ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

Thursday, 3 October 2024

ಕವಿತೆ | ಏಕೆ ಹೇಳಿದೆ | ವೆಂಕಟೇಶ ಚಾಗಿ | POEM | WAY SAID | VENKATESH CHAGI

 



**ಏಕೆ ಹೇಳಿದೆ**




ಮರಕ್ಕೆ ಜೀವವಿದೆ ಎಂದು 
ಏಕೆ ಹೇಳಿದೆ
ಮರವನ್ನು ಕತ್ತರಿಸಿದರೂ
ಮರವಿದ್ದ ಜಾಗವನ್ನು ಆಕ್ರಮಿಸಿದರೂ
ನ್ಯಾಯಾಲಯದಲ್ಲಿ ಮೊಕದ್ದಮೆ
ಹೂಡುವವರು ಯಾರೂ ಇಲ್ಲ
ನ್ಯಾಯವನ್ನು ಹೇಳುವವರಿಗೆ
ಮರದ ನ್ಯಾಯ ಗೊತ್ತಿಲ್ಲ
ಆದರೂ ಮರಕ್ಕೆ ಜೀವವಿದೆ
ವಾದಿಸಲಾಗಿದೆ ದೃಢೀಕರಿಸಲಾಗಿದೆ
ನ್ಯಾಯ ನೀಡಲಾಗಿಲ್ಲ ಅಷ್ಟೇ


ದೇವರು ಇರುವನೆಂದು 
ಏಕೆ ಹೇಳಿದೆ
ದೇವರ ಹೆಸರಿನಲ್ಲಿ ಧರ್ಮಗಳು
ಯುದ್ದ ಗೈಯುತ್ತಿವೆ ಸ್ಪರ್ಧೆಗಿಳಿದಿವೆ
ದೇವರ ತೃಪ್ತಿಗಾಗಿ ದುಡಿಯಲಾಗಿದೆ
ಆದರೆ ದೇವರು ಏನನ್ನೂ ಕೇಳಿಲ್ಲ
ದಾವೆಯನ್ನೂ ಹೂಡಿಲ್ಲ
ದೇವರು ಶ್ರೀಮಂತನಾಗಿದ್ದಾನೆ
ನಾನಾ ವೇಷ ಧರಿಸಿ, ನಾಗಾಲೋಟದಲ್ಲಿ
ಆದರೂ ದೇವರು ಎಲ್ಲೆಡೆ ಇದ್ದಾನೆ


ಬದುಕು ಸುಂದರವಾಗಿದೆ ಎಂದು
ಏಕೆ ಹೇಳಿದೆ
ಬದುಕಿಗಾಗಿ ನಾನಾ ಕಸರತ್ತುಗಳು
ನೂರಾರು ವೇಷಗಳು , 
ಹಲವಾರು ಪವಾಡಗಳು
ಅನ್ಯಾಯಗಳು ಅನೀತಿಗಳು ಅಮಾನ್ಯಗಳು
ಭಯದ ಕಾರ್ಮೋಡ ಹಿಂಸೆಯ ನರ್ತನ
ಆದರೂ ಬದುಕು ಸುಂದವಾಗಿದೆ
ಬದುಕಿಗೆ ಬೆಲೆ ತೆರಲಾಗಿದೆ
ಬದುಕನ್ನು ಬದುಕಿಸಲಾಗಿದೆ


No comments:

Popular Posts