Thursday, 3 October 2024

ಕವಿತೆ | ಏಕೆ ಹೇಳಿದೆ | ವೆಂಕಟೇಶ ಚಾಗಿ | POEM | WAY SAID | VENKATESH CHAGI

 



**ಏಕೆ ಹೇಳಿದೆ**




ಮರಕ್ಕೆ ಜೀವವಿದೆ ಎಂದು 
ಏಕೆ ಹೇಳಿದೆ
ಮರವನ್ನು ಕತ್ತರಿಸಿದರೂ
ಮರವಿದ್ದ ಜಾಗವನ್ನು ಆಕ್ರಮಿಸಿದರೂ
ನ್ಯಾಯಾಲಯದಲ್ಲಿ ಮೊಕದ್ದಮೆ
ಹೂಡುವವರು ಯಾರೂ ಇಲ್ಲ
ನ್ಯಾಯವನ್ನು ಹೇಳುವವರಿಗೆ
ಮರದ ನ್ಯಾಯ ಗೊತ್ತಿಲ್ಲ
ಆದರೂ ಮರಕ್ಕೆ ಜೀವವಿದೆ
ವಾದಿಸಲಾಗಿದೆ ದೃಢೀಕರಿಸಲಾಗಿದೆ
ನ್ಯಾಯ ನೀಡಲಾಗಿಲ್ಲ ಅಷ್ಟೇ


ದೇವರು ಇರುವನೆಂದು 
ಏಕೆ ಹೇಳಿದೆ
ದೇವರ ಹೆಸರಿನಲ್ಲಿ ಧರ್ಮಗಳು
ಯುದ್ದ ಗೈಯುತ್ತಿವೆ ಸ್ಪರ್ಧೆಗಿಳಿದಿವೆ
ದೇವರ ತೃಪ್ತಿಗಾಗಿ ದುಡಿಯಲಾಗಿದೆ
ಆದರೆ ದೇವರು ಏನನ್ನೂ ಕೇಳಿಲ್ಲ
ದಾವೆಯನ್ನೂ ಹೂಡಿಲ್ಲ
ದೇವರು ಶ್ರೀಮಂತನಾಗಿದ್ದಾನೆ
ನಾನಾ ವೇಷ ಧರಿಸಿ, ನಾಗಾಲೋಟದಲ್ಲಿ
ಆದರೂ ದೇವರು ಎಲ್ಲೆಡೆ ಇದ್ದಾನೆ


ಬದುಕು ಸುಂದರವಾಗಿದೆ ಎಂದು
ಏಕೆ ಹೇಳಿದೆ
ಬದುಕಿಗಾಗಿ ನಾನಾ ಕಸರತ್ತುಗಳು
ನೂರಾರು ವೇಷಗಳು , 
ಹಲವಾರು ಪವಾಡಗಳು
ಅನ್ಯಾಯಗಳು ಅನೀತಿಗಳು ಅಮಾನ್ಯಗಳು
ಭಯದ ಕಾರ್ಮೋಡ ಹಿಂಸೆಯ ನರ್ತನ
ಆದರೂ ಬದುಕು ಸುಂದವಾಗಿದೆ
ಬದುಕಿಗೆ ಬೆಲೆ ತೆರಲಾಗಿದೆ
ಬದುಕನ್ನು ಬದುಕಿಸಲಾಗಿದೆ


Sunday, 29 September 2024

ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ | sanadi literature award

 ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ

.........................................................................

   ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ

                 --------------------



ಬೆಳಗಾವಿ - ಇಲ್ಲಿಯ ಡಾ ಬಿ ಎ ಸಾಂಸ್ಕೃತಿಕ ಪ್ರತಿಷ್ಠಾನವು

      ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ ಈ ಸಲ ಮಕ್ಕಳ ಶಿಶುಗೀತೆ/ಕವನ ಸಂಕಲನಕ್ಕೆ ಪ್ರಶಸ್ತಿ ಕೊಡಲಾಗುವುದು 2020 ಜನವರಿಯಿಂದ 2023 ರ ಡಿಸೆಂಬರ್ ವರೆಗೆ ಪ್ರಕಟವಾದ ಮಕ್ಕಳ ಶಿಶುಗೀತೆ/ಕವನ ಸಂಕಲನಗಳಿರಬೇಕು

      ಪ್ರಶಸ್ತಿಯು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯನ್ನು ಹೊಂದಿರುವ ಕಾರಣ 35 ವರ್ಷ ವಯಸ್ಸಿನ ಒಳಗಿನ ಲೇಖಕರು ಮಾತ್ರ ತಮ್ಮ ವಯಸ್ಸಿನ ದಾಖಲೆಯೊಂದಿಗೆ 3 ಪ್ರತಿಗಳನ್ನು 25/10/2024 ರೊಳಗೆ ಕಳುಹಿಸಿಕೊಡಲು ಪ್ರತಿಷ್ಠಾನದ ಅಧ್ಯಕ್ಷ ಡಾ ರಾಮಕೃಷ್ಣ ಮರಾಠೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಕೃತಿಗಳನ್ನು ಕಳಿಸುವ ವಿಳಾಸ

             ಬಸವರಾಜ ಗ ಗಾರ್ಗಿ

                          ಕಾರ್ಯದರ್ಶಿ

     ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ

              ಹೊಂಗನಸು # 73

          ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ

                        ಶ್ರೀನಗರ

               ಬೆಳಗಾವಿ - 590017

                    ಮೊ : 9453500026 / 9686127134

           

                       

                                        ಡಾ ರಾಮಕೃಷ್ಣ ಮರಾಠೆ

                                                        ಅಧ್ಯಕ್ಷರು

                           ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ

                                            ಬೆಳಗಾವಿ

Saturday, 28 September 2024

ನಮ್ಮಯ ಅಜ್ಜಿ | ಮಕ್ಕಳ ಕವನ | ವೆಂಕಟೇಶ ಚಾಗಿ | our grandmother | children's poem | venkatesh chagi



 ನಮ್ಮಯ ಅಜ್ಜಿ*


ಅಜ್ಜಿ ಅಂದರೆ ನನಗೆ ಇಷ್ಟ
ಅಜ್ಜಿ ಕೊಡುವ ಚೆಕ್ಕುಲಿ ಇಷ್ಟ
ಅಜ್ಜಿಯ ಜೊತೆಗೆ ಆಟವು ಇಷ್ಟ
ಅಜ್ಜಿ ಇರದಿರೆ ತುಂಬಾ ಕಷ್ಟ |

ಪೇಟೆಗೆ ಹೋದರೆ ನಮ್ಮಯ ಅಜ್ಜಿ
ತರುವಳು ತಿಂಡಿಯ ನಮ್ಮಯ ಅಜ್ಜಿ
ಹೊಸ ಹೊಸ ಬಟ್ಟೆ ಗಿಲಿಗಿಲಿ ಗೆಜ್ಜೆ
ಮರೆಯದೆ ತರುವಳು ಪ್ರೀತಿಯ ಅಜ್ಜಿ 

ಜಾತ್ರೆಗೆ ಹೋದರೆ ನಮ್ಮಯ ಅಜ್ಜಿ
ತಿನ್ನಲು ತರುವಳು ಬಿಸಿಬಿಸಿ ಬಜ್ಜಿ
ಕೀಲಿ ಕಾರು ಚೆಂದದ ಗೊಂಬೆ
ಮರೆಯದೆ ತರುವಳು ಪ್ರೀತಿಯ ಅಜ್ಜಿ |

ಹಳ್ಳಿಗೆ ಹೋದರೆ ನಮ್ಮಯ ಅಜ್ಜಿ
ಮನೆಗೆ ತರುವಳು ಜೋಳ ಸಜ್ಜಿ
ಪೇರಲ ಮಾವು ನೇರಳೆ ಹಣ್ಣು
ನನಗೆ ತರುವಳು ಮರೆಯದೆ ಅಜ್ಜಿ

ಅಜ್ಜಿ ಅಜ್ಜಿ ಎಲ್ಲರ ಅಜ್ಜಿ
ಮುದ್ದಿಸಿ ಉಣಿಸುವ ಮದ್ದಿನ ಅಜ್ಜಿ
ಪಾಠವ ಓದಿಸಿ ಲೆಕ್ಕವ ಮಾಡಿಸಿ
ಮಲಗಿಸಿ ಬಿಡುವಳು ಲಾಲಿಯ ಹಾಡಿ 


✍ ವೆಂಕಟೇಶ ಚಾಗಿ

Friday, 27 September 2024

morarji entrance test 6

   



ಕೆಳಗಿನ ಸಂಖ್ಯೆಗಳಲ್ಲಿ ಅಡಿಗೆರೆ ಹಾಕಿದ ಅಂಕಿಯ ಸ್ಥಾನಬೆಲೆ  ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


10) 67,864

   A) ಮಗುಗಳು (ಕ್ಲಿಕ್ ಮಾಡಿ)

   B) ಮಗು (ಕ್ಲಿಕ್ ಮಾಡಿ)

   C ) ಮಕ್ಕಳು (ಕ್ಲಿಕ್ ಮಾಡಿ)


9)  65,894

     A) ಶಾಲೆ ಶಾಲೆ (ಕ್ಲಿಕ್ ಮಾಡಿ)

     B) ಶಾಲೆಯ (ಕ್ಲಿಕ್ ಮಾಡಿ)

     C ) ಶಾಲೆಗಳು (ಕ್ಲಿಕ್ ಮಾಡಿ)


8) 43,806

     A) ಅಜ್ಜಗಳು (ಕ್ಲಿಕ್ ಮಾಡಿ)

     B) ಅಜ್ಜಂದಿರು (ಕ್ಲಿಕ್ ಮಾಡಿ)

     C ) ಅಜ್ಜಯರು (ಕ್ಲಿಕ್ ಮಾಡಿ)


7)  84,528

     A) ಮರಗಳು (ಕ್ಲಿಕ್ ಮಾಡಿ)

     B) ಹೆಚ್ಚು ಮರ (ಕ್ಲಿಕ್ ಮಾಡಿ)

     C ) ಮರಯರು (ಕ್ಲಿಕ್ ಮಾಡಿ)


6) 89,513

     A) ತಿಂಗಳು (ಕ್ಲಿಕ್ ಮಾಡಿ)

     B) ದಿನಗಳು (ಕ್ಲಿಕ್ ಮಾಡಿ)

     C ) ದಿನವಾರು (ಕ್ಲಿಕ್ ಮಾಡಿ)


5)  69,034

     A) ಶಿಷ್ಯ (ಕ್ಲಿಕ್ ಮಾಡಿ)

     B) ಗುರುಗಳು (ಕ್ಲಿಕ್ ಮಾಡಿ)

     C ) ಯಾವುದೂ ಅಲ್ಲ (ಕ್ಲಿಕ್ ಮಾಡಿ)


4) 48,365

     A) ಪದಗಳು (ಕ್ಲಿಕ್ ಮಾಡಿ)

     B) ಪದೋಕ್ತಿ (ಕ್ಲಿಕ್ ಮಾಡಿ)

     C ) ಪದನಾಮ (ಕ್ಲಿಕ್ ಮಾಡಿ)


3) 42,875

     A) ಹೆದ್ದಾರಿ (ಕ್ಲಿಕ್ ಮಾಡಿ)

     B) ರಹದಾರಿ (ಕ್ಲಿಕ್ ಮಾಡಿ)

     C ) ದಾರಿಗಳು (ಕ್ಲಿಕ್ ಮಾಡಿ)


2) 78,342

     A) ಮನೆಗೆ (ಕ್ಲಿಕ್ ಮಾಡಿ)

     B) ಮನೆಗಳು (ಕ್ಲಿಕ್ ಮಾಡಿ)

     C ) ಮನೆಯರು (ಕ್ಲಿಕ್ ಮಾಡಿ)


1) 68,356

     A) ಹುಡುಗಗಳು (ಕ್ಲಿಕ್ ಮಾಡಿ)

     B) ಹುಡುಗರು (ಕ್ಲಿಕ್ ಮಾಡಿ)

     C ) ಹುಡುಗ (ಕ್ಲಿಕ್ ಮಾಡಿ)



morarji entrance test 5

 




ಕೆಳಗಿನವುಗಳಿಗೆ ಬಹುವಚನ ಪದ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


1) ಮಗು

   A) ಮಗುಗಳು (ಕ್ಲಿಕ್ ಮಾಡಿ)

   B) ಮಗು (ಕ್ಲಿಕ್ ಮಾಡಿ)

   C ) ಮಕ್ಕಳು (ಕ್ಲಿಕ್ ಮಾಡಿ)


2)  ಶಾಲೆ

     A) ಶಾಲೆ ಶಾಲೆ (ಕ್ಲಿಕ್ ಮಾಡಿ)

     B) ಶಾಲೆಯ (ಕ್ಲಿಕ್ ಮಾಡಿ)

     C ) ಶಾಲೆಗಳು (ಕ್ಲಿಕ್ ಮಾಡಿ)


3) ಅಜ್ಜ

     A) ಅಜ್ಜಗಳು (ಕ್ಲಿಕ್ ಮಾಡಿ)

     B) ಅಜ್ಜಂದಿರು (ಕ್ಲಿಕ್ ಮಾಡಿ)

     C ) ಅಜ್ಜಯರು (ಕ್ಲಿಕ್ ಮಾಡಿ)


4)  ಮರ

     A) ಮರಗಳು (ಕ್ಲಿಕ್ ಮಾಡಿ)

     B) ಹೆಚ್ಚು ಮರ (ಕ್ಲಿಕ್ ಮಾಡಿ)

     C ) ಮರಯರು (ಕ್ಲಿಕ್ ಮಾಡಿ)


5) ದಿನ

     A) ತಿಂಗಳು (ಕ್ಲಿಕ್ ಮಾಡಿ)

     B) ದಿನಗಳು (ಕ್ಲಿಕ್ ಮಾಡಿ)

     C ) ದಿನವಾರು (ಕ್ಲಿಕ್ ಮಾಡಿ)


6)  ಗುರು

     A) ಶಿಷ್ಯ (ಕ್ಲಿಕ್ ಮಾಡಿ)

     B) ಗುರುಗಳು (ಕ್ಲಿಕ್ ಮಾಡಿ)

     C ) ಯಾವುದೂ ಅಲ್ಲ (ಕ್ಲಿಕ್ ಮಾಡಿ)


7) ಪದ

     A) ಪದಗಳು (ಕ್ಲಿಕ್ ಮಾಡಿ)

     B) ಪದೋಕ್ತಿ (ಕ್ಲಿಕ್ ಮಾಡಿ)

     C ) ಪದನಾಮ (ಕ್ಲಿಕ್ ಮಾಡಿ)


8) ದಾರಿ

     A) ಹೆದ್ದಾರಿ (ಕ್ಲಿಕ್ ಮಾಡಿ)

     B) ರಹದಾರಿ (ಕ್ಲಿಕ್ ಮಾಡಿ)

     C ) ದಾರಿಗಳು (ಕ್ಲಿಕ್ ಮಾಡಿ)


9) ಮನೆ

     A) ಮನೆಗೆ (ಕ್ಲಿಕ್ ಮಾಡಿ)

     B) ಮನೆಗಳು (ಕ್ಲಿಕ್ ಮಾಡಿ)

     C ) ಮನೆಯರು (ಕ್ಲಿಕ್ ಮಾಡಿ)


10) ಹುಡುಗ

     A) ಹುಡುಗಗಳು (ಕ್ಲಿಕ್ ಮಾಡಿ)

     B) ಹುಡುಗರು (ಕ್ಲಿಕ್ ಮಾಡಿ)

     C ) ಹುಡುಗ (ಕ್ಲಿಕ್ ಮಾಡಿ)


LBA Question papers | orders | formats | vktworld

  👉  LBA ORDERS ಆದೇಶಗಳು       👉  LBA ನಮೂನೆಗಳು 👉  Question papers      ನಲಿಕಲಿ question papers ಕ...