Wednesday, 30 April 2025

ಸೇತುಬಂಧ ಏಕೆ ಹೇಗೆ - Setubandha what ? Why ?



ಹಿಂದಿನ ತರಗತಿಯಿಂದ ಉತ್ತೀರ್ಣರಾಗಿ ಬಂದ ವಿದ್ಯಾರ್ಥಿಗಳಲ್ಲಿ ಈಗಿನ ತರಗತಿಯ ಕಲಿಕೆಗೆ ಬೇಕಾದ ಕನಿಷ್ಠ ಸಾಮರ್ಥ್ಯ ಅಥವಾ ಕಲಿಕಾಂಶಗಳು ಎಷ್ಟರ ಮಟ್ಟಿಗೆ ಇವೆ..? ಎಂಬುದನ್ನು ದೃಢೀ ಪಡಿಸಿಕೊಳ್ಳುವ ಚಟುವಟಿಕೆಯ ಜೊತೆಗೆ ಈಗ ಕಲಿಯುತ್ತಿರುವ ತರಗತಿಗೆ ಬೇಕಾದ ಸಾಮರ್ಥ್ಯ ಅಥವಾ ಕಲಿಕಾಂಶಗಳನ್ನು ಸಿದ್ಧಗೊಳಿಸುವ ಚಟುವಟಿಕೆ ಸೇತುಬಂಧ ಕಾರ್ಯಕ್ರಮ.


ಸೇತುಬಂಧ ಕಾರ್ಯಕ್ರಮದಲ್ಲಿ ಒಟ್ಟು ಆರು ಹಂತಗಳು ಇವೆ

1) ನೈದಾನಿಕ ಪರೀಕ್ಷೆ ಅಥವಾ ಪೂರ್ವ ಪರೀಕ್ಷೆ

2) ಉತ್ತರಗಳ ವಿಶ್ಲೇಷಣೆ

3) ದೋಷ ನಿಧಾನ

4) ಪರಿಹಾರ ಬೋಧನೆ ಮತ್ತು ಅದರ ಯೋಜನೆ

5) ಸಾಪಲ್ಯ ಪರೀಕ್ಷೆ

6) ಉತ್ತರಗಳ ವಿಶ್ಲೇಷಣೆ

7) ಪರಿಹಾರ ಬೋಧನೆ


1) ನೈದಾನಿಕ ಪರೀಕ್ಷೆ ಅಥವಾ ಪೂರ್ವ ಪರೀಕ್ಷೆ

ವಿದ್ಯಾರ್ಥಿಯು ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ತರಗತಿಯ ಕಲಿಕೆಗೆ ಅವಶ್ಯವಾಗಿ ಬೇಕಾದ ಸಾಮರ್ಥ್ಯ ಅಥವಾ ಕಲಿಕಾಂಶಗಳು ವಿದ್ಯಾರ್ಥಿಯಲ್ಲಿ ಎಷ್ಟರಮಟ್ಟಿಗೆ ಸಾಧನೆಯಾಗಿದೆ ಎಂಬುದನ್ನು ಪತ್ತೆ ಹಚ್ಚುವ ಹಂತವಿದು ಪ್ರಸಕ್ತ ತರಗತಿಯ ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿ ಗಳಿಸಿರಬೇಕಾದ ಕನಿಷ್ಠ ಸಾಮರ್ಥ್ಯ ಅಥವಾ ಕಲಿಕಾಂಶಗಳ ಪಟ್ಟಿ ಇದ್ದು ಕನಿಷ್ಠ 10 ಸಾಮರ್ಥ್ಯಗಳ ಕಲಿಕೆಯನ್ನು ಪರೀಕ್ಷಿಸಲು ಒಂದು ಪ್ರಶ್ನೆ ಪತ್ರಿಕೆ ರಚನೆ ಮಾಡಬೇಕಾಗುತ್ತದೆ ಮೌಖಿಕ ಪರೀಕ್ಷೆಗೂ ಇದರಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಇಂತಿಷ್ಟೇ ಪ್ರಶ್ನೆಗಳಿರಬೇಕೆಂಬ ನಿರ್ಬಂಧ ಇರುವುದಿಲ್ಲ ಅಂಕಗಳ ಆಧಾರದಿಂದ ರಚನೆ ಆಗಿರುವುದಿಲ್ಲ ನೈದಾನಿಕ ಪರೀಕ್ಷೆ ಮಟ್ಟದ್ದೆ ಇನ್ನೊಂದು ಪ್ರಶ್ನೆ ಪತ್ರಿಕೆ ರಚಿಸಿಕೊಳ್ಳಬೇಕಾಗುತ್ತದೆ.


2) ಉತ್ತರಗಳ ವಿಶ್ಲೇಷಣೆ

ಉತ್ತರಗಳ ವಿಶ್ಲೇಷಣೆಯಲ್ಲಿ ಪ್ರತಿ ವಿದ್ಯಾರ್ಥಿಯು ಸರಿ ಉತ್ತರ ವೇಷ್ಟು ತಪ್ಪು ಉತ್ತರವೆಷ್ಟು ದಾಖಲಿಸಿದ್ದಾನೆ ಎಂಬುದನ್ನು ದಾಖಲಿಸಬೇಕು ವಿಶ್ಲೇಷಣೆಯಲ್ಲಿ ಸರಿಯುತ್ತರ ಗಳಿಗೆ ಎ ಎಂದು ತಪ್ಪು ಉತ್ತರಗಳಿಗೆ ಬಿ ಎಂದು ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸಬೇಕು


3) ದೋಷ ನಿಧಾನ

ವಿಶ್ಲೇಷಣೆ ಬಳಿಕ ಪ್ರತಿ ವಿದ್ಯಾರ್ಥಿಯ ಕಲಿಕಾ ದೋಷಗಳನ್ನು ಅಥವಾ ಕಲಿಕೆಯಲ್ಲಿರುವ ಕೊರತೆಗಳನ್ನು ಪತ್ತೆ ಹಚ್ಚುವ ಅಂತವೇ ದೋಷ ನಿಧಾನ


4) ಪರಿಹಾರ ಬೋಧನೆ ಮತ್ತು ಅದರ ಕಾರ್ಯ ಯೋಜನೆ

ವಿದ್ಯಾರ್ಥಿಗಳಲ್ಲಿರುವ ಕಲಿಕಾ ಕೊರತೆಯನ್ನು ನೀಗಿಸುವ ಪ್ರಕ್ರಿಯೆ ಪರಿಹಾರ ಬೋಧನೆ ವಿದ್ಯಾರ್ಥಿಗಳು ಯಾವ ಕಲಿಕಾಂಶಗಳಲ್ಲಿ ಕೊರತೆಯನ್ನು ಹೊಂದಿದ್ದಾರೆಯೋ ಆ ಕೊರತೆಯನ್ನು ನೀಗಿಸುವ ಸಲುವಾಗಿ ಅದಕ್ಕೆ ಪೂರಕವಾದ ಯೋಜನೆಯನ್ನು ತಯಾರಿಸಿ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಪರಿಹಾರ ಬೋಧನೆಯನ್ನು ಕೈಗೊಳ್ಳಬೇಕು


5) ಸಾಪಲ್ಯ ಪರೀಕ್ಷೆ

ಪರಿಹಾರ ಬೋಧನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ತಿಳಿಯುವ ಅಂತವೇ ಸಾಪಲ್ಯ ಪರೀಕ್ಷೆ ನೈದಾನಿಕ ಪರೀಕ್ಷೆ ಸಮಯದಲ್ಲಿ ರಚಿಸಿಕೊಂಡಿದ್ದ ಮತ್ತೊಂದು ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ಬಳಸಬಹುದಾಗಿದೆ ಕಲಿಕಾ ಕೊರತೆ ಇಲ್ಲದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಮಾಡಬಾರದು


6) ಉತ್ತರಗಳ ವಿಶ್ಲೇಷಣೆ

ಉತ್ತರಗಳ ವಿಶ್ಲೇಷಣೆಯಲ್ಲಿ ಪ್ರತಿ ವಿದ್ಯಾರ್ಥಿಯ ಸರಿ ಉತ್ತರ ವೇಸ್ಟು ಮತ್ತು ತಪ್ಪು ಉತ್ತರಗಳೇ ಎಷ್ಟು ಎಂಬುದನ್ನು ದಾಖಲಿಸಬೇಕು ವಿಶ್ಲೇಷಣೆಯಲ್ಲಿ ಸರಿ ಉತ್ತರಗಳಿಗೆ ಎಂದು ತಪ್ಪು ಉತ್ತರಗಳಿಗೆ ಬಿ ಎಂದು ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸಬೇಕು


7) ಪರಿಹಾರ ಬೋಧನೆ


ಸಾಪಲ್ಯ ಪರೀಕ್ಷೆಯ ನಂತರವೂ ಕೆಲವು ಮಕ್ಕಳು ನೀರಿಕ್ಷಿತ ಮಟ್ಟ ತಲುಪದೇ ಇರುವ ಮಕ್ಕಳನ್ನು ಗುರುತಿಸಿ ದೈನಂದಿನ ಕಲಿಕಾ ಚಟುವಟಿಕೆಗಳಲ್ಲಿ ಅವರಿಗೆ ವಿಶೇಷ ಗಮನ ನೀಡಬೇಕು ಹಾಗೂ ಮಕ್ಕಳು ಯಾವ ಕಲಿಕಾಂಶಗಳಲ್ಲಿ ಕೊರತೆ ಹೊಂದಿದ್ದಾರೆ ಎಂಬುದನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ಪೂರಕವಾದ ಯೋಜನೆಯನ್ನು ತಯಾರಿಸಿಕೊಂಡು ದೈನಂದಿನ ಕಲಿಕಾ ಚಟುವಟಿಕೆಗಳಲ್ಲಿ  ಕೊರತೆಯಾದ ಕಲಿಕಾಂಶಗಳಲ್ಲಿ ಸಾಮಾನ್ಯ ಹೊಂದುವುದಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು




ಸೇತುಬoಧ - ಕಾರ್ಯಕ್ರಮ

 ಏಕೆ? ಹೇಗೆ?
ಹಂತಗಳು
ಸೇತುಬಂಧ ಸಾಹಿತ್ಯಅಗತ್ಯ ನಮೂನೆ ಗಳು ಕಲಿಕಾ ಫಲಗಳು
ತರಬೇತಿ ಅಂಶಗಳು ಮಾದರಿ ಗಳುಅಗತ್ಯ ಸಲಹೆಗಳು2ನೇ ವರ್ಗ 
ಸೇತುಬಂಧ
3ನೇ ವರ್ಗ 
ಸೇತುಬಂಧ
 4ನೇ ವರ್ಗ 
ಸೇತುಬಂಧ
5ನೇ ವರ್ಗ 
ಸೇತುಬಂಧ
6ನೇ ವರ್ಗ 
ಸೇತುಬಂಧ
7ನೇ ವರ್ಗ 
ಸೇತುಬಂಧ
8ನೇ ವರ್ಗ 
ಸೇತುಬಂಧ
9ನೇ ವರ್ಗ 
ಸೇತುಬಂಧ
10ನೇ ವರ್ಗ 
ಸೇತುಬಂಧ

No comments:

Ek ped maa ke naam program

  1st std  -   2nd std  -  3rd std  -   4th std  -  5th std  -   6th std  -  7th std  -   8th std  -  9th std  -   10th std   Click here for...