ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

Monday, 28 October 2019

Kmpo5 - ಗಜಲ್ - ಒಂದಿಷ್ಟು ಮಾಹಿತಿ

ಗಜಲ್ ಎಂದರೇನು?

(ವಾಟ್ಸ್ಯಪ್ ಕೃಪೆ)

ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಅವರ ಕೃತಿಯಲ್ಲಿ ಇದರ ಪ್ರಸ್ತಾಪವಿದೆ. ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ನಾನು ಇವುಗಳಲ್ಲಿ ಕೆಲವನ್ನು ಗಜಲಿನ ವಸ್ತುಗಳನ್ನಾಗಿ ಬಳಸಿಕೊಂಡಿದ್ದೇನೆ.

ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸಮರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.

-೩-

ಗಜಲ್‌ನ ರಚನೆ : ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ.

ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲಿನಲ್ಲಿ ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ)ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗಜಲಿನ ಒಂದು ಚರಣಕ್ಕೆ ಮಿಸ್ರ ಎನ್ನುತ್ತಾರೆ. ದ್ವಿಪದಿಗೆ ಷೇರ್ ಎನ್ನುತ್ತಾರೆ.

ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ  ಎನ್ನುತ್ತಾರೆ. ಇದರ ಎರಡೂ ಚರಣಗಳಲ್ಲಿ ಕಾಫಿಯ ಮತ್ತು ರದೀಫ್ ಈ ಎರಡೂ ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.

ಕಾಫಿಯ: ಇದು ಒಂದು ಪ್ರಾಸ. ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ. ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣಗಳ ಮತ್ತು ಇನ್ನುಳಿದ ದ್ವಿಪದಿಗಳ ಎರಡನೆಯ ಚರಣದ ಅಂತ್ಯದಲ್ಲಿ ಪುನ: ಪುನ: (ಸ್ಥಾಯಿಯಾಗಿ ಅಲ್ಲ) ಬರುವುದಕ್ಕೆ ಕಾಫಿಯ ಎನ್ನುತ್ತಾರೆ. ಸ್ಥಾಯಿಯಾಗಿ ಅಂದರೆ ಬಂದ ಶಬ್ದವೆ ಬರಬಾರದು ಎಂದರ್ಥ. ಆದರೆ ಆ ಶಬ್ದಕ್ಕೆ ಬೇರೆ ಬೇರೆಯಾದ ಅರ್ಥವಿದ್ದರೆ ಅದನ್ನು ಬಳಸಬಹುದು. ಉದಾಹರಣೆಗೆ ತುಂಬಿ : ಇದಕ್ಕೆ  ಎರಡು ಅರ್ಥಗಳಿವೆ. ಪೂರ್ಣವಾಗಿ ಮತ್ತು ಭ್ರಮರ. ಹೀಗೆ ಬೇರೆ ಬೇರೆಯಾದ ಅರ್ಥವಿರುವ ಶಬ್ದಗಳನ್ನು ಬಳಸಬಹುದು.

ರವಿ ಎಂಬುದು ಕಾಫಿಯಾದಲ್ಲಿ ಬಹಳ ಮುಖ್ಯವಾದುದು. ಕಾಫಿಯಾದ ನಿಜವಾದ ಮತ್ತು ಕೊನೆಯದಾದ ಅಕ್ಷರಕ್ಕೆ ರವಿ ಎನ್ನುತ್ತಾರೆ. ಉದಾಹರಣೆಗೆ : ಚಿಗುರು ಮತ್ತು ಅಲರು. ಇವುಗಳಲ್ಲಿ ರು ರವಿಯಾಗಿದೆ. ರವಿ ಕಾಫಿಯಾದ ಬೇರು. ಇದಿಲ್ಲದೆ ಕಾಫಿಯಾ ಆಗುವುದಿಲ್ಲ. (ಚಿಗುರು ಎಂದರೆ ಕುಡಿ, ಮೊಳಕೆ, ಅಲರು ಎಂದರೆ ಹೂವು, ಅರಳು)

ರದೀಫ್: ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ, ಪೂರ್ಣ ಅರ್ಥ ಕೊಡುವ ಶಬ್ದಗಳ ಗುಂಪು ಮತ್ತು ಅಕ್ಷರ; ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ.

ಗಜಲಿಗೆ ರದೀಫ್‌ನ ಅವಶ್ಯಕತೆ ಇಲ್ಲ. ರದೀಫ್ ಇಲ್ಲದ ಗಜಲ್‌ಗಳಿವೆ. ಆದರೆ ಕಾಫಿಯಾ ಮಾತ್ರ ಗಜಲಿಗೆ ಬೇಕೇ ಬೇಕು. ಅನೇಕರು ರದೀಫ್ ಇಲ್ಲದ ಗಜಲ್‌ಗಳನ್ನು ಮೆಚ್ಚುವುದಿಲ್ಲ. ರದೀಫ್‌ನ್ನು ಬಳಸಿದ ಗಜಲ್‌ಗಳಿಗೇ ಹೆಚ್ಚಿನ ಮಾನ್ಯತೆ. ಆದರೆ ರದೀಫ್ ಇಲ್ಲದ ಗಜಲ್‌ಗಳ ಸೃಷ್ಟಿ ಆಗುತ್ತಲೇ ಬಂದಿದೆ.

ಮಖ್ತ: ಗಜಲಿನ ಕೊನೆಯ ದ್ವಿಪದಿಗೆ ಮಖ್ತ ಎನ್ನುತ್ತಾರೆ. ಕವಿ ತನ್ನ ಕಾವ್ಯನಾಮವನ್ನು ಇದರಲ್ಲಿ ಹೇಳಿಕೊಂಡಿರುತ್ತಾನೆ. ಅನೇಕ ವೇಳೆ ಕವಿ ತನ್ನ ಕಾವ್ಯನಾಮವನ್ನೇ ಹೇಳಿರುವುದಿಲ್ಲ. ಹೇಳಬೇಕೆಂಬ ಕಡ್ಡಾಯವೇನೂ ಇಲ್ಲ. ಕೆಲವು ಕವಿಗಳು ಮತ್ಲಾದಲ್ಲಿಯೂ ತಮ್ಮ ಕಾವ್ಯನಾಮವನ್ನು ಹೇಳಿಕೊಂಡಿರುವುದುಂಟು. (ನಾನು ನನ್ನ ಕಾವ್ಯನಾಮವನ್ನು ಸಿದ್ಧ ಎಂದು ಇರಿಸಿಕೊಂಡಿದ್ದೇನೆ).

ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗeಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ.

-೪-

ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯವು ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರದು. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು  ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ.

ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು.

ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ. ಗಜಲ್ ಸಂಕಲನಗಳೂ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಾಗಿವೆ.

ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಅವರ ಕೃತಿಯಲ್ಲಿ ಇದರ ಪ್ರಸ್ತಾಪವಿದೆ.

ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ನಾನು ಇವುಗಳಲ್ಲಿ ಕೆಲವನ್ನು ಗಜಲಿನ ವಸ್ತುಗಳನ್ನಾಗಿ ಬಳಸಿಕೊಂಡಿದ್ದೇನೆ. ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸಮರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.

ಗಜಲ್‌ನ ರಚನೆ : ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ. ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲಿನಲ್ಲಿ ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ)ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗಜಲಿನ ಒಂದು ಚರಣಕ್ಕೆ ಮಿಸ್ರ ಎನ್ನುತ್ತಾರೆ. ದ್ವಿಪದಿಗೆ ಷೇರ್ ಎನ್ನುತ್ತಾರೆ.ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ  ಎನ್ನುತ್ತಾರೆ. ಇದರ ಎರಡೂ ಚರಣಗಳಲ್ಲಿ ಕಾಫಿಯ ಮತ್ತು ರದೀಫ್ ಈ ಎರಡೂ ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.ಕಾಫಿಯ: ಇದು ಒಂದು ಪ್ರಾಸ. ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ. ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣಗಳ ಮತ್ತು ಇನ್ನುಳಿದ ದ್ವಿಪದಿಗಳ ಎರಡನೆಯ ಚರಣದ ಅಂತ್ಯದಲ್ಲಿ ಪುನ: ಪುನ: (ಸ್ಥಾಯಿಯಾಗಿ ಅಲ್ಲ) ಬರುವುದಕ್ಕೆ ಕಾಫಿಯ ಎನ್ನುತ್ತಾರೆ. ಸ್ಥಾಯಿಯಾಗಿ ಅಂದರೆ ಬಂದ ಶಬ್ದವೆ ಬರಬಾರದು ಎಂದರ್ಥ. ಆದರೆ ಆ ಶಬ್ದಕ್ಕೆ ಬೇರೆ ಬೇರೆಯಾದ ಅರ್ಥವಿದ್ದರೆ ಅದನ್ನು ಬಳಸಬಹುದು. ಉದಾಹರಣೆಗೆ ತುಂಬಿ : ಇದಕ್ಕೆ  ಎರಡು ಅರ್ಥಗಳಿವೆ. ಪೂರ್ಣವಾಗಿ ಮತ್ತು ಭ್ರಮರ. ಹೀಗೆ ಬೇರೆ ಬೇರೆಯಾದ ಅರ್ಥವಿರುವ ಶಬ್ದಗಳನ್ನು ಬಳಸಬಹುದು. ರವಿ ಎಂಬುದು ಕಾಫಿಯಾದಲ್ಲಿ ಬಹಳ ಮುಖ್ಯವಾದುದು. ಕಾಫಿಯಾದ ನಿಜವಾದ ಮತ್ತು ಕೊನೆಯದಾದ ಅಕ್ಷರಕ್ಕೆ ರವಿ ಎನ್ನುತ್ತಾರೆ. ಉದಾಹರಣೆಗೆ : ಚಿಗುರು ಮತ್ತು ಅಲರು. ಇವುಗಳಲ್ಲಿ ರು ರವಿಯಾಗಿದೆ. ರವಿ ಕಾಫಿಯಾದ ಬೇರು. ಇದಿಲ್ಲದೆ ಕಾಫಿಯಾ ಆಗುವುದಿಲ್ಲ. (ಚಿಗುರು ಎಂದರೆ ಕುಡಿ, ಮೊಳಕೆ, ಅಲರು ಎಂದರೆ ಹೂವು, ಅರಳು)ರದೀಫ್: ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ, ಪೂರ್ಣ ಅರ್ಥ ಕೊಡುವ ಶಬ್ದಗಳ ಗುಂಪು ಮತ್ತು ಅಕ್ಷರ; ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ.ಗಜಲಿಗೆ ರದೀಫ್‌ನ ಅವಶ್ಯಕತೆ ಇಲ್ಲ. ರದೀಫ್ ಇಲ್ಲದ ಗಜಲ್‌ಗಳಿವೆ. ಆದರೆ ಕಾಫಿಯಾ ಮಾತ್ರ ಗಜಲಿಗೆ ಬೇಕೇ ಬೇಕು. ಅನೇಕರು ರದೀಫ್ ಇಲ್ಲದ ಗಜಲ್‌ಗಳನ್ನು ಮೆಚ್ಚುವುದಿಲ್ಲ. ರದೀಫ್‌ನ್ನು ಬಳಸಿದ ಗಜಲ್‌ಗಳಿಗೇ ಹೆಚ್ಚಿನ ಮಾನ್ಯತೆ. ಆದರೆ ರದೀಫ್ ಇಲ್ಲದ ಗಜಲ್‌ಗಳ ಸೃಷ್ಟಿ ಆಗುತ್ತಲೇ ಬಂದಿದೆ. ಮಖ್ತ: ಗಜಲಿನ ಕೊನೆಯ ದ್ವಿಪದಿಗೆ ಮಖ್ತ ಎನ್ನುತ್ತಾರೆ. ಕವಿ ತನ್ನ ಕಾವ್ಯನಾಮವನ್ನು ಇದರಲ್ಲಿ ಹೇಳಿಕೊಂಡಿರುತ್ತಾನೆ. ಅನೇಕ ವೇಳೆ ಕವಿ ತನ್ನ ಕಾವ್ಯನಾಮವನ್ನೇ ಹೇಳಿರುವುದಿಲ್ಲ. ಹೇಳಬೇಕೆಂಬ ಕಡ್ಡಾಯವೇನೂ ಇಲ್ಲ. ಕೆಲವು ಕವಿಗಳು ಮತ್ಲಾದಲ್ಲಿಯೂ ತಮ್ಮ ಕಾವ್ಯನಾಮವನ್ನು ಹೇಳಿಕೊಂಡಿರುವುದುಂಟು. (ನಾನು ನನ್ನ ಕಾವ್ಯನಾಮವನ್ನು ಸಿದ್ಧ ಎಂದು ಇರಿಸಿಕೊಂಡಿದ್ದೇನೆ).ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗeಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ.

ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯವು ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರದು. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು  ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ. ಗಜಲ್ ಸಂಕಲನಗಳೂ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಾಗಿವೆಗಜಲ್ ಕಾವ್ಯ ಪ್ರಕಾರ ಉರ್ದು ಸಾಹಿತ್ಯದ ಜನಪ್ರಿಯ ಭಾಗ. ಜನಪ್ರಿಯ ಎಂದ ಕೂಡಲೇ ಗಂಭೀರ ಸಾಹಿತ್ಯದ ಭಾಗವಲ್ಲವೆಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು.

ಶೃಂಗಾರ, ಪ್ರೇಮ, ವಿರಹಗೀತೆಯೂ ಹೌದು. ಗಜಲ್‌ನ ಮೂಲ ಫಾರಸಿ ಜಾನಪದ ಕಾವ್ಯದಲ್ಲಿದೆ ಎಂಬ ಅಭಿಪ್ರಾಯವಿದೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ.

ಗಜಲ್ ಪದ್ಯಗಳಿಗೆ ಅರಸರ ಆಸ್ಥಾನದ ಹೊಗಳುಭಟ್ಟರ ಪ್ರಶಂಸೆಯ `ಖಾಸಿದಾ~ ಎಂಬ 6ನೇ ಶತಮಾನದ ಅರಬಿ ಪದ್ಯಗಳು ಮೂಲವೆಂದೂ ಮತ್ತೊಂದು ಹೇಳಿಕೆಯಿದೆ. ಸ್ವರೂಪದಲ್ಲಿ ಗಜಲ್ `ಷೇರ್~ ಎಂಬ ದ್ವಿಪದಿಯಲ್ಲಿದ್ದು, ಒಂದು ದ್ವಿಪದಿ ಇನ್ನೊಂದು ದ್ವಿಪದಿಯ ಸಾಲುಗಳೊಂದಿಗೆ ಸಂಬಂಧವಿಟ್ಟುಕೊಳ್ಳಬೇಕಾದ ನಿಯಮವಿಲ್ಲ. ಗಜಲ್‌ನ ದ್ವಿಪದಿಗಳು ಸ್ವತಂತ್ರವಾಗಿಯೂ ಇರಬಹುದು. ಒಂದು ಗಜಲ್‌ನಲ್ಲಿ ಸಾಧಾರಣವಾಗಿ 5ರಿಂದ 21ರಷ್ಟು ದ್ವಿಪದಿಗಳಿರುತ್ತವೆ.

ಕನ್ನಡದ ಭಾವಗೀತೆಗಳಿಗೆ ಹೋಲಿಸಬಹುದಾದ ಗಜಲ್, ಸಂಕೇತಗಳ ಮೂಲಕ ವ್ಯಕ್ತಪಡಿಸುವ ಸೂಕ್ಷ್ಮ, ವಿವಶತೆಯ ದಿವ್ಯ ಭಾವತರಂಗಗಳು ಮತ್ತು ಕರುಣಾರಸ ಪ್ರಧಾನವಾದ ದ್ವಿಪದಿಗುಚ್ಛಗಳು. ಮತ್ಲಾ, ಕಾಫಿಯಾ, ರದೀಪ್ ಮತ್ತು ಮುಕ್ತಾ ಎಂಬ ಸೂತ್ರಗಳು ಗಜಲ್‌ನ ಮುಖ್ಯ ಲಕ್ಷಣಗಳಾಗಿವೆ.

ಉರ್ದು ಸಾಹಿತ್ಯ
ಉರ್ದು ಭಾಷೆಯ ಸಾಹಿತ್ಯ ಭಾರತದಲ್ಲಿ 12ನೆಯ ಶತಮಾನದಲ್ಲಿ ಹುಟ್ಟಿಕೊಂಡಿತೆಂಬ ಮಾಹಿತಿ ಸಿಗುತ್ತದೆ. ಕನ್ನಡ ಭಾಷೆಗಿರುವ ಹೆಚ್ಚುಕಮ್ಮಿ ಹದಿನೈದು ಶತಮಾನಗಳ ಹಿರಿತನದ, ಭವ್ಯ ಪರಂಪರೆಯ ಎದುರು ಉರ್ದು ತೀರ ಇತ್ತೀಚಿನ ಭಾಷೆಯಾದರೂ ಈ ಭಾಷೆಯ ಸಾಹಿತ್ಯದ ಬೆಳವಣಿಗೆ ಅದ್ಭುತ ರೀತಿಯದ್ದು.

ಉರ್ದು ಆಸ್ಥಾನದ ಆಡಳಿತ ಭಾಷೆಯಾಗುವ ಮುಂಚೆ ಫಾರಸಿ ಭಾಷೆ ದೆಹಲಿಯ ಸುಲ್ತಾನರ ಆಡಳಿತ ಭಾಷೆಯಾಗಿತ್ತು. ಉರ್ದು ಸಾಹಿತ್ಯಕ್ಕೆ ಇದರಿಂದಾಗಿ ಅರಸೊತ್ತಿಗೆಯ ಪ್ರೋತ್ಸಾಹ ದೊರೆಯಿತು.

ಮುಖ್ಯವಾಗಿ ಉರ್ದು ಕಾವ್ಯಕ್ಕೆ ಆಸ್ಥಾನದ ಪ್ರೋತ್ಸಾಹದ ಸಿಂಹಪಾಲು ದೊರೆಯಿತು. ಭಾರತೀಯ, ಫಾರಸಿ, ಅರೆಬಿಕ್, ಈ ಮೂರು ಸಂಸ್ಕೃತಿಗಳ ಮಿಶ್ರ ಕಾವ್ಯಪ್ರಕಾರವೆನಿಸಿದ ಉರ್ದು ಗಜಲ್, ಇಸ್ಲಾಮಿಕ್ ದೇಶಗಳಿಗೆ ಮತ್ತು ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯೆನಿಸಿದೆ.

ಅಮೀರ್ ಖುಸ್ರೋ
ಉರ್ದು ಕಾವ್ಯ ಪ್ರಕಾರವನ್ನು ಆಸ್ಥಾನದಿಂದ ಮುಕ್ತಗೊಳಿಸಿ ಜನರೆಡೆಗೆ ತರುವುದರಲ್ಲಿ ಸೂಫಿ ಸಂತ ಕವಿಗಳ ಬಹುಮುಖ್ಯ ಕೊಡುಗೆಯಿದೆ. ಸರಳ ಗಜಲ್‌ಗಳ ಮೂಲಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ನಿಷ್ಕಲ್ಮಷ ಬದುಕಿನ ವಿವಿಧ ಆಯಾಮವನ್ನು, ಅಧ್ಯಾತ್ಮವನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಈ ಪ್ರಕಾರವನ್ನು ಸೂಫಿ ಕವಿಗಳು ಜನಪ್ರಿಯಗೊಳಿಸಿದರು.

ಸೂಫಿಗಳಿಂದ ಮತ್ತು ರಾಜಮನೆತನದವರ ಪ್ರೋತ್ಸಾಹದಿಂದ ದಕ್ಷಿಣ ಏಷ್ಯಾದ ಅನೇಕ ದೇಶಗಳಲ್ಲಿ ಗಜಲ್ ಜನಪ್ರಿಯವಾಯಿತು. ಅಮೀರ್ ಖುಸ್ರೋ ಮತ್ತು ಮೀರ್ ತಖೀ ಮೀರ್, ಗಜಲ್‌ನ ಅದ್ಭುತ ಪ್ರತಿಭೆಯ ಸೂಫಿ ಕವಿಗಳೆನಿಸಿದರು.

ಅಮೀರ್ ಖುಸ್ರೋ ಉರ್ದು ಕಾವ್ಯಕ್ಕೆ, ಅದರಲ್ಲೂ ಮುಖ್ಯವಾಗಿ ಗಜಲ್ ಪ್ರಕಾರಕ್ಕೆ ಸಂಗೀತದ ಮೆರುಗನ್ನು ನೀಡಿದನಲ್ಲದೆ ಭಾರತದ ಹಿಂದೂಸ್ತಾನಿ ಸಂಗೀತಕ್ಕೆ `ಖಯಾಲ್~, `ತರಾನಾ~ ಮುಂತಾದ ಅನೇಕ ರಾಗಗಳನ್ನು, ತಬ್ಲಾ, ಸಿತಾರ್ ಮುಂತಾದ ವಾದ್ಯಗಳನ್ನು ಪರಿಚಯಿಸಿದ. ತನ್ನ ಪದ್ಯಗಳಲ್ಲಿ ಉತ್ಕಟ ದೇಶಾಭಿಮಾನ ಬೆಳೆಸಿದ ಖುಸ್ರೋ ಭಾರತವನ್ನು ಒಂದು ಸ್ವರ್ಗಸದೃಶ ದೇಶವೆಂದು ಹಾಡಿ ಹೊಗಳಿದ. ಅದಕ್ಕೆ ಕಾರಣಗಳನ್ನು ನೀಡಿದ.

ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.

ಅಗರ್ ಫಿರ್ದೌಸ್ ಖರ್ ರೂಹೆ ಜಮೀನ್,
ಹಮೀನ್ ಅಸ್ತ್, ಹಮೀನ್ ಅಸ್ತ್, ಹಮೀನ್ ಅಸ್ತ್.
(ಭೂಮಿಯ ಮೇಲೆ ಸ್ವರ್ಗ ಇರುವುದೆಂದಾದರೆ,
ಇಲ್ಲಿಯೇ ಇದೆ, ಇಲ್ಲಿಯೇ ಇದೆ, ಇಲ್ಲಿಯೇ ಇದೆ)

ಖುಸ್ರೋ ಹಿಂದವಿ (ಹಿಂದಿ/ಪಂಜಾಬಿಯ ಮೂಲ ಭಾಷೆ)ಯಲ್ಲಿ ಬರೆದ ಒಂದು ದ್ವಿಪದಿ ಹೀಗಿದೆ:

ಖುಸ್ರೊ ದರಿಯಾ ಪ್ರೇಮ್ ಕಾ ಉಲ್ಟಿ ವಾಕಿ ದಾರ್
ಜೋ ಉತ್‌ರಾ ಸೋ ಡೂಬ್ ಗಯಾ, ಜೋ ಡೂಬ್ ಗಯಾ ಸೋ ಪಾರ್
(ಹಿಂದಕ್ಕೆ ಹರಿಯುವ ಪ್ರೇಮ ನದಿ, ಖುಸ್ರೋ
ಹಾರಿದವನು ಮುಳುಗುವ, ಮುಳುಗಿದವನು ಪಾರಾಗುವ)

ಮೀರ್ ತಖೀ ಮೀರ್
ಮೀರ್ ತಖೀ ಮೀರ್ ಉರ್ದು ಗಜಲ್ ಜಗತ್ತಿನ ಚಕ್ರವರ್ತಿಯೆನಿಸಿದ ಪ್ರತಿಭಾವಂತ (1723-1810) ಭಾರತೀಯ ಸಂಸ್ಕೃತಿಯ ಅಂತಃಕರಣ ಹೊಂದಿದ್ದರಿಂದ, ಫಾರಸಿ ಭಾಷೆಯ ಮೆರಗನ್ನು ಬಹು ಸೂಕ್ಷ್ಮರೀತಿಯಲ್ಲಿ ಬೆರೆಸಿದ. ಅದ್ವಿತೀಯ ಪ್ರತಿಭಾವಂತನೆನಿಸಿದ ಮಲಾಮತಿ ಪರಂಪರೆಯ ಈ ಸೂಫಿ ಕವಿಯ ಹೃದಯಾಂತರಾಳದ ದುಃಖ, ಸಂಕಷ್ಟಗಳು, ಸೂಕ್ಷ್ಮ ತುಡಿತಗಳು ಕಾವ್ಯಸೃಷ್ಟಿಯ ಮೂಲ.

ಮೀರ್‌ಕೆ ದೀನೆ ಮಜ್‌ಹಬ್ ಪೂಚ್‌ತೇ ಉನೇ ತೋ
ಕಶ್‌ಕೆ ಖೈಂಚಾ ದೇರ್‌ಮೇಂ ಬೈಟಾ, ಕಬ್‌ಕಾ ತರ್ಕ್ ಇಸ್ಲಾಮ್ ಕಿಯಾ

ಮೀರನ ಜಾತಿ ಧರ್ಮವನು ಏನು ಕೇಳುವನೋ ಅವನು?
ನಾಮ ಹಣೆಯಲಿ ಧರಿಸಿ ಕೂತಿಹನವನು ದೇವಸ್ಥಾನದಲಿ, ಎಂದೋ ದೂರವಿಟ್ಟು ಇಸ್ಲಾಮನು.

ಮಿರ್ಜಾ ಗಾಲಿಬ್
ಉರ್ದು ಮತ್ತು ಫಾರಸಿಯಲ್ಲಿ ಬರೆಯುತ್ತಿದ್ದ ಇನ್ನೊಬ್ಬ ಬಹು ಮುಖ್ಯ ಕವಿ ಮಿರ್ಜಾ ಅಸದುಲ್ಲಾ ಖಾನ್ ಗಾಲಿಬ್ (1797-1869). ಗಾಲಿಬ್ ಗಜಲ್ ಪ್ರಕಾರಕ್ಕೆ ವಿಶಾಲವಾದ ಆಯಾಮವನ್ನು, ದಾರ್ಶನಿಕತೆಯನ್ನು, ವಸ್ತುವಿನಲ್ಲಿ ವೈಶಿಷ್ಟ್ಯವನ್ನು ನೀಡಿದ ಮಹತ್ವದ ಕವಿ.

ಗಾಲಿಬ್ ಗಜಲ್ ಕಾವ್ಯಸೃಷ್ಟಿಯಲ್ಲಿ ಎಷ್ಟು ಶ್ರೀಮಂತನೆಂದರೆ ಗಾಲಿಬ್‌ನಿಗೆ ಗಾಲಿಬನೇ ಹೋಲಿಕೆ ಎಂದು ವ್ಯಾಖ್ಯಾನವಿದೆ. ಇಂಥ ಅದ್ವಿತೀಯ ಒಂದಿಷ್ಟು ದ್ರಾಕ್ಷಾರಸವನ್ನು ಸೇವಿಸುವುದಕ್ಕಾಗಿ ಶರಾಬಿನ ಅಡ್ಡೆಯಲ್ಲಿ ಸಾಲಮಾಡಿ ತೀರಿಸಲಾಗದೆ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು.

ಉರ್ದುವಿನ ಮಹಾಕವಿಯೆನಿಸಿದ ಗಾಲಿಬ್ ತನ್ನ ಬದುಕಿನಲ್ಲಿ ಅತ್ಯಂತ ದಾರುಣವಾಗಿ ಸಂಕಷ್ಟಗಳನ್ನು, ನೋವನ್ನು ಉಂಡವರು.

ಪಂಚಾಕ್ಷರಿ ಹಿರೇಮಠರವರು ಅನುವಾದಿಸಿದ ಗಾಲಿಬನ ಕೆಲವು ಗಜಲ್ ಸಾಲುಗಳು ಹೀಗಿವೆ:
ನಾನು ಮನುಷ್ಯ ಸ್ವಭಾವದವನಾಗಿದ್ದೇನೆ, ಮನುಷ್ಯನಾಗಿ ಹುಟ್ಟಿದ್ದೇನೆ
ನನಗೆಷ್ಟು ಸಾಧ್ಯವೋ ಅಷ್ಟು ಪಾಪಮಾಡಬಲ್ಲೆ ಎನ್ನುವ ಅಭಿಮಾನ ನನಗಿದೆ...
                  *
ದ್ರಾಕ್ಷಾರಸದ ನನ್ನ ಪೂಜೆಯನ್ನು ನಾನೆಂದೂ ನಿಲ್ಲಿಸುವುದಿಲ್ಲ
ಭೋರಿಡುವ ಗಾಳಿಯ ಸುಳಿಯಲ್ಲಿ ನಾನು ಸದಾ ಜಿಗಿಯುತ್ತಿರುತ್ತೇನೆ.
                  *
ನನ್ನ ಗುಡಿಸಲಿನ ನರನರಗಳಲ್ಲಿ ಹೊರಹೊಮ್ಮುವ ಬಿಸಿಲತಾಪವ ಕೇಳದಿರು
ಈ ತಾಪಕ್ಕೆ ಹೆದರಿ ನಾನು ಆಕಾಶದಲ್ಲಿ ಹಾರಾಡುತ್ತಿಲ್ಲ.
                  * 
ಸೌಂದರ್ಯವೇ, ಒಮ್ಮೆ ಸಕಲ ವೈಭವದೊಡನೆ ನಿನ್ನ ನೋಡುವ ಆಸೆ
ಎಷ್ಟು ಕಾಲದವರೆಗೆ ಇಣಿಕಿ ನೋಡಲಿ ಮನದ ಕನ್ನಡಿಯ ಬಿಂಬಗಳ?
ಅಸದ್ ಎಂಬ ಕಾವ್ಯನಾಮದೊಂದಿಗೆ ಗಾಲಿಬ್ ಬರೆದ ಉರ್ದು ಗಜಲ್‌ಗಳು ಇಂದಿಗೂ ಗಜಲ್ ಗಾಯಕರ ಆಕರ್ಷಣೆಯ ಕೇಂದ್ರವಾಗಿದೆ. ಈ ಗಜಲ್‌ಗಳು ವಿಶ್ವದ ಎಲ್ಲೆಡೆ ಬಹಳ ಜನಪ್ರಿಯವಾಗಿವೆ.

ಕವಿ ಇಕ್ಬಾಲ್ (1877-1938)
1877ರ ನವೆಂಬರ್ 9ರಂದು (ಪಾಕಿಸ್ತಾನದ) ಪಂಜಾಬಿನ ಸಿಯಾಲ್‌ಕೋಟ್‌ನಲ್ಲಿ ಜನಿಸಿದ ವಿಶ್ವವಿಖ್ಯಾತ ಫಾರಸಿ ಮತ್ತು ಉರ್ದು ಭಾಷೆಗಳ ತತ್ವಜ್ಞಾನಿ ಕವಿ, ಭಾರತದಲ್ಲಿ `ಸಾರೇ ಜಹಾಂಸೆ ಅಚ್ಛಾ ಕವಿ~ ಎಂದೇ ಪ್ರಖ್ಯಾತ.

`ವಿಪರ್ಯಾಸವೆಂದರೆ ರಾಜಕೀಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಈ ಕವಿಯ ಕಾವ್ಯಕ್ಕೆ ಮಹತ್ವ ನೀಡದೆ, ತಪ್ಪು ಕಲ್ಪನೆಗಳೇ ಹೆಚ್ಚು ಪ್ರಚಾರದಲ್ಲಿರುವುದು! ಇಸ್ಲಾಮಿಗೆ ನಿಷ್ಠನಾಗಿದ್ದರೂ, ಗೀತೆಯ ಬಗ್ಗೆ ಆಕರ್ಷಿತನಾಗಿ ಸಂಸ್ಕೃತ ಕಲಿತು ವೇದಗಳನ್ನು ಅಭ್ಯಾಸ ಮಾಡಿದ್ದ.

ಒಂದೆಡೆ ಇಸ್ಲಾಮಿನ ಅಧ್ಯಾತ್ಮ ಮತ್ತು ದೇಶ ವಿಭಜನೆಯ ಪರವಾಗಿ ಈ ಕವಿ ಹೇಳಿದ ಮಾತುಗಳು ಧರ್ಮಾಂಧರ ಹೊಗಳಿಕೆ ಗಳಿಸಿದ್ದರೆ, ಇನ್ನೊಂದೆಡೆ ಶ್ರೀರಾಮನನ್ನು, ಬುದ್ಧನನ್ನು, ಗುರುನಾನಕನನ್ನು ಪ್ರಶಂಸೆ ಮಾಡಿದ್ದಕ್ಕೆ ಉಲೇಮಾಗಳ ಫತ್ವಾವನ್ನೂ ಈ ಕವಿ ಎದುರಿಸಿದ್ದ~ ಎನ್ನುತ್ತಾರೆ ಖ್ಯಾತ ಪತ್ರಕರ್ತ, ಸಾಹಿತಿ ಖುಷ್ವಂತ್ ಸಿಂಗ್.

ದೇಶವೆಂದರೇನು? ಹೇಗೆ ವಹಿಸುವೆ ನಾಯಕತ್ವ?
ಪಾಪ, ಮುಲ್ಲಾ! ಅದು ನಿಲುಕದು ಅವನ ಯೋಚನೆಗೆ.

ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ತನ್ನ ದ್ವಿಪದಿಗಳ ಮೂಲಕ ವಿಶಿಷ್ಟವಾಗಿ ಹೃದಯ ತಟ್ಟುವ ರೀತಿಯಲ್ಲಿ ವ್ಯಕ್ತಪಡಿಸಿದ ಈ ಕವಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ.

ಖುದೀ ಕೋ ಕರ್ ಬುಲಂದ್ ಇತ್‌ನಾ ಕೆ ಹರ್ ತಕ್‌ದೀರ್ ಸೆ ಪೆಹಲೇ
ಖುದಾ ಬಂದೇ ಸೆ ಖುದ್ ಪೂಚೆ, ಬತಾ ತೇರೀ ರಾ ಕ್ಯಾ ಹೈ?

ಸ್ವಂತಿಕೆಯನ್ನು ಬಲಗೊಳಿಸು ಸಾಕಷ್ಟು, ಪ್ರತಿಯೊಂದು ವಿಧಿಲೀಲೆಯ ಎದುರು
ದೇವರು ಕೇಳಬೇಕು ಮನುಜನನು ವಿವಶವಾಗಿ, `ಹೇಳು, ನಿನ್ನ ಇಚ್ಛೆ ಏನೆಂದು?

ಗಜಲ್‌ಗಳ ಮೂಲಕ ಪ್ರೇಮ ಸಂದೇಶವನ್ನು ಸಾರಿದ ಇಕ್ಬಾಲ್‌ರ ಅನೇಕ ಗಜಲ್‌ಗಳು ಜಗತ್ತಿನಾದ್ಯಂತ ಜನರ ಮನಸೂರೆಗೊಂಡಿವೆ. ಇವರ ಒಂದು ಗಜಲ್‌ನ ಕೆಲವು ಸಾಲುಗಳು ಹೀಗಿವೆ:

ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ   
ಅಭೀ ಇಶ್ಕ್ ಕೀ ಇಮ್ತಿಹಾಂ ಔರ್ ಭೀ ಹೈ.

ತಹೀ ಜಿಂದಗೀ ಸೆ ನಹೀ ಏ ಫಿಾಯೇಂ
ಯಹಾಂ ಸೈಕಡೋಂ ಕಾರವಾಂ ಔರ್ ಭೀ ಹೈ

ಕನಾಹತ್ ನ ಕರ್ ಆಲಮೇ-ರಂಗೊ-ಬೂ ಪರ್
ಚಮನ್ ಔರ್ ಭಿ ಆಶಿಯಾಂ ಔರ್ ಭಿ ಹೈ

ತಾರೆಗಳ ಮುಂದೆ ಪ್ರಪಂಚ ಇನ್ನೂ ಇದೆ
ಇದೇ ಅಲ್ಲ, ಪ್ರೇಮದ ಪರೀಕ್ಷೆ ಇನ್ನೂ ಇದೆ.

ಖಾಲಿ ಬದುಕಿನಿಂದ ಇಲ್ಲ ಈ ವಾತಾವರಣ
ಇಲ್ಲಿ ಕೋಟ್ಯಾನುಕೋಟಿ ಸಾಲುಗಳು ಇನ್ನೂ ಇದೆ.

ತುಷ್ಟನಾಗದಿರು ಕಂಡು ಜಗದ ಬಣ್ಣ, ವಾಸನೆಯ ಮೇಲೆ
ಹೂದೋಟಗಳು, ಕನಸಿನ ಮನೆಗಳು ಇನ್ನೂ ಇದೆ.

ಮೇಲೆ ಹೇಳಲಾದ ಉರ್ದು ಗಜಲ್ ಕಾವ್ಯ ಪ್ರಕಾರದ ದಿಗ್ಗಜರೆನಿಸಿದ ಕವಿಗಳಲ್ಲದೆ ಇನ್ನೂ ನೂರಾರು ಜಗತ್ಪ್ರಸಿದ್ಧ ಕವಿಗಳು ಇದ್ದಾರೆ. ಕರ್ನಾಟಕದಲ್ಲಿ ಕೂಡ ಉರ್ದು ಭಾಷೆಯ ಕವಿಗಳು ಇಂದಿಗೂ ನೂರಾರು ಮಂದಿ ಇದ್ದಾರೆ. ಇವರೆಲ್ಲರೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ, ಹಲವರು ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಯನ್ನು ಪಡೆದಿದ್ದಾರೆ.

ಇತರ ಭಾಷೆಗಳಲ್ಲಿ ಗಜಲ್
ಗಜಲ್ ಕಾವ್ಯಪ್ರಕಾರ ಎಷ್ಟು ಜನಪ್ರಿಯವಾಯಿತೆಂದರೆ ಇವುಗಳ ಅನುವಾದ ಮಾತ್ರವಲ್ಲ, ಬಂಗಾಲಿ, ಕನ್ನಡ, ತೆಲುಗು, ಮರಾಠಿ, ಹಿಂದಿ ಭಾಷೆಗಳ ಕವಿಗಳು ಸ್ವತಂತ್ರವಾಗಿ ಗಜಲ್ ಬರೆಯತೊಡಗಿದರು.

ದೇಶವಿದೇಶಗಳಲ್ಲಿ ಮುಖ್ಯವಾಗಿ ಯುರೋಪ್ ಮತ್ತು ಅಮೆರಿಕಾದಲ್ಲಿ ಇಂಗ್ಲಿಷ್, ಟರ್ಕಿಷ್, ರಷ್ಯನ್, ಜರ್ಮನ್ ಭಾಷೆಗಳಿಗೆ ಉರ್ದು ಗಜಲ್‌ಗಳು ಅನುವಾದಗೊಂಡದ್ದು ಮಾತ್ರವಲ್ಲ, ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಸ್ವತಂತ್ರ ಗಜಲ್ ಕಾವ್ಯವನ್ನು ರಚಿಸಲು ಕವಿಗಳು ತೊಡಗಿದರು.

ಮುಖ್ಯವಾಗಿ ಜೇಮ್ಸ ಕ್ಲೆರೆನ್ಸ್, ಜೇಮ್ಸ ಎಜ್ರಾಯಿಲ್ ಫ್ಲೆಕ್ಕರ್, ಫಿಲ್ಲಿಸ್ ವೆಬ್ ಮುಂತಾದವರು ಗಜಲ್‌ನ ಸೂತ್ರಗಳಿಗೆ ಬದ್ಧವಾಗಿ ಮತ್ತು ಅರೆ ಬದ್ಧತೆಯಿಂದ ಪದ್ಯಗಳನ್ನು ಬರೆದರು.

ಅರೆಬದ್ಧತೆಯ ದ್ವಿಪದಿಗಳನ್ನು `ಬಾಸ್ಟರ್ಡ್ ಗಜಲ್ಸ್~ ಎಂದು ಗಜಲ್ ಪ್ರಿಯರು ಟೀಕಿಸಿ ಹೆಸರಿಸಿದರು. 1990ರ ಸುಮಾರಿಗೆ ಇಂಗ್ಲಿಷ್ ಗಜಲ್‌ಗಳಿಗೆ ಮಾನ್ಯತೆ ದೊರೆತು ಅಮೆರಿಕಾದ ಕವಿಗಳಾದ ಜಾನ್ ಹೋಲೆಂಡರ್, ಡಬ್ಲ್ಯೂ. ಎಸ್. ಮೆರ‌್ವಿನ್ ಮುಂತಾದವರು ಸೂತ್ರಬದ್ಧ ಗಜಲ್‌ಗಳನ್ನು ಬರೆದರು.

ಕಾಶ್ಮೀರಿ ಮೂಲದ ಅಮೆರಿಕನ್ ಕವಿ ಆಘಾ ಶಾಹೀದ್ ಅಲಿ ಈ ಇಂಗ್ಲಿಷ್ ಗಜಲ್‌ಗಳ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಿದ್ದಲ್ಲದೆ, 2000ದಲ್ಲಿ Ravishing Disunities- Real Ghazals in English  ಎಂಬ ಹೆಸರಿನಲ್ಲಿ ಸಂಪಾದಿಸಿ ಪುಸ್ತಕವನ್ನು ಪ್ರಕಟಿಸಿದರು.

ಕನ್ನಡ ಕಾವ್ಯಲೋಕದಲ್ಲಿ ಗಜಲ್‌ಗಳು
ಕನ್ನಡದಲ್ಲಿ ಸ್ವತಂತ್ರವಾಗಿ ಮತ್ತು ಸೂತ್ರಬದ್ಧವಾಗಿ ಗಜಲ್‌ಗಳನ್ನು ಬರೆದವರಲ್ಲಿ ಪ್ರಥಮರೆಂದರೆ ಶಾಂತರಸರು. ಬೆಂಗಳೂರಿನ ಡಾ. ಕೆ.ಮುದ್ದಣ್ಣರವರು `ಮಂಜರ್~ ಎಂಬ ಕಾವ್ಯನಾಮದಲ್ಲಿ ಸುಮಾರು 500ರಷ್ಟು ಉರ್ದು ಗಜಲ್ ಬರೆದು ಖ್ಯಾತರಾಗಿದ್ದರಾದರೂ, ಇವರು ಅಲ್ಲಲ್ಲಿ `ಸತ್ಯಾನಂದ~ ಎಂಬ ಕಾವ್ಯನಾಮದಡಿಯಲ್ಲಿ ಕನ್ನಡ ಪದ್ಯಗಳು, ಉರ್ದು ಅನುವಾದಗಳನ್ನು ಬರೆದಿದ್ದರೇ ಹೊರತು ಸ್ವತಂತ್ರ ಗಜಲ್‌ಗಳನ್ನು ಕನ್ನಡದಲ್ಲಿ ಬರೆದದ್ದು ಕಮ್ಮಿ.

ಕಾದಂಬರಿಕಾರ, ಕತೆಗಾರ, ಕವಿ ಶಾಂತರಸರು `ಉರ್ದು ಕಾವ್ಯದಲ್ಲಿ ಮದಿರೆ ಮತ್ತು ಯೌವನ~ ಮುಂತಾದ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಉರ್ದು ಗಜಲ್‌ಗಳನ್ನು ಅನುವಾದಿಸಿದ ಜೊತೆಗೆ ಗಜಲ್ ಕಾವ್ಯದ ಸೂತ್ರಗಳಿಗೆ ಬದ್ಧವಾಗಿ ಕನ್ನಡ ಗಜಲ್‌ಗಳನ್ನು ಬರೆದಿದ್ದಾರೆ.

`ಗಜಲ್ ಮತ್ತು ಬಿಡಿ ದ್ವಿಪದಿಗಳು~ ಎಂಬುದು ಅವರ ಪ್ರಕಟಿತ ಕೃತಿ. ಇವರ ಕನ್ನಡ ಗಜಲ್‌ಗಳನ್ನು ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಲು ಕೈಗೆತ್ತಿಕೊಂಡಿದೆ. ಇವರ ಕೆಲವು ದ್ವಿಪದಿಗಳು ಗಜಲ್‌ಗಳು ಹೀಗಿವೆ:

ಅವಳ ಪೈಜಣದ ಧ್ವನಿ ಬರೆಯುತಿದೆ ಗಜಲ ಸಂಜೆಗೆಂಪಿನಲಿ
ಮಿಂದು ಮೆಲ್ಲನೆ ಬರುತಲಿದೆ ಅವಳ ಮೈಯ ಕಂಪಿನಲಿ.

                   *
ಏಸೋ ದಿನಗಳ ಬಳಿಕ ಓಲೆ ಬಂದಿದೆಯವಳ ಏನಿದೆಯೋ ಅಲ್ಲಿ
ಮುನಿಸೋ ಒಲವೋ ಅದನು ಸಹಿಸಲಿಕೆ ಬಟ್ಟಲವ ತುಂಬಿಕೊಡು ಸಾಕಿ.

ಶಾಂತರಸರು ಮೂಲತಃ ಪ್ರಯೋಗಶೀಲ ಕವಿ. ಸ್ವತಃ ಉರ್ದು ಸಾಹಿತ್ಯದ ಅಭಿಮಾನಿಯಾಗಿದ್ದ ಅವರು ಉರ್ದು ಕಾವ್ಯ ಪ್ರಕಾರಗಳಾದ ಗಜಲ್, ರುಬಾಯಿ, ನಜ್ಮ್, ಬಜ್ಮ್‌ಗಳನ್ನು ಅವುಗಳ ಕಾವ್ಯ ಲಕ್ಷಣಗಳನ್ನು ಕನ್ನಡದಲ್ಲಿ ಬಳಸಿ ಕಾವ್ಯರಚನೆ ಮಾಡುವ ಪ್ರಯೋಗವನ್ನು ಮಾಡಿದ್ದರು.

ಅವರು ಒಟ್ಟು ಇಂತಹ 46 ಗಜಲ್‌ಗಳನ್ನು `ಅರಸ~ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ  ನೀಡಿದ್ದಾರೆ. ಇವರ ಗಜಲ್‌ಗಳ ಮಾಧುರ್ಯದ ಒಂದು ಮಾದರಿ ಹೀಗಿದೆ:

ಅರುವತ್ತು ತುಂಬಿದರೂ ಮಧುವುಂಟು ಪ್ರಿಯಳೇ ಮಾಧುರ‌್ಯವುಂಟು
ಮೊದಲ ಮಳೆ ಬಿದ್ದ ನೆಲದ ವಾಸನೆ ನಿನ್ನ ಅಂಗಾಂಗದಲಿ ಉಂಟು

ಮುಪ್ಪಿಲ್ಲ ಆಗಸಕೆ ಎಂದೆಂದು ಕುಂದಿಲ್ಲ ಚುಕ್ಕೆ ಚಂದ್ರರಿಗೆ
ಆಗಸದ ಸೌಂದರ್ಯ ಚುಕ್ಕೆ ಚಂದ್ರಾಮರ ಕಳೆ ನಿನಗುಂಟು

ಕೊರತೆ ಕಾಣದು ಬೆಳಕು ಕತ್ತಲೆಗೆ ಕೊಡೆಂಬುದಿಲ್ಲವೇ ಇಲ್ಲ
ತುಳುಕುತಿದೆ ಬೆಳಕು ಮೈಯಲಿ ಕಂಗಳಿಗೆ ಕತ್ತಲೆಯ ಕಾಡಿಗೆಯುಂಟು

ಸಂಜೆಗೆಂಪದರ ಜೊತೆ ಹುಣ್ಣಿಮೆಯ ಬೆಳದಿಂಗಳೇನು ಬಲು ಚಂದ
ಸಂಜೆಯನು ಉಡುವ ಹುಣ್ಣಿಮೆಯ ತೊಡುವ ಫಲವು ನಿನ್ನಲಿನ್ನೂ ಉಂಟು

ಜೀವನರ್ಥವ ಪ್ರೇಮದ ಮರ್ಮವ ತಿಳಿದವಳೆಂದರೆ ನೀನೇ
ಅಂತೆಯೇ ನಿನ್ನಲಿ ಚೆಲುವಿನ ತವರೆ ಯೌವನಕಿನ್ನೂ ಮೌನವೇ ಉಂಟು

ಬದುಕು ಒಂದು ದಿನ ಮುಗಿಯುವುದು ಮರ್ತ್ಯದ ಸೊಗಸೇ ಅಡಗಿಹುದಿರಲಿ
ಸಾವಿಗೆ ಜೀವನ ದೀಕ್ಷೆಯನೀಯುವ ಒಲವಿನ ಶಕ್ತಿ ನಿನಗುಂಟು.

ಶಾಂತರಸರು ತಮ್ಮ ಎಂದಿನ ಕವನಗಳಲ್ಲಿ ವ್ಯಕ್ತಪಡಿಸುವ ಪ್ರೇಮ, ಪ್ರಣಯದ ರೀತಿಗೂ, ತಮ್ಮ ಗಜಲ್‌ಗಳಲ್ಲಿ ವ್ಯಕ್ತಪಡಿಸುವ ರೀತಿಯೂ ಭಿನ್ನವಾಗಿದೆ. ನೈತಿಕ ಎಲ್ಲೆಯನ್ನು ಮೀರದ ಸಂಯಮದ ನಿರೂಪಣೆ ಇಲ್ಲಿ ಕಂಡುಬರುತ್ತದೆ.

ಕನ್ನಡದ ಕವಿ ಶಾಂತರಸರು ನಮ್ಮನ್ನು 2008ರಲ್ಲಿ ಬಿಟ್ಟು ಅಗಲಿದರೂ, ಈ ಗಜಲ್ ಪರಂಪರೆಯನ್ನು ಮುಂದುವರಿಸಲು ಯುವ ಕವಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಮಾರ್ಗದಲ್ಲಿ ನಜೀರ್ ಚಂದಾವರ, ಎಚ್.ಎಸ್.ಮುಕ್ತಾಯಕ್ಕ, ಡಾ. ಬಸವರಾಜ ಸಬರದ, ಚಿದಾನಂದ ಸಾಲಿ, ಆರಿಫ್ ರಾಜಾ, ಶಾರದಾ ಮುಳ್ಳೂರು, ಡಾ. ದಸ್ತಗೀರ್ ಸಾಬ್ ದಿನ್ನಿ, ಹೇಮಲತಾ ವಸ್ತ್ರದ ಮತ್ತು ಇನ್ನೂ ಹಲವು ಕನ್ನಡದ ಕವಿಗಳು ಗಜಲ್ ಬರವಣಿಗೆಯನ್ನು ಮುಂದುವರಿಸಿದ್ದಾರೆ.

ಗಜಲ್ ಕಾವ್ಯ ಪರಂಪರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ, ಅಲ್ಲದೆ ಈ ಗ ಉಜ್ವಲ ಭವಿಷ್ಯವೂ ಕಾದಿದೆಯೆನ್ನಬಹುದು.


ಗಝಲ್ : ೩೨ (ಕಾಪಿಯಾನ)
~~~~~~~~~~~~~~~
ಅರಳುವ ಮುನ್ನ ಅಳಿಸದಿರಿ ನಮ್ಮನ್ನ
ಬದುಕಬೇಕಿದೆ ಬಹಳ ದಿನ ‌ನಾವು ಇನ್ನ ಹಾಲು ಕುಡಿಯುವ ಹಸುಳೆಗಳು ನಾವು
ಕಾಮದ ಕಣ್ಣಲ್ಲಿ ಕಾಣದಿರಿ ಈ ತನುವನ್ನ ನಿಮ್ಮ ಸಹೋದರಿಯರಿಗೂ ಎಳೆಯರು
ಎಳೆದಾಡದಿರಿ ನಮ್ಮ ಮೈ ಕೈ ಕಾಲುಗಳನ್ನನಿಮ್ಮ ಕ್ರೌರ್ಯ ಸಹಿಲಾರೆವು ಬಿಟ್ಟು ಬಿಡಿ
ಕರವನು ಮುಗಿದು ಬೇಡುತಿಹೆವು ನಿಮ್ಮನ್ನ  ನಗುನಗುತಾ ಶಾಲೆಗೆ ಹೋಗುತ್ತಿರುವೆವು
ದಯವಿಟ್ಟು ಹಿಂಬಾಲಿಸದಿರಿ ನೀವು ಅಣ್ಣಯಾರ ಕಂದಮ್ಮಗಳಿಗೂ ಹೀಗಾಗದಿರಲಿ
"ಸಿಡಿಲು"ನು ಬೇಡುವನು ಶ್ರೀ ಈಶ್ವರನನ್ನ

No comments:

Popular Posts