿನ ಆಕಾಶಗಳು
ಎಲ್ಲವನ್ನೂ ಉಂಡು ಉಂಡೂ
ತಾವು ಬೆಂಡಾಗುತ್ತವೆ ಮತ್ತಷ್ಟು ಬಾಗಿ;
ನೋವುಗಳು ಹೊರಬಂದದ್ದು
ಇನ್ನೊಂದು ನೋವನ್ನು ಕಂಡಾಗ ಮಾತ್ರ
ಆದರೂ ಅವುಗಳನ್ನು
ಕಟ್ಟಿಹಾಕಲಾಗಿತ್ತು ಸೆರಗಿನಲ್ಲಿ
ಮತ್ತೆಲ್ಲೂ ಸೋರಿ ಹೋಗದಂತೆ..!!
Monday, 2 December 2019
Kmpo6 - Kavanಡಾ.ಕೆ.ಶಶಿಕಾಂತ ರವರ ಕವಿತೆ ** ನನ್ನ ಅವಸ್ಥೆ**
ನನ್ನ ಅವಸ್ಥೆ
ನಾನು ಸಣ್ಣವನಿದ್ದೆ
ನನ್ನ ಊರು ತುಂಬಾ
ಹೊಲಸು ತುಂಬಿದ
ಒರಟು ಒರಟಾದ
ಒಂದಕ್ಕೊಂದು ಅಂಟಿದ
ಸಣ್ಣ ಸಣ್ಣ ಮನೆಗಳು..
ಸಂದಿಗೊಂದಿಗಳು..
ಸಹಜವಾಗಿಯೇ ಕೊಳಕಾಗಿರುವ
ಮೈ-ಬಟ್ಟೆಗಳು..
ಕಟ್ಟಿಗೆಯ ಒಲೆಯ ಮೇಲೆ
ಸುಟ್ಟರೂ,ಲಕಲಕ ಎನ್ನುವ
ಪುಟ್ಟಿ ತುಂಬಿರುವ ರೊಟ್ಟಿ...
ಮನೆ ಕಿರಿದಾದರೇನು?
ಹೊಲಸಿದ್ದರೇನು?
ಕರೆದುಣ್ಣುವ ಕಕ್ಕುಲತೆ
ಹಸಿವನ್ನೇ ಅಸ್ಪ್ರಶ್ಯ ವನ್ನಾಗಿಸಿತ್ತು.
ಸಣ್ಣದಾದರೇನು? ಕೊಳಕಾದರೇನು?
ನೆಲೆಯಿಲ್ಲದ ಬಾಳಿಗೆ
ಈ ಗೋಡೆಯೋ..ಗುಡಿ-ಗುಂಡಾರವೋ..
ನಿದ್ದೆಗೆ ಸೂರುಗಳಾದರೂ...
ನಿದ್ದೆಗೆಡಿಸುವ ದುಃಸ್ವಪ್ನ ಗಳಿಗೆ ಪ್ರವೇಶವಿರಲಿಲ್ಲ.
ದೊಡ್ಡದಾದ ಮನದ ಮುಂದೆ ಈ ಎಲ್ಲಾ ಗೊಡ್ಡುತನಗಳಿಗೆ ತಲೆಬಾಗಿ
ನಿಲ್ಲುವ ಶಿಕ್ಷೆ.
ನಾನು ದೊಡ್ಡವನಾದೆ
ಈಗ ನಾನಿರುವ ಊರೂ ದೊಡ್ಡದು..
ಮನೆಗಳು, ರಸ್ತೆಗಳು..
ಎಲ್ಲವೂ ಮಿಗಿಲಾದವು ಗಳು..
ಮುಗಿಲಂತೆ ಲಕಲಕ ಹೊಳೆಯುವಂಥವುಗಳು.
ಅನಿಲದುರಿಯ ಒಲೆಯಿಂದ
ಬೇಯಿಸಿದ ಕರಕಾದ
ಮೃಷ್ಟಾನ್ನ,ಮನೆಯ ಬಾಗಿಲನು ಮುಚ್ಚಿ
ವೈದ್ಯರ ಕಟ್ಟಪ್ಪಣೆಯ
ಚಾಚೂ ತಪ್ಪದೇ ಪಾಲಿಸಿ...
ಯಾವ ಗಣಿತವನ್ನೂ ಮರೆಯದೆ
ಭಕ್ಷ್ಯಭೋಜ್ಯಗಳ ತುತ್ತನ್ನರೆದು ....
ಡೇಗಿಗೂ ಅನುಮತಿಯನ್ನು ನಿರಾಕರಿಸಿದ ಹೈಟೆಕ್ ಜೀವನ....!
ಘಮ್ಮೆನ್ನುವ ಕೋಣೆಯಲ್ಲಿ
ಮೆತ್ತನೆಯ ಹಾಸಿಗೆಯಲಿ
ಶೇಷಶಯನ ನಾನೆಂದರೂ
ಆ ದೂರಿದ್ದಾರೆ ಸೊತ್ತಾಗಿದ್ದ ನಿದ್ರೆ ನಮ್ಮನು ಸದಾ ಎಚ್ಚರವಾಗಿರುವ ದೈವವನಾಗಿಸಿತು.
ಗರಿಗರಿಯ ಬಟ್ಟೆ,
ಹಾಲು ಚೆಲ್ಲುವ ನಗೆ
ಮಠ-ಮಂದಿರಗಳಲೂ
ರಿಂಗಣಿಸುವ ಬಿನ್ನಾಣ
ನಾಯಿ-ಬೆಕ್ಕು
ಕಾಗೆ-ಕೋಗಿಲೆಗಳನೂ
ಸೇರದಾಯಿತು.
ನಾನೀಗ ದಂಗಾಗಿಬಿಟ್ಟೆ.
ಹುಟ್ಟಿದೆ,ಬೆಳೆದೆ..
ಬದಲಾವಣೆಯ ಬೆಳೆಗೆ
ಅವಿರತ ದುಡಿದೆ
ಧನಿಕನಾದೆ..
ಹಾಗಾಗಿ ನಾನೀಗ ಪ್ರಕಾಶಿಸುತ್ತಿದ್ದೇನೆ
ಬೆಳಕನೂ ಸಹಿಸದಷ್ಟು
ಬಲಶಾಲಿಯಾಗಿದ್ದೇನೆ..
ವ್ಯಕ್ತಿತ್ವ ವಿಕಸನಕ್ಕೆ
ಭಾಷ್ಯವಾಗಿದ್ದೇನೆ.
-೦೦೦-
ಕೆ.ಶಶಿಕಾಂತ
ಡಾ.ಕೆ.ಶಶಿಕಾಂತ ರವರ ಇತರ ಕವನಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Monday, 28 October 2019
ಗಜಲ್ - ಒಂದಿಷ್ಟು ಮಾಹಿತಿ gajal gazal
ಗಜಲ್ ಎಂದರೇನು?
(ವಾಟ್ಸ್ಯಪ್ ಕೃಪೆ)
ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಅವರ ಕೃತಿಯಲ್ಲಿ ಇದರ ಪ್ರಸ್ತಾಪವಿದೆ. ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ನಾನು ಇವುಗಳಲ್ಲಿ ಕೆಲವನ್ನು ಗಜಲಿನ ವಸ್ತುಗಳನ್ನಾಗಿ ಬಳಸಿಕೊಂಡಿದ್ದೇನೆ.
ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸಮರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.
-೩-
ಗಜಲ್‌ನ ರಚನೆ : ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ.
ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲಿನಲ್ಲಿ ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ)ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗಜಲಿನ ಒಂದು ಚರಣಕ್ಕೆ ಮಿಸ್ರ ಎನ್ನುತ್ತಾರೆ. ದ್ವಿಪದಿಗೆ ಷೇರ್ ಎನ್ನುತ್ತಾರೆ.
ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ. ಇದರ ಎರಡೂ ಚರಣಗಳಲ್ಲಿ ಕಾಫಿಯ ಮತ್ತು ರದೀಫ್ ಈ ಎರಡೂ ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.
ಕಾಫಿಯ: ಇದು ಒಂದು ಪ್ರಾಸ. ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ. ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣಗಳ ಮತ್ತು ಇನ್ನುಳಿದ ದ್ವಿಪದಿಗಳ ಎರಡನೆಯ ಚರಣದ ಅಂತ್ಯದಲ್ಲಿ ಪುನ: ಪುನ: (ಸ್ಥಾಯಿಯಾಗಿ ಅಲ್ಲ) ಬರುವುದಕ್ಕೆ ಕಾಫಿಯ ಎನ್ನುತ್ತಾರೆ. ಸ್ಥಾಯಿಯಾಗಿ ಅಂದರೆ ಬಂದ ಶಬ್ದವೆ ಬರಬಾರದು ಎಂದರ್ಥ. ಆದರೆ ಆ ಶಬ್ದಕ್ಕೆ ಬೇರೆ ಬೇರೆಯಾದ ಅರ್ಥವಿದ್ದರೆ ಅದನ್ನು ಬಳಸಬಹುದು. ಉದಾಹರಣೆಗೆ ತುಂಬಿ : ಇದಕ್ಕೆ ಎರಡು ಅರ್ಥಗಳಿವೆ. ಪೂರ್ಣವಾಗಿ ಮತ್ತು ಭ್ರಮರ. ಹೀಗೆ ಬೇರೆ ಬೇರೆಯಾದ ಅರ್ಥವಿರುವ ಶಬ್ದಗಳನ್ನು ಬಳಸಬಹುದು.
ರವಿ ಎಂಬುದು ಕಾಫಿಯಾದಲ್ಲಿ ಬಹಳ ಮುಖ್ಯವಾದುದು. ಕಾಫಿಯಾದ ನಿಜವಾದ ಮತ್ತು ಕೊನೆಯದಾದ ಅಕ್ಷರಕ್ಕೆ ರವಿ ಎನ್ನುತ್ತಾರೆ. ಉದಾಹರಣೆಗೆ : ಚಿಗುರು ಮತ್ತು ಅಲರು. ಇವುಗಳಲ್ಲಿ ರು ರವಿಯಾಗಿದೆ. ರವಿ ಕಾಫಿಯಾದ ಬೇರು. ಇದಿಲ್ಲದೆ ಕಾಫಿಯಾ ಆಗುವುದಿಲ್ಲ. (ಚಿಗುರು ಎಂದರೆ ಕುಡಿ, ಮೊಳಕೆ, ಅಲರು ಎಂದರೆ ಹೂವು, ಅರಳು)
ರದೀಫ್: ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ, ಪೂರ್ಣ ಅರ್ಥ ಕೊಡುವ ಶಬ್ದಗಳ ಗುಂಪು ಮತ್ತು ಅಕ್ಷರ; ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ.
ಗಜಲಿಗೆ ರದೀಫ್‌ನ ಅವಶ್ಯಕತೆ ಇಲ್ಲ. ರದೀಫ್ ಇಲ್ಲದ ಗಜಲ್‌ಗಳಿವೆ. ಆದರೆ ಕಾಫಿಯಾ ಮಾತ್ರ ಗಜಲಿಗೆ ಬೇಕೇ ಬೇಕು. ಅನೇಕರು ರದೀಫ್ ಇಲ್ಲದ ಗಜಲ್‌ಗಳನ್ನು ಮೆಚ್ಚುವುದಿಲ್ಲ. ರದೀಫ್‌ನ್ನು ಬಳಸಿದ ಗಜಲ್‌ಗಳಿಗೇ ಹೆಚ್ಚಿನ ಮಾನ್ಯತೆ. ಆದರೆ ರದೀಫ್ ಇಲ್ಲದ ಗಜಲ್‌ಗಳ ಸೃಷ್ಟಿ ಆಗುತ್ತಲೇ ಬಂದಿದೆ.
ಮಖ್ತ: ಗಜಲಿನ ಕೊನೆಯ ದ್ವಿಪದಿಗೆ ಮಖ್ತ ಎನ್ನುತ್ತಾರೆ. ಕವಿ ತನ್ನ ಕಾವ್ಯನಾಮವನ್ನು ಇದರಲ್ಲಿ ಹೇಳಿಕೊಂಡಿರುತ್ತಾನೆ. ಅನೇಕ ವೇಳೆ ಕವಿ ತನ್ನ ಕಾವ್ಯನಾಮವನ್ನೇ ಹೇಳಿರುವುದಿಲ್ಲ. ಹೇಳಬೇಕೆಂಬ ಕಡ್ಡಾಯವೇನೂ ಇಲ್ಲ. ಕೆಲವು ಕವಿಗಳು ಮತ್ಲಾದಲ್ಲಿಯೂ ತಮ್ಮ ಕಾವ್ಯನಾಮವನ್ನು ಹೇಳಿಕೊಂಡಿರುವುದುಂಟು. (ನಾನು ನನ್ನ ಕಾವ್ಯನಾಮವನ್ನು ಸಿದ್ಧ ಎಂದು ಇರಿಸಿಕೊಂಡಿದ್ದೇನೆ).
ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗeಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ.
-೪-
ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯವು ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರದು. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ.
ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು.
ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ. ಗಜಲ್ ಸಂಕಲನಗಳೂ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಾಗಿವೆ.
ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಅವರ ಕೃತಿಯಲ್ಲಿ ಇದರ ಪ್ರಸ್ತಾಪವಿದೆ.
ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ನಾನು ಇವುಗಳಲ್ಲಿ ಕೆಲವನ್ನು ಗಜಲಿನ ವಸ್ತುಗಳನ್ನಾಗಿ ಬಳಸಿಕೊಂಡಿದ್ದೇನೆ. ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸಮರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.
ಗಜಲ್‌ನ ರಚನೆ : ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ. ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲಿನಲ್ಲಿ ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ)ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗಜಲಿನ ಒಂದು ಚರಣಕ್ಕೆ ಮಿಸ್ರ ಎನ್ನುತ್ತಾರೆ. ದ್ವಿಪದಿಗೆ ಷೇರ್ ಎನ್ನುತ್ತಾರೆ.ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ. ಇದರ ಎರಡೂ ಚರಣಗಳಲ್ಲಿ ಕಾಫಿಯ ಮತ್ತು ರದೀಫ್ ಈ ಎರಡೂ ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.ಕಾಫಿಯ: ಇದು ಒಂದು ಪ್ರಾಸ. ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ. ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣಗಳ ಮತ್ತು ಇನ್ನುಳಿದ ದ್ವಿಪದಿಗಳ ಎರಡನೆಯ ಚರಣದ ಅಂತ್ಯದಲ್ಲಿ ಪುನ: ಪುನ: (ಸ್ಥಾಯಿಯಾಗಿ ಅಲ್ಲ) ಬರುವುದಕ್ಕೆ ಕಾಫಿಯ ಎನ್ನುತ್ತಾರೆ. ಸ್ಥಾಯಿಯಾಗಿ ಅಂದರೆ ಬಂದ ಶಬ್ದವೆ ಬರಬಾರದು ಎಂದರ್ಥ. ಆದರೆ ಆ ಶಬ್ದಕ್ಕೆ ಬೇರೆ ಬೇರೆಯಾದ ಅರ್ಥವಿದ್ದರೆ ಅದನ್ನು ಬಳಸಬಹುದು. ಉದಾಹರಣೆಗೆ ತುಂಬಿ : ಇದಕ್ಕೆ ಎರಡು ಅರ್ಥಗಳಿವೆ. ಪೂರ್ಣವಾಗಿ ಮತ್ತು ಭ್ರಮರ. ಹೀಗೆ ಬೇರೆ ಬೇರೆಯಾದ ಅರ್ಥವಿರುವ ಶಬ್ದಗಳನ್ನು ಬಳಸಬಹುದು. ರವಿ ಎಂಬುದು ಕಾಫಿಯಾದಲ್ಲಿ ಬಹಳ ಮುಖ್ಯವಾದುದು. ಕಾಫಿಯಾದ ನಿಜವಾದ ಮತ್ತು ಕೊನೆಯದಾದ ಅಕ್ಷರಕ್ಕೆ ರವಿ ಎನ್ನುತ್ತಾರೆ. ಉದಾಹರಣೆಗೆ : ಚಿಗುರು ಮತ್ತು ಅಲರು. ಇವುಗಳಲ್ಲಿ ರು ರವಿಯಾಗಿದೆ. ರವಿ ಕಾಫಿಯಾದ ಬೇರು. ಇದಿಲ್ಲದೆ ಕಾಫಿಯಾ ಆಗುವುದಿಲ್ಲ. (ಚಿಗುರು ಎಂದರೆ ಕುಡಿ, ಮೊಳಕೆ, ಅಲರು ಎಂದರೆ ಹೂವು, ಅರಳು)ರದೀಫ್: ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ, ಪೂರ್ಣ ಅರ್ಥ ಕೊಡುವ ಶಬ್ದಗಳ ಗುಂಪು ಮತ್ತು ಅಕ್ಷರ; ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ.ಗಜಲಿಗೆ ರದೀಫ್‌ನ ಅವಶ್ಯಕತೆ ಇಲ್ಲ. ರದೀಫ್ ಇಲ್ಲದ ಗಜಲ್‌ಗಳಿವೆ. ಆದರೆ ಕಾಫಿಯಾ ಮಾತ್ರ ಗಜಲಿಗೆ ಬೇಕೇ ಬೇಕು. ಅನೇಕರು ರದೀಫ್ ಇಲ್ಲದ ಗಜಲ್‌ಗಳನ್ನು ಮೆಚ್ಚುವುದಿಲ್ಲ. ರದೀಫ್‌ನ್ನು ಬಳಸಿದ ಗಜಲ್‌ಗಳಿಗೇ ಹೆಚ್ಚಿನ ಮಾನ್ಯತೆ. ಆದರೆ ರದೀಫ್ ಇಲ್ಲದ ಗಜಲ್‌ಗಳ ಸೃಷ್ಟಿ ಆಗುತ್ತಲೇ ಬಂದಿದೆ. ಮಖ್ತ: ಗಜಲಿನ ಕೊನೆಯ ದ್ವಿಪದಿಗೆ ಮಖ್ತ ಎನ್ನುತ್ತಾರೆ. ಕವಿ ತನ್ನ ಕಾವ್ಯನಾಮವನ್ನು ಇದರಲ್ಲಿ ಹೇಳಿಕೊಂಡಿರುತ್ತಾನೆ. ಅನೇಕ ವೇಳೆ ಕವಿ ತನ್ನ ಕಾವ್ಯನಾಮವನ್ನೇ ಹೇಳಿರುವುದಿಲ್ಲ. ಹೇಳಬೇಕೆಂಬ ಕಡ್ಡಾಯವೇನೂ ಇಲ್ಲ. ಕೆಲವು ಕವಿಗಳು ಮತ್ಲಾದಲ್ಲಿಯೂ ತಮ್ಮ ಕಾವ್ಯನಾಮವನ್ನು ಹೇಳಿಕೊಂಡಿರುವುದುಂಟು. (ನಾನು ನನ್ನ ಕಾವ್ಯನಾಮವನ್ನು ಸಿದ್ಧ ಎಂದು ಇರಿಸಿಕೊಂಡಿದ್ದೇನೆ).ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗeಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ.
ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯವು ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರದು. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ. ಗಜಲ್ ಸಂಕಲನಗಳೂ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಾಗಿವೆಗಜಲ್ ಕಾವ್ಯ ಪ್ರಕಾರ ಉರ್ದು ಸಾಹಿತ್ಯದ ಜನಪ್ರಿಯ ಭಾಗ. ಜನಪ್ರಿಯ ಎಂದ ಕೂಡಲೇ ಗಂಭೀರ ಸಾಹಿತ್ಯದ ಭಾಗವಲ್ಲವೆಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು.
ಶೃಂಗಾರ, ಪ್ರೇಮ, ವಿರಹಗೀತೆಯೂ ಹೌದು. ಗಜಲ್‌ನ ಮೂಲ ಫಾರಸಿ ಜಾನಪದ ಕಾವ್ಯದಲ್ಲಿದೆ ಎಂಬ ಅಭಿಪ್ರಾಯವಿದೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ.
ಗಜಲ್ ಪದ್ಯಗಳಿಗೆ ಅರಸರ ಆಸ್ಥಾನದ ಹೊಗಳುಭಟ್ಟರ ಪ್ರಶಂಸೆಯ `ಖಾಸಿದಾ~ ಎಂಬ 6ನೇ ಶತಮಾನದ ಅರಬಿ ಪದ್ಯಗಳು ಮೂಲವೆಂದೂ ಮತ್ತೊಂದು ಹೇಳಿಕೆಯಿದೆ. ಸ್ವರೂಪದಲ್ಲಿ ಗಜಲ್ `ಷೇರ್~ ಎಂಬ ದ್ವಿಪದಿಯಲ್ಲಿದ್ದು, ಒಂದು ದ್ವಿಪದಿ ಇನ್ನೊಂದು ದ್ವಿಪದಿಯ ಸಾಲುಗಳೊಂದಿಗೆ ಸಂಬಂಧವಿಟ್ಟುಕೊಳ್ಳಬೇಕಾದ ನಿಯಮವಿಲ್ಲ. ಗಜಲ್‌ನ ದ್ವಿಪದಿಗಳು ಸ್ವತಂತ್ರವಾಗಿಯೂ ಇರಬಹುದು. ಒಂದು ಗಜಲ್‌ನಲ್ಲಿ ಸಾಧಾರಣವಾಗಿ 5ರಿಂದ 21ರಷ್ಟು ದ್ವಿಪದಿಗಳಿರುತ್ತವೆ.
ಕನ್ನಡದ ಭಾವಗೀತೆಗಳಿಗೆ ಹೋಲಿಸಬಹುದಾದ ಗಜಲ್, ಸಂಕೇತಗಳ ಮೂಲಕ ವ್ಯಕ್ತಪಡಿಸುವ ಸೂಕ್ಷ್ಮ, ವಿವಶತೆಯ ದಿವ್ಯ ಭಾವತರಂಗಗಳು ಮತ್ತು ಕರುಣಾರಸ ಪ್ರಧಾನವಾದ ದ್ವಿಪದಿಗುಚ್ಛಗಳು. ಮತ್ಲಾ, ಕಾಫಿಯಾ, ರದೀಪ್ ಮತ್ತು ಮುಕ್ತಾ ಎಂಬ ಸೂತ್ರಗಳು ಗಜಲ್‌ನ ಮುಖ್ಯ ಲಕ್ಷಣಗಳಾಗಿವೆ.
ಉರ್ದು ಸಾಹಿತ್ಯ
ಉರ್ದು ಭಾಷೆಯ ಸಾಹಿತ್ಯ ಭಾರತದಲ್ಲಿ 12ನೆಯ ಶತಮಾನದಲ್ಲಿ ಹುಟ್ಟಿಕೊಂಡಿತೆಂಬ ಮಾಹಿತಿ ಸಿಗುತ್ತದೆ. ಕನ್ನಡ ಭಾಷೆಗಿರುವ ಹೆಚ್ಚುಕಮ್ಮಿ ಹದಿನೈದು ಶತಮಾನಗಳ ಹಿರಿತನದ, ಭವ್ಯ ಪರಂಪರೆಯ ಎದುರು ಉರ್ದು ತೀರ ಇತ್ತೀಚಿನ ಭಾಷೆಯಾದರೂ ಈ ಭಾಷೆಯ ಸಾಹಿತ್ಯದ ಬೆಳವಣಿಗೆ ಅದ್ಭುತ ರೀತಿಯದ್ದು.
ಉರ್ದು ಆಸ್ಥಾನದ ಆಡಳಿತ ಭಾಷೆಯಾಗುವ ಮುಂಚೆ ಫಾರಸಿ ಭಾಷೆ ದೆಹಲಿಯ ಸುಲ್ತಾನರ ಆಡಳಿತ ಭಾಷೆಯಾಗಿತ್ತು. ಉರ್ದು ಸಾಹಿತ್ಯಕ್ಕೆ ಇದರಿಂದಾಗಿ ಅರಸೊತ್ತಿಗೆಯ ಪ್ರೋತ್ಸಾಹ ದೊರೆಯಿತು.
ಮುಖ್ಯವಾಗಿ ಉರ್ದು ಕಾವ್ಯಕ್ಕೆ ಆಸ್ಥಾನದ ಪ್ರೋತ್ಸಾಹದ ಸಿಂಹಪಾಲು ದೊರೆಯಿತು. ಭಾರತೀಯ, ಫಾರಸಿ, ಅರೆಬಿಕ್, ಈ ಮೂರು ಸಂಸ್ಕೃತಿಗಳ ಮಿಶ್ರ ಕಾವ್ಯಪ್ರಕಾರವೆನಿಸಿದ ಉರ್ದು ಗಜಲ್, ಇಸ್ಲಾಮಿಕ್ ದೇಶಗಳಿಗೆ ಮತ್ತು ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯೆನಿಸಿದೆ.
ಅಮೀರ್ ಖುಸ್ರೋ
ಉರ್ದು ಕಾವ್ಯ ಪ್ರಕಾರವನ್ನು ಆಸ್ಥಾನದಿಂದ ಮುಕ್ತಗೊಳಿಸಿ ಜನರೆಡೆಗೆ ತರುವುದರಲ್ಲಿ ಸೂಫಿ ಸಂತ ಕವಿಗಳ ಬಹುಮುಖ್ಯ ಕೊಡುಗೆಯಿದೆ. ಸರಳ ಗಜಲ್‌ಗಳ ಮೂಲಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ನಿಷ್ಕಲ್ಮಷ ಬದುಕಿನ ವಿವಿಧ ಆಯಾಮವನ್ನು, ಅಧ್ಯಾತ್ಮವನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಈ ಪ್ರಕಾರವನ್ನು ಸೂಫಿ ಕವಿಗಳು ಜನಪ್ರಿಯಗೊಳಿಸಿದರು.
ಸೂಫಿಗಳಿಂದ ಮತ್ತು ರಾಜಮನೆತನದವರ ಪ್ರೋತ್ಸಾಹದಿಂದ ದಕ್ಷಿಣ ಏಷ್ಯಾದ ಅನೇಕ ದೇಶಗಳಲ್ಲಿ ಗಜಲ್ ಜನಪ್ರಿಯವಾಯಿತು. ಅಮೀರ್ ಖುಸ್ರೋ ಮತ್ತು ಮೀರ್ ತಖೀ ಮೀರ್, ಗಜಲ್‌ನ ಅದ್ಭುತ ಪ್ರತಿಭೆಯ ಸೂಫಿ ಕವಿಗಳೆನಿಸಿದರು.
ಅಮೀರ್ ಖುಸ್ರೋ ಉರ್ದು ಕಾವ್ಯಕ್ಕೆ, ಅದರಲ್ಲೂ ಮುಖ್ಯವಾಗಿ ಗಜಲ್ ಪ್ರಕಾರಕ್ಕೆ ಸಂಗೀತದ ಮೆರುಗನ್ನು ನೀಡಿದನಲ್ಲದೆ ಭಾರತದ ಹಿಂದೂಸ್ತಾನಿ ಸಂಗೀತಕ್ಕೆ `ಖಯಾಲ್~, `ತರಾನಾ~ ಮುಂತಾದ ಅನೇಕ ರಾಗಗಳನ್ನು, ತಬ್ಲಾ, ಸಿತಾರ್ ಮುಂತಾದ ವಾದ್ಯಗಳನ್ನು ಪರಿಚಯಿಸಿದ. ತನ್ನ ಪದ್ಯಗಳಲ್ಲಿ ಉತ್ಕಟ ದೇಶಾಭಿಮಾನ ಬೆಳೆಸಿದ ಖುಸ್ರೋ ಭಾರತವನ್ನು ಒಂದು ಸ್ವರ್ಗಸದೃಶ ದೇಶವೆಂದು ಹಾಡಿ ಹೊಗಳಿದ. ಅದಕ್ಕೆ ಕಾರಣಗಳನ್ನು ನೀಡಿದ.
ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.
ಅಗರ್ ಫಿರ್ದೌಸ್ ಖರ್ ರೂಹೆ ಜಮೀನ್,
ಹಮೀನ್ ಅಸ್ತ್, ಹಮೀನ್ ಅಸ್ತ್, ಹಮೀನ್ ಅಸ್ತ್.
(ಭೂಮಿಯ ಮೇಲೆ ಸ್ವರ್ಗ ಇರುವುದೆಂದಾದರೆ,
ಇಲ್ಲಿಯೇ ಇದೆ, ಇಲ್ಲಿಯೇ ಇದೆ, ಇಲ್ಲಿಯೇ ಇದೆ)
ಖುಸ್ರೋ ಹಿಂದವಿ (ಹಿಂದಿ/ಪಂಜಾಬಿಯ ಮೂಲ ಭಾಷೆ)ಯಲ್ಲಿ ಬರೆದ ಒಂದು ದ್ವಿಪದಿ ಹೀಗಿದೆ:
ಖುಸ್ರೊ ದರಿಯಾ ಪ್ರೇಮ್ ಕಾ ಉಲ್ಟಿ ವಾಕಿ ದಾರ್
ಜೋ ಉತ್‌ರಾ ಸೋ ಡೂಬ್ ಗಯಾ, ಜೋ ಡೂಬ್ ಗಯಾ ಸೋ ಪಾರ್
(ಹಿಂದಕ್ಕೆ ಹರಿಯುವ ಪ್ರೇಮ ನದಿ, ಖುಸ್ರೋ
ಹಾರಿದವನು ಮುಳುಗುವ, ಮುಳುಗಿದವನು ಪಾರಾಗುವ)
ಮೀರ್ ತಖೀ ಮೀರ್
ಮೀರ್ ತಖೀ ಮೀರ್ ಉರ್ದು ಗಜಲ್ ಜಗತ್ತಿನ ಚಕ್ರವರ್ತಿಯೆನಿಸಿದ ಪ್ರತಿಭಾವಂತ (1723-1810) ಭಾರತೀಯ ಸಂಸ್ಕೃತಿಯ ಅಂತಃಕರಣ ಹೊಂದಿದ್ದರಿಂದ, ಫಾರಸಿ ಭಾಷೆಯ ಮೆರಗನ್ನು ಬಹು ಸೂಕ್ಷ್ಮರೀತಿಯಲ್ಲಿ ಬೆರೆಸಿದ. ಅದ್ವಿತೀಯ ಪ್ರತಿಭಾವಂತನೆನಿಸಿದ ಮಲಾಮತಿ ಪರಂಪರೆಯ ಈ ಸೂಫಿ ಕವಿಯ ಹೃದಯಾಂತರಾಳದ ದುಃಖ, ಸಂಕಷ್ಟಗಳು, ಸೂಕ್ಷ್ಮ ತುಡಿತಗಳು ಕಾವ್ಯಸೃಷ್ಟಿಯ ಮೂಲ.
ಮೀರ್‌ಕೆ ದೀನೆ ಮಜ್‌ಹಬ್ ಪೂಚ್‌ತೇ ಉನೇ ತೋ
ಕಶ್‌ಕೆ ಖೈಂಚಾ ದೇರ್‌ಮೇಂ ಬೈಟಾ, ಕಬ್‌ಕಾ ತರ್ಕ್ ಇಸ್ಲಾಮ್ ಕಿಯಾ
ಮೀರನ ಜಾತಿ ಧರ್ಮವನು ಏನು ಕೇಳುವನೋ ಅವನು?
ನಾಮ ಹಣೆಯಲಿ ಧರಿಸಿ ಕೂತಿಹನವನು ದೇವಸ್ಥಾನದಲಿ, ಎಂದೋ ದೂರವಿಟ್ಟು ಇಸ್ಲಾಮನು.
ಮಿರ್ಜಾ ಗಾಲಿಬ್
ಉರ್ದು ಮತ್ತು ಫಾರಸಿಯಲ್ಲಿ ಬರೆಯುತ್ತಿದ್ದ ಇನ್ನೊಬ್ಬ ಬಹು ಮುಖ್ಯ ಕವಿ ಮಿರ್ಜಾ ಅಸದುಲ್ಲಾ ಖಾನ್ ಗಾಲಿಬ್ (1797-1869). ಗಾಲಿಬ್ ಗಜಲ್ ಪ್ರಕಾರಕ್ಕೆ ವಿಶಾಲವಾದ ಆಯಾಮವನ್ನು, ದಾರ್ಶನಿಕತೆಯನ್ನು, ವಸ್ತುವಿನಲ್ಲಿ ವೈಶಿಷ್ಟ್ಯವನ್ನು ನೀಡಿದ ಮಹತ್ವದ ಕವಿ.
ಗಾಲಿಬ್ ಗಜಲ್ ಕಾವ್ಯಸೃಷ್ಟಿಯಲ್ಲಿ ಎಷ್ಟು ಶ್ರೀಮಂತನೆಂದರೆ ಗಾಲಿಬ್‌ನಿಗೆ ಗಾಲಿಬನೇ ಹೋಲಿಕೆ ಎಂದು ವ್ಯಾಖ್ಯಾನವಿದೆ. ಇಂಥ ಅದ್ವಿತೀಯ ಒಂದಿಷ್ಟು ದ್ರಾಕ್ಷಾರಸವನ್ನು ಸೇವಿಸುವುದಕ್ಕಾಗಿ ಶರಾಬಿನ ಅಡ್ಡೆಯಲ್ಲಿ ಸಾಲಮಾಡಿ ತೀರಿಸಲಾಗದೆ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು.
ಉರ್ದುವಿನ ಮಹಾಕವಿಯೆನಿಸಿದ ಗಾಲಿಬ್ ತನ್ನ ಬದುಕಿನಲ್ಲಿ ಅತ್ಯಂತ ದಾರುಣವಾಗಿ ಸಂಕಷ್ಟಗಳನ್ನು, ನೋವನ್ನು ಉಂಡವರು.
ಪಂಚಾಕ್ಷರಿ ಹಿರೇಮಠರವರು ಅನುವಾದಿಸಿದ ಗಾಲಿಬನ ಕೆಲವು ಗಜಲ್ ಸಾಲುಗಳು ಹೀಗಿವೆ:
ನಾನು ಮನುಷ್ಯ ಸ್ವಭಾವದವನಾಗಿದ್ದೇನೆ, ಮನುಷ್ಯನಾಗಿ ಹುಟ್ಟಿದ್ದೇನೆ
ನನಗೆಷ್ಟು ಸಾಧ್ಯವೋ ಅಷ್ಟು ಪಾಪಮಾಡಬಲ್ಲೆ ಎನ್ನುವ ಅಭಿಮಾನ ನನಗಿದೆ...
*
ದ್ರಾಕ್ಷಾರಸದ ನನ್ನ ಪೂಜೆಯನ್ನು ನಾನೆಂದೂ ನಿಲ್ಲಿಸುವುದಿಲ್ಲ
ಭೋರಿಡುವ ಗಾಳಿಯ ಸುಳಿಯಲ್ಲಿ ನಾನು ಸದಾ ಜಿಗಿಯುತ್ತಿರುತ್ತೇನೆ.
*
ನನ್ನ ಗುಡಿಸಲಿನ ನರನರಗಳಲ್ಲಿ ಹೊರಹೊಮ್ಮುವ ಬಿಸಿಲತಾಪವ ಕೇಳದಿರು
ಈ ತಾಪಕ್ಕೆ ಹೆದರಿ ನಾನು ಆಕಾಶದಲ್ಲಿ ಹಾರಾಡುತ್ತಿಲ್ಲ.
*
ಸೌಂದರ್ಯವೇ, ಒಮ್ಮೆ ಸಕಲ ವೈಭವದೊಡನೆ ನಿನ್ನ ನೋಡುವ ಆಸೆ
ಎಷ್ಟು ಕಾಲದವರೆಗೆ ಇಣಿಕಿ ನೋಡಲಿ ಮನದ ಕನ್ನಡಿಯ ಬಿಂಬಗಳ?
ಅಸದ್ ಎಂಬ ಕಾವ್ಯನಾಮದೊಂದಿಗೆ ಗಾಲಿಬ್ ಬರೆದ ಉರ್ದು ಗಜಲ್‌ಗಳು ಇಂದಿಗೂ ಗಜಲ್ ಗಾಯಕರ ಆಕರ್ಷಣೆಯ ಕೇಂದ್ರವಾಗಿದೆ. ಈ ಗಜಲ್‌ಗಳು ವಿಶ್ವದ ಎಲ್ಲೆಡೆ ಬಹಳ ಜನಪ್ರಿಯವಾಗಿವೆ.
ಕವಿ ಇಕ್ಬಾಲ್ (1877-1938)
1877ರ ನವೆಂಬರ್ 9ರಂದು (ಪಾಕಿಸ್ತಾನದ) ಪಂಜಾಬಿನ ಸಿಯಾಲ್‌ಕೋಟ್‌ನಲ್ಲಿ ಜನಿಸಿದ ವಿಶ್ವವಿಖ್ಯಾತ ಫಾರಸಿ ಮತ್ತು ಉರ್ದು ಭಾಷೆಗಳ ತತ್ವಜ್ಞಾನಿ ಕವಿ, ಭಾರತದಲ್ಲಿ `ಸಾರೇ ಜಹಾಂಸೆ ಅಚ್ಛಾ ಕವಿ~ ಎಂದೇ ಪ್ರಖ್ಯಾತ.
`ವಿಪರ್ಯಾಸವೆಂದರೆ ರಾಜಕೀಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಈ ಕವಿಯ ಕಾವ್ಯಕ್ಕೆ ಮಹತ್ವ ನೀಡದೆ, ತಪ್ಪು ಕಲ್ಪನೆಗಳೇ ಹೆಚ್ಚು ಪ್ರಚಾರದಲ್ಲಿರುವುದು! ಇಸ್ಲಾಮಿಗೆ ನಿಷ್ಠನಾಗಿದ್ದರೂ, ಗೀತೆಯ ಬಗ್ಗೆ ಆಕರ್ಷಿತನಾಗಿ ಸಂಸ್ಕೃತ ಕಲಿತು ವೇದಗಳನ್ನು ಅಭ್ಯಾಸ ಮಾಡಿದ್ದ.
ಒಂದೆಡೆ ಇಸ್ಲಾಮಿನ ಅಧ್ಯಾತ್ಮ ಮತ್ತು ದೇಶ ವಿಭಜನೆಯ ಪರವಾಗಿ ಈ ಕವಿ ಹೇಳಿದ ಮಾತುಗಳು ಧರ್ಮಾಂಧರ ಹೊಗಳಿಕೆ ಗಳಿಸಿದ್ದರೆ, ಇನ್ನೊಂದೆಡೆ ಶ್ರೀರಾಮನನ್ನು, ಬುದ್ಧನನ್ನು, ಗುರುನಾನಕನನ್ನು ಪ್ರಶಂಸೆ ಮಾಡಿದ್ದಕ್ಕೆ ಉಲೇಮಾಗಳ ಫತ್ವಾವನ್ನೂ ಈ ಕವಿ ಎದುರಿಸಿದ್ದ~ ಎನ್ನುತ್ತಾರೆ ಖ್ಯಾತ ಪತ್ರಕರ್ತ, ಸಾಹಿತಿ ಖುಷ್ವಂತ್ ಸಿಂಗ್.
ದೇಶವೆಂದರೇನು? ಹೇಗೆ ವಹಿಸುವೆ ನಾಯಕತ್ವ?
ಪಾಪ, ಮುಲ್ಲಾ! ಅದು ನಿಲುಕದು ಅವನ ಯೋಚನೆಗೆ.
ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ತನ್ನ ದ್ವಿಪದಿಗಳ ಮೂಲಕ ವಿಶಿಷ್ಟವಾಗಿ ಹೃದಯ ತಟ್ಟುವ ರೀತಿಯಲ್ಲಿ ವ್ಯಕ್ತಪಡಿಸಿದ ಈ ಕವಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ.
ಖುದೀ ಕೋ ಕರ್ ಬುಲಂದ್ ಇತ್‌ನಾ ಕೆ ಹರ್ ತಕ್‌ದೀರ್ ಸೆ ಪೆಹಲೇ
ಖುದಾ ಬಂದೇ ಸೆ ಖುದ್ ಪೂಚೆ, ಬತಾ ತೇರೀ ರಾ ಕ್ಯಾ ಹೈ?
ಸ್ವಂತಿಕೆಯನ್ನು ಬಲಗೊಳಿಸು ಸಾಕಷ್ಟು, ಪ್ರತಿಯೊಂದು ವಿಧಿಲೀಲೆಯ ಎದುರು
ದೇವರು ಕೇಳಬೇಕು ಮನುಜನನು ವಿವಶವಾಗಿ, `ಹೇಳು, ನಿನ್ನ ಇಚ್ಛೆ ಏನೆಂದು?
ಗಜಲ್‌ಗಳ ಮೂಲಕ ಪ್ರೇಮ ಸಂದೇಶವನ್ನು ಸಾರಿದ ಇಕ್ಬಾಲ್‌ರ ಅನೇಕ ಗಜಲ್‌ಗಳು ಜಗತ್ತಿನಾದ್ಯಂತ ಜನರ ಮನಸೂರೆಗೊಂಡಿವೆ. ಇವರ ಒಂದು ಗಜಲ್‌ನ ಕೆಲವು ಸಾಲುಗಳು ಹೀಗಿವೆ:
ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ
ಅಭೀ ಇಶ್ಕ್ ಕೀ ಇಮ್ತಿಹಾಂ ಔರ್ ಭೀ ಹೈ.
ತಹೀ ಜಿಂದಗೀ ಸೆ ನಹೀ ಏ ಫಿಾಯೇಂ
ಯಹಾಂ ಸೈಕಡೋಂ ಕಾರವಾಂ ಔರ್ ಭೀ ಹೈ
ಕನಾಹತ್ ನ ಕರ್ ಆಲಮೇ-ರಂಗೊ-ಬೂ ಪರ್
ಚಮನ್ ಔರ್ ಭಿ ಆಶಿಯಾಂ ಔರ್ ಭಿ ಹೈ
ತಾರೆಗಳ ಮುಂದೆ ಪ್ರಪಂಚ ಇನ್ನೂ ಇದೆ
ಇದೇ ಅಲ್ಲ, ಪ್ರೇಮದ ಪರೀಕ್ಷೆ ಇನ್ನೂ ಇದೆ.
ಖಾಲಿ ಬದುಕಿನಿಂದ ಇಲ್ಲ ಈ ವಾತಾವರಣ
ಇಲ್ಲಿ ಕೋಟ್ಯಾನುಕೋಟಿ ಸಾಲುಗಳು ಇನ್ನೂ ಇದೆ.
ತುಷ್ಟನಾಗದಿರು ಕಂಡು ಜಗದ ಬಣ್ಣ, ವಾಸನೆಯ ಮೇಲೆ
ಹೂದೋಟಗಳು, ಕನಸಿನ ಮನೆಗಳು ಇನ್ನೂ ಇದೆ.
ಮೇಲೆ ಹೇಳಲಾದ ಉರ್ದು ಗಜಲ್ ಕಾವ್ಯ ಪ್ರಕಾರದ ದಿಗ್ಗಜರೆನಿಸಿದ ಕವಿಗಳಲ್ಲದೆ ಇನ್ನೂ ನೂರಾರು ಜಗತ್ಪ್ರಸಿದ್ಧ ಕವಿಗಳು ಇದ್ದಾರೆ. ಕರ್ನಾಟಕದಲ್ಲಿ ಕೂಡ ಉರ್ದು ಭಾಷೆಯ ಕವಿಗಳು ಇಂದಿಗೂ ನೂರಾರು ಮಂದಿ ಇದ್ದಾರೆ. ಇವರೆಲ್ಲರೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ, ಹಲವರು ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಯನ್ನು ಪಡೆದಿದ್ದಾರೆ.
ಇತರ ಭಾಷೆಗಳಲ್ಲಿ ಗಜಲ್
ಗಜಲ್ ಕಾವ್ಯಪ್ರಕಾರ ಎಷ್ಟು ಜನಪ್ರಿಯವಾಯಿತೆಂದರೆ ಇವುಗಳ ಅನುವಾದ ಮಾತ್ರವಲ್ಲ, ಬಂಗಾಲಿ, ಕನ್ನಡ, ತೆಲುಗು, ಮರಾಠಿ, ಹಿಂದಿ ಭಾಷೆಗಳ ಕವಿಗಳು ಸ್ವತಂತ್ರವಾಗಿ ಗಜಲ್ ಬರೆಯತೊಡಗಿದರು.
ದೇಶವಿದೇಶಗಳಲ್ಲಿ ಮುಖ್ಯವಾಗಿ ಯುರೋಪ್ ಮತ್ತು ಅಮೆರಿಕಾದಲ್ಲಿ ಇಂಗ್ಲಿಷ್, ಟರ್ಕಿಷ್, ರಷ್ಯನ್, ಜರ್ಮನ್ ಭಾಷೆಗಳಿಗೆ ಉರ್ದು ಗಜಲ್‌ಗಳು ಅನುವಾದಗೊಂಡದ್ದು ಮಾತ್ರವಲ್ಲ, ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಸ್ವತಂತ್ರ ಗಜಲ್ ಕಾವ್ಯವನ್ನು ರಚಿಸಲು ಕವಿಗಳು ತೊಡಗಿದರು.
ಮುಖ್ಯವಾಗಿ ಜೇಮ್ಸ ಕ್ಲೆರೆನ್ಸ್, ಜೇಮ್ಸ ಎಜ್ರಾಯಿಲ್ ಫ್ಲೆಕ್ಕರ್, ಫಿಲ್ಲಿಸ್ ವೆಬ್ ಮುಂತಾದವರು ಗಜಲ್‌ನ ಸೂತ್ರಗಳಿಗೆ ಬದ್ಧವಾಗಿ ಮತ್ತು ಅರೆ ಬದ್ಧತೆಯಿಂದ ಪದ್ಯಗಳನ್ನು ಬರೆದರು.
ಅರೆಬದ್ಧತೆಯ ದ್ವಿಪದಿಗಳನ್ನು `ಬಾಸ್ಟರ್ಡ್ ಗಜಲ್ಸ್~ ಎಂದು ಗಜಲ್ ಪ್ರಿಯರು ಟೀಕಿಸಿ ಹೆಸರಿಸಿದರು. 1990ರ ಸುಮಾರಿಗೆ ಇಂಗ್ಲಿಷ್ ಗಜಲ್‌ಗಳಿಗೆ ಮಾನ್ಯತೆ ದೊರೆತು ಅಮೆರಿಕಾದ ಕವಿಗಳಾದ ಜಾನ್ ಹೋಲೆಂಡರ್, ಡಬ್ಲ್ಯೂ. ಎಸ್. ಮೆರ‌್ವಿನ್ ಮುಂತಾದವರು ಸೂತ್ರಬದ್ಧ ಗಜಲ್‌ಗಳನ್ನು ಬರೆದರು.
ಕಾಶ್ಮೀರಿ ಮೂಲದ ಅಮೆರಿಕನ್ ಕವಿ ಆಘಾ ಶಾಹೀದ್ ಅಲಿ ಈ ಇಂಗ್ಲಿಷ್ ಗಜಲ್‌ಗಳ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಿದ್ದಲ್ಲದೆ, 2000ದಲ್ಲಿ Ravishing Disunities- Real Ghazals in English ಎಂಬ ಹೆಸರಿನಲ್ಲಿ ಸಂಪಾದಿಸಿ ಪುಸ್ತಕವನ್ನು ಪ್ರಕಟಿಸಿದರು.
ಕನ್ನಡ ಕಾವ್ಯಲೋಕದಲ್ಲಿ ಗಜಲ್‌ಗಳು
ಕನ್ನಡದಲ್ಲಿ ಸ್ವತಂತ್ರವಾಗಿ ಮತ್ತು ಸೂತ್ರಬದ್ಧವಾಗಿ ಗಜಲ್‌ಗಳನ್ನು ಬರೆದವರಲ್ಲಿ ಪ್ರಥಮರೆಂದರೆ ಶಾಂತರಸರು. ಬೆಂಗಳೂರಿನ ಡಾ. ಕೆ.ಮುದ್ದಣ್ಣರವರು `ಮಂಜರ್~ ಎಂಬ ಕಾವ್ಯನಾಮದಲ್ಲಿ ಸುಮಾರು 500ರಷ್ಟು ಉರ್ದು ಗಜಲ್ ಬರೆದು ಖ್ಯಾತರಾಗಿದ್ದರಾದರೂ, ಇವರು ಅಲ್ಲಲ್ಲಿ `ಸತ್ಯಾನಂದ~ ಎಂಬ ಕಾವ್ಯನಾಮದಡಿಯಲ್ಲಿ ಕನ್ನಡ ಪದ್ಯಗಳು, ಉರ್ದು ಅನುವಾದಗಳನ್ನು ಬರೆದಿದ್ದರೇ ಹೊರತು ಸ್ವತಂತ್ರ ಗಜಲ್‌ಗಳನ್ನು ಕನ್ನಡದಲ್ಲಿ ಬರೆದದ್ದು ಕಮ್ಮಿ.
ಕಾದಂಬರಿಕಾರ, ಕತೆಗಾರ, ಕವಿ ಶಾಂತರಸರು `ಉರ್ದು ಕಾವ್ಯದಲ್ಲಿ ಮದಿರೆ ಮತ್ತು ಯೌವನ~ ಮುಂತಾದ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಉರ್ದು ಗಜಲ್‌ಗಳನ್ನು ಅನುವಾದಿಸಿದ ಜೊತೆಗೆ ಗಜಲ್ ಕಾವ್ಯದ ಸೂತ್ರಗಳಿಗೆ ಬದ್ಧವಾಗಿ ಕನ್ನಡ ಗಜಲ್‌ಗಳನ್ನು ಬರೆದಿದ್ದಾರೆ.
`ಗಜಲ್ ಮತ್ತು ಬಿಡಿ ದ್ವಿಪದಿಗಳು~ ಎಂಬುದು ಅವರ ಪ್ರಕಟಿತ ಕೃತಿ. ಇವರ ಕನ್ನಡ ಗಜಲ್‌ಗಳನ್ನು ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಲು ಕೈಗೆತ್ತಿಕೊಂಡಿದೆ. ಇವರ ಕೆಲವು ದ್ವಿಪದಿಗಳು ಗಜಲ್‌ಗಳು ಹೀಗಿವೆ:
ಅವಳ ಪೈಜಣದ ಧ್ವನಿ ಬರೆಯುತಿದೆ ಗಜಲ ಸಂಜೆಗೆಂಪಿನಲಿ
ಮಿಂದು ಮೆಲ್ಲನೆ ಬರುತಲಿದೆ ಅವಳ ಮೈಯ ಕಂಪಿನಲಿ.
*
ಏಸೋ ದಿನಗಳ ಬಳಿಕ ಓಲೆ ಬಂದಿದೆಯವಳ ಏನಿದೆಯೋ ಅಲ್ಲಿ
ಮುನಿಸೋ ಒಲವೋ ಅದನು ಸಹಿಸಲಿಕೆ ಬಟ್ಟಲವ ತುಂಬಿಕೊಡು ಸಾಕಿ.
ಶಾಂತರಸರು ಮೂಲತಃ ಪ್ರಯೋಗಶೀಲ ಕವಿ. ಸ್ವತಃ ಉರ್ದು ಸಾಹಿತ್ಯದ ಅಭಿಮಾನಿಯಾಗಿದ್ದ ಅವರು ಉರ್ದು ಕಾವ್ಯ ಪ್ರಕಾರಗಳಾದ ಗಜಲ್, ರುಬಾಯಿ, ನಜ್ಮ್, ಬಜ್ಮ್‌ಗಳನ್ನು ಅವುಗಳ ಕಾವ್ಯ ಲಕ್ಷಣಗಳನ್ನು ಕನ್ನಡದಲ್ಲಿ ಬಳಸಿ ಕಾವ್ಯರಚನೆ ಮಾಡುವ ಪ್ರಯೋಗವನ್ನು ಮಾಡಿದ್ದರು.
ಅವರು ಒಟ್ಟು ಇಂತಹ 46 ಗಜಲ್‌ಗಳನ್ನು `ಅರಸ~ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಇವರ ಗಜಲ್‌ಗಳ ಮಾಧುರ್ಯದ ಒಂದು ಮಾದರಿ ಹೀಗಿದೆ:
ಅರುವತ್ತು ತುಂಬಿದರೂ ಮಧುವುಂಟು ಪ್ರಿಯಳೇ ಮಾಧುರ‌್ಯವುಂಟು
ಮೊದಲ ಮಳೆ ಬಿದ್ದ ನೆಲದ ವಾಸನೆ ನಿನ್ನ ಅಂಗಾಂಗದಲಿ ಉಂಟು
ಮುಪ್ಪಿಲ್ಲ ಆಗಸಕೆ ಎಂದೆಂದು ಕುಂದಿಲ್ಲ ಚುಕ್ಕೆ ಚಂದ್ರರಿಗೆ
ಆಗಸದ ಸೌಂದರ್ಯ ಚುಕ್ಕೆ ಚಂದ್ರಾಮರ ಕಳೆ ನಿನಗುಂಟು
ಕೊರತೆ ಕಾಣದು ಬೆಳಕು ಕತ್ತಲೆಗೆ ಕೊಡೆಂಬುದಿಲ್ಲವೇ ಇಲ್ಲ
ತುಳುಕುತಿದೆ ಬೆಳಕು ಮೈಯಲಿ ಕಂಗಳಿಗೆ ಕತ್ತಲೆಯ ಕಾಡಿಗೆಯುಂಟು
ಸಂಜೆಗೆಂಪದರ ಜೊತೆ ಹುಣ್ಣಿಮೆಯ ಬೆಳದಿಂಗಳೇನು ಬಲು ಚಂದ
ಸಂಜೆಯನು ಉಡುವ ಹುಣ್ಣಿಮೆಯ ತೊಡುವ ಫಲವು ನಿನ್ನಲಿನ್ನೂ ಉಂಟು
ಜೀವನರ್ಥವ ಪ್ರೇಮದ ಮರ್ಮವ ತಿಳಿದವಳೆಂದರೆ ನೀನೇ
ಅಂತೆಯೇ ನಿನ್ನಲಿ ಚೆಲುವಿನ ತವರೆ ಯೌವನಕಿನ್ನೂ ಮೌನವೇ ಉಂಟು
ಬದುಕು ಒಂದು ದಿನ ಮುಗಿಯುವುದು ಮರ್ತ್ಯದ ಸೊಗಸೇ ಅಡಗಿಹುದಿರಲಿ
ಸಾವಿಗೆ ಜೀವನ ದೀಕ್ಷೆಯನೀಯುವ ಒಲವಿನ ಶಕ್ತಿ ನಿನಗುಂಟು.
ಶಾಂತರಸರು ತಮ್ಮ ಎಂದಿನ ಕವನಗಳಲ್ಲಿ ವ್ಯಕ್ತಪಡಿಸುವ ಪ್ರೇಮ, ಪ್ರಣಯದ ರೀತಿಗೂ, ತಮ್ಮ ಗಜಲ್‌ಗಳಲ್ಲಿ ವ್ಯಕ್ತಪಡಿಸುವ ರೀತಿಯೂ ಭಿನ್ನವಾಗಿದೆ. ನೈತಿಕ ಎಲ್ಲೆಯನ್ನು ಮೀರದ ಸಂಯಮದ ನಿರೂಪಣೆ ಇಲ್ಲಿ ಕಂಡುಬರುತ್ತದೆ.
ಕನ್ನಡದ ಕವಿ ಶಾಂತರಸರು ನಮ್ಮನ್ನು 2008ರಲ್ಲಿ ಬಿಟ್ಟು ಅಗಲಿದರೂ, ಈ ಗಜಲ್ ಪರಂಪರೆಯನ್ನು ಮುಂದುವರಿಸಲು ಯುವ ಕವಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಮಾರ್ಗದಲ್ಲಿ ನಜೀರ್ ಚಂದಾವರ, ಎಚ್.ಎಸ್.ಮುಕ್ತಾಯಕ್ಕ, ಡಾ. ಬಸವರಾಜ ಸಬರದ, ಚಿದಾನಂದ ಸಾಲಿ, ಆರಿಫ್ ರಾಜಾ, ಶಾರದಾ ಮುಳ್ಳೂರು, ಡಾ. ದಸ್ತಗೀರ್ ಸಾಬ್ ದಿನ್ನಿ, ಹೇಮಲತಾ ವಸ್ತ್ರದ ಮತ್ತು ಇನ್ನೂ ಹಲವು ಕನ್ನಡದ ಕವಿಗಳು ಗಜಲ್ ಬರವಣಿಗೆಯನ್ನು ಮುಂದುವರಿಸಿದ್ದಾರೆ.
ಗಜಲ್ ಕಾವ್ಯ ಪರಂಪರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ, ಅಲ್ಲದೆ ಈ ಗ ಉಜ್ವಲ ಭವಿಷ್ಯವೂ ಕಾದಿದೆಯೆನ್ನಬಹುದು.
ಗಝಲ್ : ೩೨ (ಕಾಪಿಯಾನ)
~~~~~~~~~~~~~~~
ಅರಳುವ ಮುನ್ನ ಅಳಿಸದಿರಿ ನಮ್ಮನ್ನ
ಬದುಕಬೇಕಿದೆ ಬಹಳ ದಿನ ನಾವು ಇನ್ನ ಹಾಲು ಕುಡಿಯುವ ಹಸುಳೆಗಳು ನಾವು
ಕಾಮದ ಕಣ್ಣಲ್ಲಿ ಕಾಣದಿರಿ ಈ ತನುವನ್ನ ನಿಮ್ಮ ಸಹೋದರಿಯರಿಗೂ ಎಳೆಯರು
ಎಳೆದಾಡದಿರಿ ನಮ್ಮ ಮೈ ಕೈ ಕಾಲುಗಳನ್ನನಿಮ್ಮ ಕ್ರೌರ್ಯ ಸಹಿಲಾರೆವು ಬಿಟ್ಟು ಬಿಡಿ
ಕರವನು ಮುಗಿದು ಬೇಡುತಿಹೆವು ನಿಮ್ಮನ್ನ ನಗುನಗುತಾ ಶಾಲೆಗೆ ಹೋಗುತ್ತಿರುವೆವು
ದಯವಿಟ್ಟು ಹಿಂಬಾಲಿಸದಿರಿ ನೀವು ಅಣ್ಣಯಾರ ಕಂದಮ್ಮಗಳಿಗೂ ಹೀಗಾಗದಿರಲಿ
"ಸಿಡಿಲು"ನು ಬೇಡುವನು ಶ್ರೀ ಈಶ್ವರನನ್ನ

Thursday, 11 April 2019
Kmpo4 - kavana - ಯುಗಾದಿ ವಿಶೇಷ ಕವನಗಳು
*ಯುಗಾದಿ ವಿಶೇಷ ಕವನಗಳು
☘🍃🎍🎋🍂🌿🌿
*ಧರೆಯ ಕ್ಷಮೆ ಕೋರಲು ಬಂದ ವಸಂತ*
***
ಎಲೆಯುದುರಿಸಿ ಮೈಯ್ಯೊಡ್ಡಿದ ವಸಂತ
ಹೊಸ ಅಲೆ ತಾಕಿಸಿಕೊಂಡ
ನಿಂತ ನೆಲದಮೇಲೆ ಬಿದ್ದೆದ್ದ ಜಾಗವ ನೆನೆದು
ಮತ್ತಷ್ಟು ಎದೆಯುಬ್ಬಿಸಿದ
ತಲೆಗೂದಲಗೆದರಿ ನಿಂತವಳಿಗೆ ನೆರಳಾಗಿ
ಗಾಳಿಯಾಗಿ ತಲೆನೇವರಿಸಿ
ಉಸಿರನು ಉದರಕೆ ಉಣಿಸಿ ಕುಣಿದು
ಸೃಷ್ಠಿಯ ಮೈದಡವಿ ಸಂತ್ರುಪ್ತನಾದ
ಜಗದ ಕಹಿಗೆ ಸಿಹಿ ಬೆರೆಸಿ ಚಿಗುರಿನಿಂತು
ಯುಗದ ಸಡಗರವ ಬಯಸಿದ
ಬಾಳಿನಾಚೆಯ ಬೀದಿಯಲಿ ತಾ ಕುಳಿತು
ನಾಳೆಯನರಿವನು ಬೋಧಿಸಿದ
ಕೊಡಲಿ ಏಟಲಿ ಕತ್ತರಿಸಿಕೊಂಡ ತುದಿಯ
ಒಡಲನೋವನು ನುಂಗಿದ
ಬಳಲುತ್ತಿದ್ದ ದಾರಿಹೋಕನಲ್ಲಿ
ಧರೆಯ ಕ್ಷಮೆಯನು ಕೋರಿದ
ನೋವು ನಲಿವಿನ ಕೋಟಿ ಬೀಜವ
ಎಲ್ಲರೆದೆಯಲು ಬಿತ್ತಿದ
ಅಳಲು ತೋಡಿಕೊಂಡ ಮನದಲಿ
ಬೇವು ಬೆಲ್ಲವ ಹಂಚಿದ.
**
*ಸುರೇಶ ಎಲ್.ರಾಜಮಾನೆ, ಲಿಂಗಸಗೂರು*
**************************************
*ವಿದಾಯದ ಘಳಿಗೆ..*
ಯುಗಾದಿಗೆ ಹೊಸ ನೆನಪು ಜೋಡಿಯಾಗಿದೆ
ಕಣ್ಣ ತುಂಬಿದ ಕನಸು ರಗುತದ ಕೋಡಿಯಾಗಿದೆ
ನೀನಿದ್ದ , ನಿನ್ನ ನೆನಪಿದ್ದ ಬದುಕೀಗ ಬರಿದಾಗಿದೆ
ಹೂ ಚಿಗುರಿ, ಕಾಯಿ ಹಣ್ಣಾಗಿದೆ ನಿಜ ಆದರೆ ಬದುಕು?
ನೀ ಬಿಟ್ಟ ಮರುಕ್ಷಣ ಸಾಯುವ ಮಾತಾಡಿದ್ದೆ 'ಸತ್ತೆನಾ'?
ನಾನು ಬದುಕಿದಂತೆ ಕಾಣುತ್ತೇನೆ ಅಷ್ಟೇ 'ಬದುಕಿಲ್ಲ'
ಬದುಕು ಇಷ್ಟೇ ನೀ ಹೇಳಿದಂತೆ ಹೊಂದಾಣಿಕೆ 'ಮನಸಿನೊಂದಿಗಾ'?
ಮನಸೋ, ದೇಹವೋ ಜೀವಚ್ಛವಗಳ ಕುರಿತು ಚಿಂತಿಸುವರಾದರೂ ಯಾರು?
ಕಾಯುವೆ ಬಿಡು ನೀ ಸಿಗದಿದ್ದರೂ'ಕಾಯುವ ಬದಲು' ಯಾರನೂ ಹುಡುಕಲೂ ಬಹುದು 'ಬದುಕು ವ್ಯಭಿಚಾರ'ವಾಗಲು
ನೀ ಕೊಟ್ಟ ಸಮಸ್ತ ಬದುಕು ಮುಂದೆ ನಿಂತು ಅಣಕಿಸುತಿದೆ
'ನೀ' ಕೊಟ್ಟದ್ದಾದರೂ ಏನೆಂದು?
ಏನೇಳಲಿ 'ಹನಿ ಕಣ್ಣೀರು' ಹನಿಸಿದ್ದೇನಷ್ಟೇ
ದುಖಿಃಸಬೇಡ, ಖಾಲಿ ಒಡಲಲಿ ಕಣ್ಣೀರು ಸುರಿಸಬೇಡ
ನಿನ್ನ ನಿಜ ಪ್ರೇಮಕ್ಕೆ 'ಆರ್ಹನಲ್ಲ' ನಾನು ಮತ್ತು ನನ್ನಿಡೀ ಜಿಂದಗೀ
- ಶರಣಬಸವ. ಕೆ.ಗುಡದಿನ್ನಿ
****************************************
ಉಗಿ ಉಗಿ ಅಂತಾ ಯುಗಾದಿ ಬಂತು
******************************
ಬರದ ಬಿಸಿಲ ಬಿಸಿ ಗಾಳಿ
ಬಿರುಗಾಳಿಯಾಗಿ ಬೀಸುತಿರಲು
ಬಿಸಿಲ್ಗುದುರೆಗಳು ಬೇದರಿ ಓಡುತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು.
ಹಸಿರುಟ್ಟು ಸಿಂಗರಿಸಿಕೊಂಡು
ಕಂಗೊಳಿಸಲು ಕಾಯ್ದ ಭೂತಾಯಿ
ಒಡಲು ಬಾಯಾರಿ ಆಕಾಶದ ಹನಿ
ನೀರಿಗಾಗಿ ಬಾಯಿ ತೆರೆದು ಕಾಯಿತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು.
ನಿತ್ಯವೂ ಬಿಸಿಲ ಬೆಂಕಿಗೆ ಭೂತಾಯಿ
ಮಡಿಲು ಬಿಸಿಯಾಗುತಿರಲು,ಮಡಿಲ
ಮಕ್ಕಳು ಬಿಸಿಲ ಬೇಗಿಗೆ ಬೆಚ್ಚಿ ಬೆಚ್ಚಿ ಬೀಳುತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು .
ಭೂತಾಯಿಯ ಒಡಲ ನಂಬಿದ
ಮಡಿಲ ಮಕ್ಕಳು,ಹನಿ ಹೊತ್ತು ನೆತ್ತಿಯ
ಮೇಲೆ ನಡೆವ ಮೋಡಗಳು ಹನಿಯೊಡೆಯಲೆಂದು ಆಸೆಯಿಂದ ದಿಟ್ಟಿಸುತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು.
ಹಸಿದ ಹಸುಗಳು ನೀರಿಲ್ಲದೆ ನೇಲಕ್ಕುರುಳುತಿರಲು
ರೈತ ರೈಲತ್ತಿ ಊರು ಬಿಡುತಿರಲು,ಹಕ್ಕಿಗಳು ಆಹಾರವಿಲ್ಲದೆ ರೆಕ್ಕೆ ಕಳಚುತಿರಲು,ಸಂಕಟಕೂ ಹನಿ ನೀರು ಹಾಕಲು ನೀರಿಲ್ಲದೆ ನಿತ್ರಾಣಾದ ಭೂತಾಯಿ
ಮುಂದೆ ಉಗಿ ಉಗಿ ಅಂತಾ ಯುಗಾದಿ ಬಂತು .
ಶೇಖರ್. ಎಂ.ಸುರುಪೂರು
*****************************************
ಯುಗಾದಿ
ಬಂದಿತು ಮತ್ತೇ ಯುಗಾದಿ
ತಂದಿತು ನಮಗೆ ಹೊಸ ಹಾದಿ
ಬೇವು ಬೆಲ್ಲ ಪಾಯಸವ ಮಾಡಿ
ಮನೆಯವರೆಲ್ಲರು ಒಡಗೂಡಿ
ಕುಡಿಯೋಣ ಬೇವು ಎಲ್ಲರು ಕೂಡಿ
ಕಳೆಯುವ ಬಾಳನು ಸುಖವಾಗಿ
ಅರಿಯುವ ಯುಗಾದಿ ಸಂದೇಶವ
ಪಡೆಯುವ ಜೀವನ ಸಾರ್ಥಕವ
✍ಅಭಿಷೇಕ ಬಳೆ ಮಸರಕಲ್

"ಯುಗಾದಿ ನಿಮಿತ್ತ ಕವನ ಸ್ಪರ್ಧೆಗಾಗಿ"
ಬಂದೈತಿ ಹಬ್ಬ ಯುಗಾದಿ ಹಬ್ಬ"
(ಕವನದ ಶೀರ್ಷಿಕೆ)
ಬಂದೈತಿ ಹಬ್ಬ ಯುಗಾದಿ ಹಬ್ಬ ತಂದೈತಿ ಏನು ವಿಶೇಷ ಹೇಳಪ್ಪ?
ಎಲ್ಲಿನ ಬಾಳೂ ಅಲ್ಲಿಗೇ ನಿಂತೈತಿ
ಎಲ್ಲಿನ ಗೋಳೂ ಅಲ್ಲಿಗೇ
ನಿಂತೈತಿ ಏನಂತ ಹೊಗಳೂದೂ
ತಿಳೀದಂಗ ಆಗೇತಿ ||ಬಂದೈತಿ ಹಬ್ಬ ಯುಗಾದಿ ಹಬ್ಬ||
ಹ್ವಾದ ವರುಸದ ಹಿಂದ
ಮಾಡಿದ್ದ ಸಾಲ ಈ ವರುಸಾ
ಬಂದಾ ಬುಡ್ತು ಕಣ್ಣು ಮುಚ್ಚಿದ್ದೇ
ಇಲ್ಲ ನೋಡಿದ್ರ ಕೈಯಾಗ
ನಯಾ ಪೈಸಾನೂ ಇಲ್ಲ ಕಣ್ಣು
ಗುಡ್ಡಿ ತಿರುಗಾ ತಿರುಗುತಾವ
ರಕ್ತಾ ಬರುತೈತಾಗ್ಲೀ ನೀರು
ಬರ್ತಿಲ್ಲ ನೀವಾ ಹೇಳ್ರಿ ಈಗ
ಹ್ಯಾಂಗ ತೀರಿಸೋದು ಮಾಡಿದ ಸಾಲ?
ಹ್ಯಾಂಗ ಮಾಡಿ ಉಣ್ಣೂದು ಯುಗಾದಿ ಹಬ್ಬ?
||ಬಂದೈತಿ ಹಬ್ಬ ಯುಗಾದಿ ಹಬ್ಬ||
ನಮ್ ತಾತನ ಕಾಲಕ್ಕ
ಇಲಿಯಾಗಿದ್ದ ಸಾಲ ನನ್ನ
ಟೇಮಿಗೆ ಹುಲಿಯಾಗಿ ಕುಂತಾದ
ಸಾಲದ ಗಂಟು ಕರಗಿಸಲಾಕ
ಮೈಮುರ್ದು ದುಡ್ದ ನಮ್ ತಾತ
ಸಾಲ್ದಾಗೇ ದುಡ್ದೂ ದುಡ್ದೂ
ಕಡಿಗೆ ಸುಣ್ಣಾಗಿ ಸತ್ತೇ
ಹೋದ್ನಂತ ನಮ್ಮವ್ವ ಹೇಳ್ತಿದ್ಲು
ಇದೇ ಸಾಲ್ದಾಗ ಸಾಲ ಮಾಡಿ
ನಮ್ಮಪ್ಪನೂ ಸತ್ನಂತ ನಮ್ಮಮ್ಮ
ಸೆರಗಿನ ಚುಂಗಿಡಿದು
ಕಣ್ಣಿಗೊತಿಕೆಂಡು ಅಳುತಾಳ
ಈಗ್ಲೂ....ನೀವಾ ಹೇಳಿ ಈಗ
ಹ್ಯಾಂಗ ತೀರಿಸೋದು ಮಾಡಿದ ಸಾಲ?
ಹ್ಯಾಂಗ ಮಾಡಿ ಉಣ್ಣೂದು
ಯುಗಾದಿ ಹಬ್ಬ?
||ಬಂದೈತಿ ಹಬ್ಬ ಯುಗಾದಿ ಹಬ್ಬ||
ಮಾಡಿದ ಸಾಲ ಹೆಂಗರ
ತೀರಿಸಬೇಕಂತ ಹೊಲ ಹಸನು
ಮಾಡಿ ಗದ್ದಿ ಮಾಡಿದ್ದೆ ಒಂದು
ಫಸಲು ಬಂದಿದ್ರ
ತೆಗದಾಬುಡುತಿದ್ದೆ ಸಾಲದ
ರೊಕ್ಕ ಬಂದ್ಹಾಂಗ ಬಂದು ಮಳೆ
ಮೋಡದಾಗೇ ಇಂಗ್ಹೋಯ್ತು
ನಮ್ ಕಣ್ಣಿಗೆ ಮಾತ್ರ ಕಣ್ಣೀರೇ
ಮಿಗಿಲಾಯ್ತು ನೀವಾ ಹೇಳಿ
ಈಗ ಹ್ಯಾಂಗ ತೀರಿಸೋದು
ಸಾಲ?
ಹ್ಯಾಂಗ ಮಾಡಿ ಉಣ್ಣೂದು
ಯುಗಾದಿ ಹಬ್ಬ?
||ಬಂದೈತಿ ಹಬ್ಬ ಯುಗಾದಿ ಹಬ್ಬ||
ಯುಗಾದಿ ಹಬ್ಬ ಅಂದ್ರ ಬೇವು-
ಬೆಲ್ಲ ಅಂತಾರ ಶಾಸ್ತ್ರಕ್ಕ ನಮ್
ಬದುಕಿನ ಬವಣಿ ಕೇಳಿದವ್ರು
ನೀವಾ ಹೇಳಬೇಕು ಅದು
ಹ್ಯಾಂಗ ಮಾಡಿ ಉಣ್ಣೂದು
ಯುಗಾದಿ ಹಬ್ಬ ಅಂತ?
||ಬಂದೈತಿ ಹಬ್ಬ ಯುಗಾದಿ ಹಬ್ಬ||
-ವೇಣು ಜಾಲಿಬೆಂಚಿ ರಾಯಚೂರು
*********************************
ಮತ್ತೆ ಬಂದಿತು ಯುಗಾದಿ...
ಹೊಸ ವರುಷಕೆ ಹೊಸ ಹರುಷದಿ
ಹೊಸ ಬೆಳಕೊಂದು ಭೂಮಿಗೆ ಬಂದು ತಾಗಿರಲು ಈ ಮನವ
ಅವಳ ನೆನಪುಗಳ ಹೂಮಳೆಯ ಹೊತ್ತ
ಜೋಕಾಲಿಯು ಜೀಕುತ ಜೀಕುತ
ಮತ್ತೆ ಬಂದಿತು ಯುಗಾದಿ ನನ್ನ ಬಾಳಿಗೆ ..
ಹೊಸ ಚೈತನ್ಯವ ತುಂಬುತ ನನ್ನ ನಾಳೆಗೆ !!
ಮುಗ್ಧ ನಗುವು ,ಸ್ನಿಗ್ಧ ಚೆಲುವು ,
ಬಳ್ಳಿಯಂತೆ ಬಳುಕೋ ಅಂಗ ..
ಹೃದಯ ಮಾತೃ ಹೂವಿನಂಗ ..!!
ಚಿಗುರೊಡೆದ ಹಸಿರಿನಂಗ ...
ಮೋಡವೊಂದು ಮಳೆಯ ಸುರಿದಂಗ,
ಸುರಿವ ಮಳೆಗೆ ಪುಟ್ಟ ನವಿಲೊಂದು ಕುಣಿದಂಗ ..
ಕುಣಿವ ನಾಟ್ಯಕೆ ಮನವು ತಣಿದಂಗ..!!
ಹಸಿರುಟ್ಟ ಭೂದೇವಿಯು ಸಂತೋಷದಿ ನಕ್ಕಂಗ ..
ತಳಿರು - ತೋರಣವ ಹೊತ್ತು ತಂದಂಗ..!!
ಬೇವಿನ ಕಹಿಯ ಮರೆಸಿದಂಗ ..
ಬೆಲ್ಲದ ರುಚಿಯ ಸವಿದಂಗ ..!!
ಬೆಳದಿಂಗಳು ನನ್ನ ಮನೆಯೊಳಗೆ ಬಂದಂಗ ,
ನನ್ನ ಮನವನ್ನು ಸಿಂಗರಿಸಿದಂಗ
ನಿನ್ನೆಯ ಕನಸುಗಳು ನಾಳೆಗೆ ನನಸಾದಂಗ ..!!
ಮತ್ತೆ ಬಂದಿತು ಯುಗಾದಿ ನನ್ನ ಬಾಳಿಗೆ ..
ಹೊಸ ಚೈತನ್ಯವ ತುಂಬುತ ನನ್ನ ನಾಳೆಗೆ ..!!!
ರಮೇಶ್ ನಾರಾಯಣಪುರ
ಪೋಲೀಸ್ ಇಲಾಖೆ
ಕಲಬುರಗಿ..
೪-೪-೧೯
*********************************"********
ಬಾ ಯುಗಾದಿ ಮತ್ತೆ
ವರದೇಂದ್ರ.ಕೆ ಮಸ್ಕಿ
ಸರಪಳಿಯ ಬಿಡಿಸುವ ಮೊನಚಂತೆ
ಹರಿದ ಸೂತ್ರಕೆ ನೂತನ ಬದುಕು ಕಟ್ಟೋಕೆ
ಮುರಿದ ಚಕ್ರಕೆ ಉರುಳೊ ಹೆಗಲಾಗಿ
ಆದ ನಷ್ಟಕೆ ಗೆಲುವಾಗಿ
ಬಾಡಿದ ಟೊಂಗೆಯಲಿ ಟಿಸಿಲೊಡೆದು
ಅರಿವಿಲ್ಲದ ಬೀಜದೊಳಗೆ ಭರವಸೆಯ ಬೇರಾಗಿ
ಬಾ ಯುಗಾದಿ ಮತ್ತೆ
ಕಲ್ಲೊಳಗೆ ಹುಟ್ಟುವ ಸಸಿಯ ವಿಶ್ವಾಸ
ಕಾರ್ಮೋಡದೊಳಗಿನ ಜೀವಹನಿ
ಭುಗಿಲೆದ್ದ ಆಕ್ರೋಶದ ಕೆಂಗಣ್ಣಿನಲಿ
ನಿರಮ್ಮಳ
ಉದ್ವೇಗದಿ ತಲ್ಲಣಿಸೊ ತನುವಿಗೆ ತಂಪಾಗಿ
ಬಿಸಿಲ ಝಳಕೆ ಕಪ್ಪಾದ ರೈತನ ಕಣ್ಣಿಗೆ ಹಸಿರಾಗಿಚ
ಬಾ ಯುಗಾದಿ ಮತ್ತೆ
ವಿಧವೆ ಪಟ್ಟಕೆ ಚಟ್ಟ ಕಟ್ಟು
ಬಂಜೆ ಒಡಲಲಿ ಬಸಿರಾಗಿ
ಬಂಜರು ನೆಲದಿ ಮೊಳಕೆ ಘಟ್ಟಿ ನೆಲವ ಸೀಳಿಬಿಡುವ ಅಗಾಧ ಬಲವಾಗಿ
ಶಕ್ತಿಹೀನ ತನುವಲಿ ಚೈತನ್ಯದುರಿಯಾಗಿ
ಹುಳಿ ಹಿಂಡುವ ಹೃದಯದಿ ಸಿಹಿಯಾಗಿ
ಬೇವಿನೊಳಗಿನ ಕಹಿಗೆ ಬೆಲ್ಲದ ನಂಟಾಗಿ
ಬದುಕ ತೋರುವ ಬೆವರಿಗೆ ಛಲದ ಸೆಲೆಯಾಗಿ
ಬಾ ಯುಗಾದಿ ಮತ್ತೆ
ಕ್ಷೀಣಿಸುತ್ತಿರುವ ಹಕ್ಕಿ ಕುಲಕೆ
ಅವಸಾನದಂಚಿನ ಮೃಗಗಳಿಗೆ
ಸಂತಾನದ ಯುಗಾದಿ
ಅಂಕಗಳಲ್ಲಿ ಸೋತ ಓದುಗ ಮನಗಳಗೆ
ಜ್ಞಾನದ ಯುಗಾದಿ
ಹಣದಿಂದ ಬಲಿತ ಪ್ರೀತಿವಂಚಿತಗೆ
ಒಲವಿನ ಯುಗಾದಿ
ಪ್ರೇಮ ವೈಫಲ್ಯದ ಹೃದಯಕೆ ವಿಫುಲ
ಅನುರಾಗದ ಯುಗಾದಿ
ಆದಿಯಾಗಿ ಅನಾದಿಯಾಗಿ ಪ್ರತಿ ಕ್ಷಣ ಕ್ಷಣಕೂ
ಕಹಿಯೊಳಗಿನ ಔಷಧಿಗುಣವಾಗಿ
ಬಾ ಯುಗಾದಿ
ಬಾ ಯುಗಾದಿ ಮತ್ತೆ
ವರದೇಂದ್ರ ಕೆ
************************************
ಯುಗದ ಯುಗಾದಿಗೆ ದ್ವೇಷದ ಎಲೆ ಉದುರಲಿಲ್ಲ !
**********************
ಯುಗ ಯುಗಗಳಿಂದ ಮಲೆಯ ಹೂ ಗಿಡ ಮರ ಬಳ್ಳಿಗಳೇಲ್ಲಾ ಎಲೆ ಉದುರಿಸಿ ಹೂ ಕಾಯಿಗಳಾಗಿ ಮಲೆಗೆ ಎಲೆ ಹೂವುಗಳ ತೋರಣಕಟ್ಟಿ ಸುಗಂಧದ
ಸುಂದರ ತಂಗಾಳಿಯ ಬೀಸುತ್ತಲಿವೆ.!
ಯುಗ ಯುಗಗಳ ಯುಗಾದಿಗೆ ಮಲೆಯು
ಮದುವಣಗಿತ್ತಿಯಂತೆ ಸಿಂಗಾರಗೊಂಡು
ಹಸಿರ ಸೆರಗೊತ್ತು ಬಗೆ ಬಗೆಯ ಹೂ ಮುಡಿದು
ಕೈ ಬೀಸಿ ಕರೆಯುತಿರಲು ಮಲೆಯ ಮದ್ಯ ಝೈಂಕರಿಸುವವು ದುಂಬಿಗಳು, ಅನುರಾಗದ
ಆನಂದದ ಕಲರವದಲಿ ಹಕ್ಕಿ ಪಕ್ಷಿಗಳು.
ಯುಗ ಯುಗಗಳ ಯುಗಾದಿಗೆ ಅರಳಿ ನಿಂತ
ಬೇವು ಮಾವಗಳ ಸುಖ ಸೌಂದರ್ಯಕ್ಕೆ
ಮುಂಜಾವಿನ ಕೆಂಪು ಕಿರಣಗಳು ಮುತ್ತಿಕ್ಕುತಾ ಮೈ ಮರೆತು ರಂಗೇರಿರಲು ಕೋಗಿಲೆ ತಂಪಲ್ಲಿ ಇಂಪಾಗಿ
ಕೂಗಲು ವಿರಹದಿ ದೂರ ಸರಿಯುವ ಸೂರ್ಯ
ದಗೆ ದಗಿಸುವನು ಸಂಜೆಯ ಸಂಧ್ಯಾ ಕಾಲದವರೆಗೆ .
ಯುಗ ಯುಗಗಳಿಂದ ಯುಗಾದಿಗೆ ಗಿಡ ಮರ
ಬಳ್ಳಿಗಳು ಎಲೆ ಉದುರಿಸಿ ಕೊಳೆ ತೊಳೆದುಕೊಳ್ಳುತಿರಲು,ಮನುಷ್ಯ ಮಾತ್ರ ಮತ್ಸರ,ದ್ವೇಷ ,ಅಸೂಯೆಯ ಎಲೆ ಕಳಚಿ ಪ್ರೀತಿ
ಪ್ರೇಮದ ಎಲೆ ಹೂ ಬಿಡುತ್ತಲೇ ಇಲ್ಲ!
ಯುಗ ಯುಗಗಳಿಂದ ಯುಗಾದಿಗೆ ಪ್ರಕೃತಿ
ಪ್ರೇಮದ ಪಾಠ ಹೇಳುತಲಿದ್ದರು,ಮನುಷ್ಯ
ಕಲಿಯಲಿಲ್ಲ, ಬದುಕಲಿ ಪ್ರೇಮದ ಹೂ ಬಿಡದೆ
ಕೊಪತಾಪದ ಬೆಂಕಿಯಲಿ ಬೇಯ್ಯುತಲಿರುವನು
ಕಲಿಯಬೇಕಿದೆ ಮನುಷ್ಯ ಪ್ರೇಮದ ಹೂ ಬಿಡುವುದ

ಹಸಿರ ಸೀಮಂತ
ಯುಗದ ಆದಿ ಯುಗಾದಿ
ಭುವಿಗೆ ಇನ್ನು ಹೊಸ ಕಾಂತಿ
ಹಸಿರ ಹೊತ್ತ ಗಿಡಮರಗಳು
ಹಾತೊರೆದು ಕಾಯುತಿವೆ
ನವ ಯುಗದ ಸ್ವಾಗತಕೆ.
ಕೋಗಿಲೆಗಳ ಇಂಚರದ
ಮಂಗಳಕರ ನಾದದಲಿ
ಭೂರಮೆಯು ಕೈ ಬೀಸಿ
ಕರೆಯುವಳು ನಮ್ಮನೆಲ್ಲ
ಹೊಸ ವರುಷದ ಹೊನಲಿಗೆ.
ಚೈತ್ರದಲಿ ಚಿಗುರೊಡೆದು
ಹೊಸ ಜನ್ಮವ ತಾ ತಳೆದು
ಹಸಿರಲ್ಲಿ ಮೊಗ್ಗಾಗಿ
ಮೊಗ್ಗುಗಳೆಲ್ಲ ಹೂವಾಗಿ
ಮಡಿಲಲ್ಲಿ ಫಲವ ಹೊತ್ತಿಹಳು .
ಹೆಣ್ಣೊಂದು ಬಸಿರಾಗಿ
ಸೀಮಂತಕೆ ಅಣಿಯಾದಂತೆ
ಹಸಿರೆಲ್ಲ ಬಸಿರಾಗಿ ನಿಂತು
ಸೀಮಂತ ತನಗೂ ಬೇಕೆಂದಿದೆ
ಈ ಯುಗಾದಿ ದಿನದಂದೇ.
ಸಹೋದರೆಲ್ಲ ಸೇರಬನ್ನಿ
ಸಹೋದರಿಯರನ್ನ ಜೊತೆ ಕರೆತನ್ನಿ
ಜಾತಿ , ಧರ್ಮ. ಭಾಷೆಗಳ ಭೇದ ತೊರೆದು
ಮಾಡೋಣ ಸೀಮಂತ ನಾವೆಲ್ಲ
ಫಲ ಹೊತ್ತ ಹಸಿರ ಸಿರಿ ದೇವಿಗೆ .
ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ
******************************************
ಬಂತು ಯುಗಾದಿ
ಯುಗಾದಿ ಬಂತು ಹರುಷ ತಂತು
ಹೊಸ ಬದುಕಿನ ಹೊಸಗಾನಕೆ
ನಿಸರ್ಗ ಚೆಲುವ ಹೊಮ್ಮಿ ಬಂತು
ಹೊಸ ವರುಷದ ಹೊಸ ಸೃಷ್ಟಿಗೆ ||
ಸೃಷ್ಟಿ ಸೊಬಗು ಮನ ಸೆಳೆದಿದೆ
ಚಿಗುರು ಮೂಡಿ ಹಸಿರು ಚಿಮ್ಮಿದೆ
ಮಾವು ಬೇವು ಹೂವು ಕಾಯಿ
ಯುಗಾದಿ ಮಂತ್ರ ಜಪಿಸುತಿವೆ ||
ಮಾವು ಬೇವು ಒಂದುಗೂಡಿ
ಹೊಸ ಬದುಕಿಗೆ ಮೋಡಿ ಮಾಡಿವೆ
ಸುಖ ದುಃಖ ದ ಸಮ ಪ್ರಸಾದ
ಪ್ರತಿಜೀವಿಗೂ ಯುಗಾದಿ ನೀಡಿದೆ ||
ಮೊದಲ ಮಳೆಗೆ ಚಿಮ್ಮಿ ಬಂತು
ಎಲ್ಲೆಡೆಯೂ ಹಸಿರು ತೋರಣ
ಚೈತ್ರಗಾನ ಹಾಡಿ ನಲಿಯಲಿಂದು
ಕೋಗಿಲೆಗೆ ದ್ವನಿಯು ಮೂಡಿದೆ ||
ಬಾ ಯುಗಾದಿ ಬವಣೆ ನೀಗು
ಬರಡು ನೆಲದಿ ಹಸಿರ ನೀಡು
ಮೇಲು ಕೀಳು ಎಲ್ಲ ಕಳೆದು
ಸುಖ ದುಃಖ ಸಮರ ಸಾರು ||
ಸ್ವಾರ್ಥಿ ಮನುಜ ಇಳೆಯ ತನುಜ
ಅರಿಯಲಿಂದು ಪೃಥ್ವಿ ಮಹಿಮೆ
ಆಯುರಾರೋಗ್ಯ ಎಲ್ಲ ಪಡೆದು
ಅರಿವು ಜಗದಿ ಯುಗಾದಿ ತರಲಿ ||
=> ವೆಂಕಟೇಶ ಚಾಗಿ
ಲಿಂಗಸುಗೂರ

********************************
"ನಲಿವು ಮತ್ತೆ ಚಿಗುರಲು
ಬರುತಿದೆ ಯುಗಾದಿ"
ಬರುತಿದೆ ಯುಗಾದಿ
ಬೇಕು-ಬೇಡದ ಸಂಬಂಧಗಳ
ಮಧ್ಯೆದಲ್ಲಿ ಸಿಲುಕಿ
ಇರಲಾರದೆ,ಹೊರಬರಲಾರದೆ
ಚಡಪಡಿಸುತ್ತಿರುವ ಮನಗಳಿಗೊಂದಿಷ್ಟು
ಸಾಂತ್ವಾನ ಹೇಳಲು
ಬರುತಿದೆ ಯುಗಾದಿ
ಬರುತಿದೆ ಯುಗಾದಿ
ಯುಗಗಳು ಅರಿವಿಲ್ಲದೆ ಕಳೆಯುತಿವೆ
ಮೈ-ಮನೆಗಳಷ್ಟೆ ಶೃಂಗಾರಗೊಳ್ಳುತ್ತಿವೆ
ಮನಸುಗಳ ಬಣ್ಣ ಮಾಸಿವೆ
ಮಾಸಿದ ಮನಗಳಿಗೊಂದಿಷ್ಟು
ಕಲರವಗಳ ರಂಗು ಕೊಡಲು
ಬರುತಿದೆ ಯುಗಾದಿ
ಬರುತಿದೆ ಮತ್ತೆ ಮತ್ತೆ ಯುಗಾದಿ
ಬೆಲ್ಲದಲ್ಲಿ ಬೇವನ್ನು ಬೆರೆಸಲಲ್ಲ
ಸಿಹಿಯಲ್ಲಿ ಕಹಿಯನ್ನು ಮರೆಸಲು
ನಗುವಿನ ಕಂಕುಳಲ್ಲಿ ನೋವಿನ
ಕಂದಮ್ಮನನ್ನು ಮುಚ್ಚಿಡಲು
ಬರುತಿದೆ ಯುಗಾದಿ
ಈಗಲೂ ಬರುತಿದೆ ಯುಗಾದಿ
ಕತ್ತರಿಸಿದಷ್ಟು ಚಿಗುರುವ ಚಿಗುರಿನಂತೆ
ಪ್ರತಿತುತ್ತಿನಲ್ಲು ನೋವುಂಡರು
ನಲಿವಿನ ಸಿಹಿಯ ಹಂಚಲು
ಆತ್ಮಸ್ಥೈರ್ಯದ ಬೇವು ಕುಡಿಸಿ
ಮನಗಳನ್ನು ಗಟ್ಟಿಯಾಗಿಸಲು
ಈಗಲೂ ಬರುತಿದೆ ಯುಗಾದಿ
ಮುಂದೆಯು ಬರುವುದು ಯುಗಾದಿ
ಮೈ-ಮನಗಳ ಕೊಳೆ ತೊಳೆದು
ತಳಿರು-ತೋರಣದ ಕಳೆ ಕಟ್ಟಿ
ಸಡಗರ-ಸಂಭ್ರಮದ ಮಳೆ ಸುರಿಸಿ
ನವ ಚೇತನದ ಬೆಳೆ ಬೆಳೆಯಲು
ಬರುತಿದೆ ಯುಗಾದಿ
ಬರುತಲಿರುವುದು ಮತ್ತೆ ಮತ್ತೆ ಯುಗಾದಿ
ವಿಜಯಲಕ್ಷ್ಮಿ.ಅಮರೇಗೌಡ.ಪಾಟೀಲ

Subscribe to:
Posts (Atom)
LBA Question papers | orders | formats | vktworld
👉 LBA ORDERS ಆದೇಶಗಳು 👉 Question papers Header Cell Cell ...

-
ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು | 👉ವಿಜಯವಾಣಿ ಓದುಗರ ವೇದಿಕೆಗೆ ...
-
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್ ಸಚೇ...
-
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್...