Monday, 15 January 2024

Sahitya / story / makkala kathe / - ಮಕ್ಕಳ ಕಥೆ - ಬಣ್ಣದ ದೋಣಿ

  



**ಬಣ್ಣದ ದೋಣಿ** 





ಮಳೆಗಾಲ ಪ್ರಾರಂಭವಾಯಿತು. ಮಳೆಯಾಗದೇ ತುಂಬಾ ದಿನಗಳಾಗಿದ್ದವು. ಬಿಸಿಲಿನ ಬೇಗೆಗೆ ರಾಮಾಪುರದ ಮಕ್ಕಳೆಲ್ಲಾ ಬೇಸತ್ತು ಹೋಗಿದ್ದರು. ಯಾವಾಗ ಮಳೆಯಾಗುವುದೋ , ಮಳೆಯಲ್ಲಿ ಯಾವಾಗ ಆಟವಾಡುವೆವೋ ಎಂದು ಮಕ್ಕಳೆಲ್ಲಾ ತುಂಬಾ ನಿರೀಕ್ಷೆ ಹೊಂದಿದ್ದದ್ದರು. ಈಗ ಮಳೆಗಾಲ ಪ್ರಾರಂಭವಾಗಿದೆ. ಈ ಮಳೆಗಾಲದಲ್ಲಿ ಮಳೆ ಧೋ ಧೋ  ಎಂದು ಸುರಿಯುತ್ತಿದೆ . ರಾಮಪುರದ ಮಕ್ಕಳಿಗೆ ಮಳೆಗಾಲದಲ್ಲಿ ಆಟವಾಡುವುದು,  ಮಳೆಯಲ್ಲಿ ನೆನೆಯುವುದು ತುಂಬಾನೇ ಇಷ್ಟ . ಆದರೆ ಮನೆಯ ಹೊರಗಡೆ ತುಂಬಾ ಮಳೆ. ಮನೆಯಲ್ಲಿ ಆಟ ಆಡೋಣವೆಂದರೆ ಅಪ್ಪ-ಅಮ್ಮ ಬಯ್ಯುತ್ತಾರೆ. ಗಲಾಟೆ ಮಾಡಬಾರದು ಎಂದು ಸಿಡುಕುತ್ತಾರೆ. ಅಕ್ಕ ಅಣ್ಣ ಓದುತ್ತಿರುತ್ತಾರೆ. ಮನೆಯಲ್ಲಂತೂ ಆಟವಾಡುವುದಕ್ಕೆ ಆಗೋದೇ ಇಲ್ಲ . ಮನೆಯ ಹೊರಗಡೆ ಹೋಗಿ ಅಂಗಳದಲ್ಲಿ ಆಡೋಣವೆಂದರೆ ಮಳೆಯ ಕಾಟ.  ಸ್ವಲ್ಪ ತಲೆ ತೊಳೆದರೆ ಸಾಕು ಅಮ್ಮ ಬೈಯೊದಕ್ಕೆ ಶುರು ಮಾಡುತ್ತಾರೆ. "ಮಳೆಯಲ್ಲಿ ಆಟವಾಡಿದಾಗ ನೆಗಡಿ ಕೆಮ್ಮು ಬಂದರೆ ಏನು ಗತಿ? ತೆಪ್ಪಗೆ ಮನೆಯಲ್ಲಿ ಇರಬಾರದೇ?" ಅನ್ನುತ್ತಾರೆ. ಮನೆಯಿಂದ ಹೊರಗೆ ಹೋಗುವುದೇ ಅಪರೂಪ . ಇದು ಪುಟ್ಟನ ಪರಿಸ್ಥಿತಿ ಅಷ್ಟೇ ಅಲ್ಲ ಊರಿನ ಎಲ್ಲ ಮಕ್ಕಳ ಪರಿಸ್ಥಿತಿಯು ಆಗಿತ್ತು.

ಆ ದಿನ ಮಳೆ ತುಂಬಾ ಜೋರಾಗಿ ಸುರಿಯುತ್ತಿತ್ತು . ಮಳೆಗೆ ತುಂಬಾ ಕೋಪ ಬಂದಿತ್ತು ಅಂತ ಕಾಣಿಸುತ್ತದೆ.  ಬಿಟ್ಟು ಬಿಡದೆ ಮಳೆ ಸುರಿಯುತ್ತಲೇ ಇತ್ತು.  ಮಧ್ಯಾಹ್ನದ ನಂತರ ಸಂಜೆ ಬರುವುದರೊಳಗೆ ಮಳೆರಾಯನಿಗೂ ಸೂರ್ಯನಿಗೂ ಅದಕ್ಕೇನೋ ಒಪ್ಪಂದವಾದಂತೆ ಕಾಣಿಸುತ್ತದೆ. ಮಳೆರಾಯ ಹೋಗಿಬಿಟ್ಟ . ರವಿಮಾಮ ಬಂದುಬಿಟ್ಟ . ತಿಳಿಬಿಸಿಲು ಎಲ್ಲೆಡೆ ಹರಡಿ ಬಿಡ್ತು . ಪುಟ್ಟನ ಮನೆಯ ಮುಂದೆ ನೀರು ಸಣ್ಣ ಹಳ್ಳದಂತೆ ಹರಿಯುತ್ತಲೇ ಇತ್ತು . ಸ್ವಲ್ಪ ಆಚೀಚೆ ನೋಡಿ ಅಪ್ಪ ಇಲ್ಲದ್ದನ್ನು ಕಂಡು ಮನೆಯಿಂದ ಹೊರಗಡೆ ಬಂದು ನೀರಿನ ಝರಿಯಲ್ಲಿ ನಿಂತು ಟಪ್ ಟಪ್ ಎಂದು ಪುಟ್ಟ ಜಿಗಿಯ ತೊಡಗಿದ.  ಸ್ವಚ್ಛವಾದ ಮಳೆ ನೀರು . ಪುಟ್ಟನ ಕಾಲುಗಳು ಸ್ವಚ್ಛವಾಗಿ ಹೊಳೆಯುತ್ತಿದ್ದವು. ಪುಟ್ಟನಿಗೆ ಅದೇನು ಖುಷಿಯೋ ಖುಷಿ.

 ಪುಟ್ಟ ಆಡೋದನ್ನು ಇತರೆ ಹುಡುಗರು ನೋಡಿ ಸುಮ್ಮನಿರಲಿಲ್ಲ. ಓಣಿಯ ಬಸವ , ಸೋಮ , ಕಿರಣ ಜಾನಿ ,  ಕಮಲ , ನೇತ್ರ ಹೀಗೆ ಎಲ್ಲಾ ಮಕ್ಕಳು ಒಂದು ಝರಿಯಲ್ಲಿ ನಿಂತು ನೀರಿನಲ್ಲಿ ಆಟವಾಡತೊಡಗಿದರು. ಪುಟ್ಟನಿಗೆ ಗೆಳೆಯನೊಬ್ಬನಿದ್ದ . ಅವನ ಹೆಸರು ಕಿರಣ ಎಲ್ಲರೂ ಅವನನ್ನು ಕಿಣ್ಯ ಎಂದು ಕರೆಯುತ್ತಿದ್ದರು.  ಸ್ವಲ್ಪ ಬುದ್ಧಿವಂತ . ನೀರು ಹರಿಯುವುದನ್ನು ನೋಡಿ ಥಟ್ಟಂತ ಅವನಿಗೆ ಏನೋ ಹೊಳೆದಂತೆ ಆಯಿತು. ಎಲ್ಲರನ್ನೂ ಕುರಿತು "ನಾನು ನಿಮಗೆಲ್ಲಾ ಒಂದು ಮಜಾ ತೋರಿಸ್ತೀನಿ. ನೋಡುವಿರಂತೆ ಇರಿ" ಅಂತ ಮನೆಕಡೆ ಓಡಿ ಹೋಗಿಬಿಟ್ಟ.  ಇವನಿಗೆ ಎಲ್ಲೋ ತಲೆಕೆಟ್ಟಿರಬೇಕು ಎಂದು ಎಲ್ಲರೂ ನೀರಲ್ಲಿ ಆಡತ್ತಿದ್ದರು. 

 ಕಿರಣ ಮನೆಯಿಂದ ಬಂದವನೇ ಕೈಯಲ್ಲಿ ಒಂದೆರಡು ದೋಣಿಗಳನ್ನು ಹಿಡಿದುಕೊಂಡು "ನೋಡಿ ಇಲ್ಲಿ , ನಾನು ದೋಣಿ ಓಡಿಸ್ತೀನಿ" ಅಂತ ಹೇಳಿ ನೀರಿನಲ್ಲಿ ದೋಣಿ ಬೆಟ್ಟ.  ಹರಿಯುವ ನೀರಲ್ಲಿ ದೋಣಿ ಬಿಟ್ಟಾಗ ಕೇಳಬೇಕೆ ದೋಣಿಗಳು ನಾಮುಂದು ತಾಮುಂದು ಎನ್ನುತ್ತಾ ಮುಂದೆ ಮುಂದೆ ಹೋಗಿಬಿಟ್ಟವು. ಎಲ್ಲರಿಗೂ ಮಜಾ ಅನಿಸಿತು . ಕಿರಣನಿಗೆ ಬಲು ಡಿಮ್ಯಾಂಡ್ ಬಂತು. ಎಲ್ಲರೂ ಕಿರಣೆನಿಗೆ "ಲೋ ಕಿಣ್ಯ ನಮಗೂ ದೋಣಿ ಮಾಡೋದು ಹೇಳಿ ಕೊಡೋ" ಅಂದರು. ಕಿರಣ ಗತ್ತಿನಿಂದ "ದೋಣಿ ಮಾಡೋದಕ್ಕೆ ಕಾಗದ ಬೇಕು. ಕಾಗದ ತಂದರೆ ಮಾಡಿಕೊಡುತ್ತೇನೆ " ಎಂದು ಹೇಳಿದ . ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಿ ತಮ್ಮ ನೋಟು ಪುಸ್ತಕದ  ಹಾಳೆಯನ್ನು ಹರಿದು ತಂದು ಕಿರಣನಿಗೆ ಕೊಟ್ಟರು. ಕಿರಣ ಪಾಳೆಯ ಪ್ರಕಾರವಾಗಿ ಎಲ್ಲರಿಗೂ ದೋಣಿ ಮಾಡಿಕೊಟ್ಟ . 

ಪುಟ್ಟನಿಗೆ ದೋಣಿ ಬೇಕು ಅಂತ ಆಸೆ ಆಯಿತು. ಮನೆಗೆ ಬಂದು ಒಂದು ಸಣ್ಣ ಕಾಗದ ತಂದು ಕಿರಣ ನಿಂದ  ದೋಣಿ ಮಾಡಿಸಿಕೊಂಡು ತಾನು ನೀರಿನಲ್ಲಿ ಬಿಟ್ಟ . ಎಲ್ಲಾ ಮಕ್ಕಳ ದೋಣಿಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೇ ಮುಂದಕ್ಕೆ ಹೊರಟವು. ಪುಟ್ಟನ ದೋಣಿಯ ಮೇಲೆ ಬಸವ ಆಯತಪ್ಪಿ ಕಾಲಿಟ್ಟ. ಪುಟ್ಟನ ದೊಇಣಿ ಅಪ್ಪಚ್ಚಿ ಆಯ್ತು.  ಪುಟ್ಟನಿಗೆ ತುಂಬಾ ದುಃಖ ಉಕ್ಕಿ ಬಂದಿತು ತನ್ನ ದೋಣಿ ಹಾಳು ಆಯ್ತಲ್ಲ ಅಂತ ಜೋರಾಗಿ ಅಳತೊಡಗಿದ.  ಪುಟ್ಟ ಅಳುವುದನ್ನು ಕಂಡು ಎಲ್ಲ ಹುಡುಗರು ಓಡಿಹೋಗಿಬಿಟ್ಟರು. ಪುಟ್ಟನ ಅಮ್ಮ ಬಂದು ಕಾರಣ ತಿಳಿದುಕೊಂಡರು. ಪುಟ್ಟನಿಗೆ ಸಮಾಧಾನ ಮಾಡಿ , "ನಿನಗೆ ವಿಶೇಷವಾದ ಬಣ್ಣದ ದೋಣಿ ಮಾಡಿಕೊಡುತ್ತೇನೆ ಅಳಬೇಡ' ಎಂದರು. ಅಮ್ಮ ಒಂದು ಬಣ್ಣದ ಕಾಗದದಿಂದ ದೊಡ್ಡ ದೋಣಿಯನ್ನು ಮಾಡಿಕೊಟ್ಟರು.

 ಈಗ ಪುಟ್ಟನ ದೋಣಿ ಎಲ್ಲರಿಗಿಂತ ದೊಡ್ಡದು ಹಾಗೂ ಸುಂದರವಾದ ಬಣ್ಣದ ದೋಣಿ.  ಪುಟ್ಟ ನೀರಿನಲ್ಲಿ ಬಣ್ಣದ ದೋಣಿಯನ್ನು ಬಿಟ್ಟಾಗ ಬಹಳ ಸುಂದರವಾಗಿ ಕಾಣತೊಡಗಿತು. ಪುಟ್ಟನಿಗೆ ತುಂಬಾ ತುಂಬಾನೆ ಖುಷಿಯಾಗಿ ಕುಣಿಯತೊಡಗಿದ. ಏನಾಯಿತು ಎಂದು ಎಲ್ಲ ಮಕ್ಕಳು ಮೆಲ್ಲನೆ ಬಂದು ಬಣ್ಣದ ದೋಣಿಯನ್ನು ನೋಡಿದರು . ಮಕ್ಕಳೆಲ್ಲ ಪುಟ್ಟನ ದೋಣಿಯನ್ನು ನೋಡಿ ಪುಟ್ಟನ ದೋಣಿ ಬಣ್ಣದ ದೋಣಿ" ಎಂದು ಕುಣಿದಾಡಿದರು.


=> ವೆಂಕಟೇಶ ಚಾಗಿ

Sahitya / Story / ಮಕ್ಕಳ ಕಥೆ - ಸಾಧನೆಯ ಹಾದಿ

  


ಸಾಧನೆಯ ಹಾದಿ




ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು.  ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು.


ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು  ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಭ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯ ನಿಗೆ " ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್ಥ ರೈತ." ಎಂದು ಹೀಯಾಳಿಸುತ್ತಿದ್ದನು. ರಾಮಯ್ಯ,  ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದನು.


ಒಂದು ದಿನ ಮಹಾರಾಜರು ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ  ಬಳಿ ಬಂದರು. ಸಮೃದ್ಧ ಫಸಲನ್ನು ಕಂಡು ಮಹಾರಾಜರು ಸಂತುಷ್ಠರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು  ರಾಮಯ್ಯನ ಕಾಯಕದ ಬಗ್ಗೆ ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ತುಂಬಾ ಸೆಳೆಯಿತು. ಮಾರುವೇಷದಲ್ಲಿದ್ದ ಮಹಾರಾಜರು ರಾಮಯ್ಯನಿಗೆ, " ರಾಮಯ್ಯ , ನಿನ್ನ ಕರ್ತವ್ಯ , ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ" ಎಂದಾಗ ,ರಾಮಯ್ಯ " ಬುದ್ದಿ ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ? " ಎಂದಾಗ , ಮಹಾರಾಜ " ಅರಮನೆಯ ಸೇವಕರಿಗೆ ನಾನೊಬ್ಬ ರೈತ . ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು ನನ್ನ ಬಳಿ ಕರೆದು ತರುತ್ತಾರೆ" ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.


  ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಬಗನ ಬಳಿ ಹೇಳಿದಾಗ , ಮಗ ಕಮಲಾಕರ " ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ ‌. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?" ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಬಂದಾಗ ಭಟರು ರಾಮಯ್ಯನನ್ನು ವಿಚಾರಿಸಿ ರೈತರ ಮಹಾಸೇವಕನಾದ ಮಹಾರಾಜರ ಬಳಿ ಕರೆದುಕೊಂಡು ಬರುತ್ತಾರೆ. ರಾಮಯ್ಯನಿಗೆ ದಿಘ್ರ್ಬಮೆಯಾಗುತ್ತದೆ. ಮಹಾರಾಜರು , ರಾಮಯ್ಯ ನ ಕೃಷಿ ಸಾಧನೆಯನ್ನು ಸಭಿಕರಿಗೆಲ್ಲಾ ತಿಳಿಸುತ್ತಾರೆ. ರಾಮಯ್ಯ ನನ್ನು ಮಹಾರಾಜರು ಸನ್ಮಾನಿಸುತ್ತಾರೆ.  ಇದನ್ನು ಕಂಡ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ.ಸಾಧನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯ ರೈತನಲ್ಲೂ ಸಾಧನೆಯ ಗುಣವಿದೆ. " ಎಂದಾಗ  ಅಂದಿನಿಂದ ಕಮಲಾಕರನೂ ತಂದೆಯ ಸಾಧನೆಯ ಹಾದಿಯನ್ನು ಹಿಡಿಯುತ್ತಾನೆ.



=> => ವೆಂಕಟೇಶ ಚಾಗಿ

Sahitya / Kavana/ ಮಕ್ಕಳ ಕವನ - ಮಳೆರಾಯ

  


**ಮಳೆರಾಯ ಬಂದ**




ಬಂದನು ಮಳೆರಾಯ
ಮನೆ ಮನೆ ಅಂಗಳಕೆ
ಹರಿಸಿದ ನೀರನ್ನು
ನಮ್ಮೂರಿನ ಕೆರೆಗೆ ||

ಸಂತಸ ಕಾಣುತಿದೆ
ರೈತರ ಮುಖದಲ್ಲಿ
ಚಿಗುರು ಮೂಡುತಿದೆ
ಹಸನಾದ ಹೊಲದಲ್ಲಿ ||

ಬೆಳ್ಳಕ್ಕಿ ಸಾಲೊಂದು
ಹಾರಿದೆ ಬಾನಲ್ಲಿ
ಗಿಳಿಗಳ ಹಿಂಡೊಂದು
ಚಿಲಿಪಿಲಿ ನೋಡಲ್ಲಿ ||

ಕಾಮನ ಬಿಲ್ಲಿನಲಿ
ಏಳು ಬಣ್ಣಗಳು
ಬಾನಿಂದ ಈ ಇಳೆಗೆ
ಜಾರಿವೆ ಹನಿಗಳು ||

ಮಕ್ಕಳ ಸಂತಸವೇ
ತುಂಬಿದೆ ಎಲ್ಲೆಲ್ಲೂ
ಹಸಿರಿನ ತೋರಣವೇ
ಬೆಟ್ಟದ ಮೇಲೆಲ್ಲೂ ||

ಚಿಣ್ಣರ ಲೋಕದಲಿ
ಮಳೆರಾಯ ಬಂದಾಯ್ತು
ಬಣ್ಣದ ಕನಸುಗಳ
ಮನದಲಿ ತಂದಾಯ್ತು ||


=> ವೆಂಕಟೇಶ ಚಾಗಿ

Sunday, 14 January 2024

Class / 4th / english / arrange the letters in the correct order

 

TRFEOS - 




A

👉Adarsha exam - ಮಾದರಿ ಪ್ರಶ್ನೆ ಪತ್ರಿಕೆ

C

👉Corona statistics in india

👉Childre's songs - ಚಿಕ್ಕ ಮಕ್ಕಳ ಪದ್ಯಗಳು

D

👉DA AND INCREMENT

E

👉English - singular plural

G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN

👉HEALTH EDUCATIIN - ಆರೋಗ್ಯ ಶಿಕ್ಷಣ



I

👉Income tax - IT RETURN


K

👉KCSR RULES - KCSR ನಿಯಮಗಳು

👉KGID LOGIN - WEBSITE


L

👉LESSON PLANS - ಪಾಠ ಯೋಜನೆಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

👉MURARJI SCHOOL EXAM - ಅರ್ಜಿ, ಫಲಿತಾಂಶ, ಪ್ರಶ್ನೆಪತ್ರಿಕೆಗಳು

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

👉NAVODAYA ಪರೀಕ್ಷೆ - ಅರ್ಜಿ , ಹಾಲ್ ಟಿಕೆಟ್ ಡೌನ್ಲೋಡ್

👉NOTES - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SATS LOGIN - SATS ಲಾಗ್ ಇನ್

👉SCHOLERSHIP - ಶಿಷ್ಯವೇತನ

👉School education New website

👉SCHOLERSHIP - ಶಿಷ್ಯವೇತನ

👉SEARCH SCHOLERSHIP - ಶಿಷ್ಯವೇತನ ಜಮಾ ವಿವರ

👉SDMC ಸಮಗ್ರ

👉SR - SERVICE BOOK - ಸೇವಾ ಪುಸ್ತಕ

👉Siddaganga school - ಸಿದ್ದಗಂಗಾ ಮಠದ ಶಾಲಾ ಪ್ರವೇಶಾತಿ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ

👉TOFIE - CLICK HERE

U

👉U dice + - teacher , student

V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್

👉VOTER ID LOG IN


Y

👉YOGA - ಯೋಗ ಕೈಪಿಡಿ

Monday, 8 January 2024

Class / ಸಾಮಾನ್ಯ ಜ್ಞಾನ / 1 to 5 std ಸಂಬಂಧಿತ ಪ್ರಶ್ನೋತ್ತರಗಳು

ಕನ್ನಡದಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ 49 ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ ಮೂರು ಸ್ವರಾಕ್ಷರಗಳ ಸಂಖ್ಯೆ ಎಷ್ಟು? 13 ವ್ಯಂಜನಾಕ್ಷರಗಳ ಸಂಖ್ಯೆ ಎಷ್ಟು? 34 ವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ ಎಷ್ಟು 25 ಅವರ್ಗಿಯ ವ್ಯಂಜನಾಕ್ಷರಗಳ ಸಂಖ್ಯೆ ಎಷ್ಟು 9 ಯೋಗವಾಹಗಳ ಸಂಖ್ಯೆ ಎಷ್ಟು? ಎರಡು ರೂಢನಾಮಕ್ಕೆ ಒಂದು ಉದಾಹರಣೆ ಕೊಡಿ ನದಿ ಅಂಕಿತನಾಮಕ್ಕೆ ಒಂದು ಉದಾಹರಣೆ ಕೊಡಿ ಬಸವ ಅನ್ವರ್ಥನಾಮಕ್ಕೆ ಒಂದು ಉದಾಹರಣೆ ಕೊಡಿ ಕುರುಡ ವಿಭಕ್ತಿ ಪ್ರತ್ಯೇಗಳ ಸಂಖ್ಯೆ ಎಷ್ಟು? ಏಳು



A

👉Adarsha exam - ಮಾದರಿ ಪ್ರಶ್ನೆ ಪತ್ರಿಕೆ

C

👉Corona statistics in india

👉Childre's songs - ಚಿಕ್ಕ ಮಕ್ಕಳ ಪದ್ಯಗಳು

D

👉DA AND INCREMENT

E

👉English - singular plural

G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN

👉HEALTH EDUCATIIN - ಆರೋಗ್ಯ ಶಿಕ್ಷಣ



I

👉Income tax - IT RETURN


K

👉KCSR RULES - KCSR ನಿಯಮಗಳು

👉KGID LOGIN - WEBSITE


L

👉LESSON PLANS - ಪಾಠ ಯೋಜನೆಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

👉MURARJI SCHOOL EXAM - ಅರ್ಜಿ, ಫಲಿತಾಂಶ, ಪ್ರಶ್ನೆಪತ್ರಿಕೆಗಳು

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

👉NAVODAYA ಪರೀಕ್ಷೆ - ಅರ್ಜಿ , ಹಾಲ್ ಟಿಕೆಟ್ ಡೌನ್ಲೋಡ್

👉NOTES - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SATS LOGIN - SATS ಲಾಗ್ ಇನ್

👉SCHOLERSHIP - ಶಿಷ್ಯವೇತನ

👉School education New website

👉SCHOLERSHIP - ಶಿಷ್ಯವೇತನ

👉SEARCH SCHOLERSHIP - ಶಿಷ್ಯವೇತನ ಜಮಾ ವಿವರ

👉SDMC ಸಮಗ್ರ

👉SR - SERVICE BOOK - ಸೇವಾ ಪುಸ್ತಕ

👉Siddaganga school - ಸಿದ್ದಗಂಗಾ ಮಠದ ಶಾಲಾ ಪ್ರವೇಶಾತಿ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ

👉TOFIE - CLICK HERE

U

👉U dice + - teacher , student

V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್

👉VOTER ID LOG IN


Y

👉YOGA - ಯೋಗ ಕೈಪಿಡಿ

Friday, 5 January 2024

4th / maths / money / ಹಣ / ರೂಪಾಯಿಗಳನ್ನು ಕಳೆಯಿರಿ

  


1) ₹7 ರಿಂದ ₹ 8.50 ನ್ನು ಕಳೆ


 2) ₹45.35 ರಿಂದ ₹ 8.50 ನ್ನು ಕಳೆ


 3) ₹29.60 ರಿಂದ ₹ 18.50 ನ್ನು ಕಳೆ


 4) ₹71 ರಿಂದ ₹ 9.50 ನ್ನು ಕಳೆ


 5) ₹75 ರಿಂದ ₹ 18.50ನ್ನು ಕಳೆ


 6) ₹61 ರಿಂದ ₹ 78.50 ನ್ನು ಕಳೆ


 7) ₹67 ರಿಂದ ₹ 28.50ನ್ನು ಕಳೆ


 8) ₹76 ರಿಂದ ₹ 8.30ನ್ನು ಕಳೆ


 9) ₹74 ರಿಂದ ₹ 48.50ನ್ನು ಕಳೆ


 10) ₹6.60 ರಿಂದ ₹ 18.50ನ್ನು ಕಳೆ


 11) ₹50.50 ರಿಂದ ₹ 8.50 ನ್ನು ಕಳೆ


 12) ₹44.50 ರಿಂದ ₹ 55.50ನ್ನು ಕಳೆ


 13) ₹73 ರಿಂದ ₹ 58.50 ನ್ನು ಕಳೆ


 14) ₹17 ರಿಂದ ₹ 5.50 ನ್ನು ಕಳೆ


 15) ₹76 ರಿಂದ ₹ 84.50 ನ್ನು ಕಳೆ


 16) ₹72 ರಿಂದ ₹ 84.50 ನ್ನು ಕಳೆ


 17) ₹78 ರಿಂದ ₹ 15.50 ನ್ನು ಕಳೆ


 18) ₹70 ರಿಂದ ₹ 54.50 ನ್ನು ಕಳೆ


 19) ₹35 ರಿಂದ ₹ 74.50 ನ್ನು ಕಳೆ


 20) ₹63 ರಿಂದ ₹ 43.50 ನ್ನು ಕಳೆ


 21) ₹84 ರಿಂದ ₹ 43.50 ನ್ನು ಕಳೆ


 22) ₹27 ರಿಂದ ₹ 52.50ನ್ನು ಕಳೆ


 23) ₹53 ರಿಂದ ₹ 83.30ನ್ನು ಕಳೆ


 24) ₹36 ರಿಂದ ₹ 65.50ನ್ನು ಕಳೆ


 25) ₹43.56 ರಿಂದ ₹ 63.50ನ್ನು ಕಳೆ


 26) ₹26.50 ರಿಂದ ₹ 56.50 ನ್ನು ಕಳೆ


 27) ₹35.20 ರಿಂದ ₹ 18.50ನ್ನು ಕಳೆ


 28) ₹57.20 ರಿಂದ ₹ 48.50ನ್ನು ಕಳೆ


 29) ₹73.80 ರಿಂದ ₹ 78.50 ನ್ನು ಕಳೆ


 30) ₹74.70 ರಿಂದ ₹ 68.50 ನ್ನು ಕಳೆ










A

👉Adarsha exam - ಮಾದರಿ ಪ್ರಶ್ನೆ ಪತ್ರಿಕೆ

C

👉Corona statistics in india

👉Childre's songs - ಚಿಕ್ಕ ಮಕ್ಕಳ ಪದ್ಯಗಳು

D

👉DA AND INCREMENT

E

👉English - singular plural

G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN

👉HEALTH EDUCATIIN - ಆರೋಗ್ಯ ಶಿಕ್ಷಣ



I

👉Income tax - IT RETURN


K

👉KCSR RULES - KCSR ನಿಯಮಗಳು

👉KGID LOGIN - WEBSITE


L

👉LESSON PLANS - ಪಾಠ ಯೋಜನೆಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

👉MURARJI SCHOOL EXAM - ಅರ್ಜಿ, ಫಲಿತಾಂಶ, ಪ್ರಶ್ನೆಪತ್ರಿಕೆಗಳು

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

👉NAVODAYA ಪರೀಕ್ಷೆ - ಅರ್ಜಿ , ಹಾಲ್ ಟಿಕೆಟ್ ಡೌನ್ಲೋಡ್

👉NOTES - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SATS LOGIN - SATS ಲಾಗ್ ಇನ್

👉SCHOLERSHIP - ಶಿಷ್ಯವೇತನ

👉School education New website

👉SCHOLERSHIP - ಶಿಷ್ಯವೇತನ

👉SEARCH SCHOLERSHIP - ಶಿಷ್ಯವೇತನ ಜಮಾ ವಿವರ

👉SDMC ಸಮಗ್ರ

👉SR - SERVICE BOOK - ಸೇವಾ ಪುಸ್ತಕ

👉Siddaganga school - ಸಿದ್ದಗಂಗಾ ಮಠದ ಶಾಲಾ ಪ್ರವೇಶಾತಿ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ

👉TOFIE - CLICK HERE

U

👉U dice + - teacher , student

V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್

👉VOTER ID LOG IN


Y

👉YOGA - ಯೋಗ ಕೈಪಿಡಿ

4th / maths / ರೂಪಾಯಿಗಳನ್ನು ಕೂಡಿ

 


1) ₹7 ನ್ನು ₹ 8.50 ಕ್ಕೆ ಕೂಡು


 2) ₹45.35 ನ್ನು ₹ 8.50 ಕ್ಕೆ ಕೂಡು


 3) ₹29.60ನ್ನು ₹ 18.50 ಕ್ಕೆ ಕೂಡು


 4) ₹71 ನ್ನು ₹ 9.50 ಕ್ಕೆ ಕೂಡು


 5) ₹75 ನ್ನು ₹ 18.50 ಕ್ಕೆ ಕೂಡು


 6) ₹61 ನ್ನು ₹ 78.50 ಕ್ಕೆ ಕೂಡು


 7) ₹67 ನ್ನು ₹ 28.50 ಕ್ಕೆ ಕೂಡು


 8) ₹76 ನ್ನು ₹ 8.30 ಕ್ಕೆ ಕೂಡು


 9) ₹74 ನ್ನು ₹ 48.50 ಕ್ಕೆ ಕೂಡು


 10) ₹6.60 ನ್ನು ₹ 18.50 ಕ್ಕೆ ಕೂಡು


 11) ₹50.50 ನ್ನು ₹ 8.50 ಕ್ಕೆ ಕೂಡು


 12) ₹44.50 ನ್ನು ₹ 55.50 ಕ್ಕೆ ಕೂಡು


 13) ₹73 ನ್ನು ₹ 58.50 ಕ್ಕೆ ಕೂಡು


 14) ₹17 ನ್ನು ₹ 5.50 ಕ್ಕೆ ಕೂಡು


 15) ₹76 ನ್ನು ₹ 84.50 ಕ್ಕೆ ಕೂಡು


 16) ₹72 ನ್ನು ₹ 84.50 ಕ್ಕೆ ಕೂಡು


 17) ₹78 ನ್ನು ₹ 15.50 ಕ್ಕೆ ಕೂಡು


 18) ₹70 ನ್ನು ₹ 54.50 ಕ್ಕೆ ಕೂಡು


 19) ₹35 ನ್ನು ₹ 74.50 ಕ್ಕೆ ಕೂಡು


 20) ₹63 ನ್ನು ₹ 43.50 ಕ್ಕೆ ಕೂಡು


 21) ₹84 ನ್ನು ₹ 43.50 ಕ್ಕೆ ಕೂಡು


 22) ₹27 ನ್ನು ₹ 52.50 ಕ್ಕೆ ಕೂಡು


 23) ₹53 ನ್ನು ₹ 83.30 ಕ್ಕೆ ಕೂಡು


 24) ₹36 ನ್ನು ₹ 65.50 ಕ್ಕೆ ಕೂಡು


 25) ₹43.56 ನ್ನು ₹ 63.50 ಕ್ಕೆ ಕೂಡು


 26) ₹26.50 ನ್ನು ₹ 56.50 ಕ್ಕೆ ಕೂಡು


 27) ₹35.20 ನ್ನು ₹ 18.50 ಕ್ಕೆ ಕೂಡು


 28) ₹57.20 ನ್ನು ₹ 48.50 ಕ್ಕೆ ಕೂಡು


 29) ₹73.80 ನ್ನು ₹ 78.50 ಕ್ಕೆ ಕೂಡು


 30) ₹74.70 ನ್ನು ₹ 68.50 ಕ್ಕೆ ಕೂಡು



A

👉Adarsha exam - ಮಾದರಿ ಪ್ರಶ್ನೆ ಪತ್ರಿಕೆ

C

👉Corona statistics in india

👉Childre's songs - ಚಿಕ್ಕ ಮಕ್ಕಳ ಪದ್ಯಗಳು

D

👉DA AND INCREMENT

E

👉English - singular plural

G

👉GPF STATEMENT

👉Gaade maatu - ಗಾದೆ ಮಾತುಗಳು


H

👉HRMS LOGIN

👉HEALTH EDUCATIIN - ಆರೋಗ್ಯ ಶಿಕ್ಷಣ



I

👉Income tax - IT RETURN


K

👉KCSR RULES - KCSR ನಿಯಮಗಳು

👉KGID LOGIN - WEBSITE


L

👉LESSON PLANS - ಪಾಠ ಯೋಜನೆಗಳು

M


👉Modal schools - ಮಾದರಿ ಶಾಲೆಗಳು

👉MORAL EDUCATION - ಮೌಲ್ಯ ಶಿಕ್ಷಣ

👉Maps - - all village maps of karnataka

👉MURARJI SCHOOL EXAM - ಅರ್ಜಿ, ಫಲಿತಾಂಶ, ಪ್ರಶ್ನೆಪತ್ರಿಕೆಗಳು

N

👉NEWS PAPERS - ದಿನಪತ್ರಿಕೆಗಳು

👉NALI KALI WORDS - ನಲಿಕಲಿ ಶಬ್ದಗಳು

👉Nalikali rhymes - ನಲಿಕಲಿ ಹಾಡುಗಳು

👉NMMS

👉NALIKALI SONGS - ನಲಿಕಲಿ ಹಾಡುಗಳು

👉NAVODAYA ಪರೀಕ್ಷೆ - ಅರ್ಜಿ , ಹಾಲ್ ಟಿಕೆಟ್ ಡೌನ್ಲೋಡ್

👉NOTES - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗಳು

O

👉Oduve nanu cards - ಓದುವೆ ನಾನು ಕಾರ್ಡ್ ಗಳು

👉Orders - ಆದೇಶಗಳು , ಸುತ್ತೋಲೆಗಳು

P

👉PRATHIBHA KARANJI - ಪ್ರತಿಭಾ ಕಾರಂಜಿ

👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್


S

👉SATS LOGIN - SATS ಲಾಗ್ ಇನ್

👉SCHOLERSHIP - ಶಿಷ್ಯವೇತನ

👉School education New website

👉SCHOLERSHIP - ಶಿಷ್ಯವೇತನ

👉SEARCH SCHOLERSHIP - ಶಿಷ್ಯವೇತನ ಜಮಾ ವಿವರ

👉SDMC ಸಮಗ್ರ

👉SR - SERVICE BOOK - ಸೇವಾ ಪುಸ್ತಕ

👉Siddaganga school - ಸಿದ್ದಗಂಗಾ ಮಠದ ಶಾಲಾ ಪ್ರವೇಶಾತಿ

T

👉Text Books - ಸರಕಾರಿ ಪಠ್ಯ ಪುಸ್ತಕಗಳು

👉Tatsama- tadbava - ತತ್ಸಮ - ತದ್ಬವ

👉TOFIE - CLICK HERE

U

👉U dice + - teacher , student

V

👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ

👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್

👉VOTER ID LOG IN


Y

👉YOGA - ಯೋಗ ಕೈಪಿಡಿ

LBA Question papers | orders | formats | vktworld

  👉  LBA ORDERS ಆದೇಶಗಳು       👉  LBA ನಮೂನೆಗಳು 👉  Question papers      ನಲಿಕಲಿ question papers ಕ...