ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

Monday 15 January 2024

Sahitya / ಕವನ / Kavana - ಮಕ್ಕಳ ಕವನ ಸರಣಿ - ರೈತ

  ರೈತ




ಅಪ್ಪನಂತೆ  ನಾನೂ
ಒಬ್ಬ ರೈತನಾಗುವೆ
ಉತ್ತಿಬೆಳೆದು ಜನರಿಗೆ
ಅನ್ನ ನೀಡುವೆ ||

ಗೋಧಿ ಜೋಳ ರಾಗಿ
ನಾನು ಬೆಳೆಯುವೆ
ಫಸಲು ಬಂದ ಮೇಲೆ
ನಾನು ರಾಶಿ ಮಾಡುವೆ ||

ತರಕಾರಿ ಹಣ್ಣು ಕಾಳನ್ನು
ಸುತ್ತಲೂ ಬೆಳೆಸುವೆ
ಎರೆಹುಳು ಗೊಬ್ಬರಹಾಕಿ
ಫಲವತ್ತಾದ ಬೆಳೆ ಬೆಳೆಯುವೆ ||



ಮಲ್ಲಿಗೆ ಸಂಪಿಗೆ ಹೂವನ್ನು
ಹೊಲದಲಿ ಬೆಳೆಯುವೆ
ಸುಂದರವಾದ ಹೂವನ್ನು
ಅಮ್ಮನ ಕೈಯಲಿ ನೀಡುವೆ ||

ಆಡು ಮೇಕೆ ಹಸುಗಳನ್ನು
ನಾನು ಸಾಕುವೆ 
ಹಾಲು ಮೊಸರು ಬೆಣ್ಣೆಯನ್ನು
ಖಷಿಯಲಿ ತಿನ್ನುವೆ  ||

ರಾಮ ಶ್ಯಾಮ ರಾಜುಗೆಲ್ಲಾ
ವ್ಯವಸಾಯವ ಕಲಿಸುವೆ
ರೈತನೆ ದೇಶದ ಬೆನ್ನೆಲುಬೆಂದು
ಜಗಕೆ ಸಾರುವೆ
ಈ ಜಗಕೆ ಸಾರುವೆ...||


=> ವೆಂಕಟೇಶ ಚಾಗಿ




ಚಿತ್ರ ಕೃಪೆ : pixabay.com

No comments:

Post a Comment

Popular Posts

ಪ್ರಚಲಿತ ಪೋಸ್ಟ್‌ಗಳು