Sunday, 4 February 2024

Sahitya / kavana / devare nineshtu olleyavanu / ಕವನ / ಕವಿತೆ / ದೇವರೇ, ನೀನೆಷ್ಟು ಒಳ್ಳೆಯವನು / ವೆಂಕಟೇಶ ಚಾಗಿ / venkatesh chagi


 

***ದೇವರೇ, ನೀನೆಷ್ಟು ಒಳ್ಳೆಯವನು..!!**



ದೇವರೇ,
ನಿನ್ನ ಸ್ವರ್ಗವನ್ನು ನಾವೀಗ
ಆಧುನಿಕವಾಗಿ ಬದಲಾಯಿಸಿದ್ದೇವೆ
ಕಾಂಕ್ರೀಟ್ ಕಾಡುಗಳು
ಅಗಲವಾದ ಉದ್ದವಾದ ರಸ್ತೆಗಳು
ಮಣ್ಣು ಕಾಣದ ಕೆಂಪು ಹಾಸು
ಆಕಾಶಕ್ಕೆ ಕಪ್ಪು ಬಣ್ಣ
ಗಾಳಿಗಿಷ್ಟು ಸುಗಂಧ ದ್ರವ್ಯ
ಎಲ್ಲವೂ ಸುಂದರ ನಮಗಾಗಿ
ಎಲ್ಲವನ್ನೂ ನೋಡಿ
ನಗುತ್ತಲೇ ಇರುವೆ
ದೇವರೇ, ನೀನೆಷ್ಟು ಒಳ್ಳೆಯವನು..!!

ನಿನ್ನ ಮನೆ ಈಗ
ಸಾವಿರಾರು ಮನೆಗಳು
ಧರ್ಮಕ್ಕೆ, ಜಾತಿಗೆ , ಕ್ರಾಂತಿಗೆ;
ಗಡಿಗಳೊಳಗೆ ನೀನು ನಾವು ಬಂಧಿ
ಗಡಿಯಾಚೆಗಿನ ನೋವು ಹಸಿವು
ಖಂಡಿತ ನಮ್ಮದಲ್ಲ
ಗಡಿದಾಟಿ ಹಾರುತ್ತಿವೆ 
ಮೂರ್ಖ ಹಕ್ಕಿಗಳು ನಕ್ಷತ್ರಗಳು
ಎಲ್ಲದಕ್ಕೂ ನಿನ್ನ ಮೌನವೇ ಉತ್ತರ
ದೇವರೇ, ನೀನೆಷ್ಟು ಒಳ್ಳೆಯವನು..!!

ಪ್ರಾಣಿಗಳೆಲ್ಲಾ ದೇಹ ಹೊಕ್ಕಿವೆ
ನೈತಿಕತೆಯ ಹೆಸರಿನಲ್ಲಿ
ಸ್ವಾರ್ಥದ ಕೆಸರು ಗಟ್ಟಿಯಾಗಿದೆ
ಎಲ್ಲವೂ ನಿನ್ನಿಂದಲೇ ನಿನಗಾಗಿಯೇ
ನೀನು ಅಲ್ಲಿ ಶ್ರೀಮಂತನು
ಇಲ್ಲಿ ನಮಗಿಂತಲೂ ಕಡು ಬಡವನು
ನಿನಗಾಗಿ ಕೊಡದಿರುವುದು ಏನದೆ
ನಗುತ್ತ ಕುಳಿತಿರುವೆ
ನಾಲ್ಕು ಗೋಡೆಗಳ ನಡುವೆ
ದೇವರೇ, ನೀನೆಷ್ಟು ಒಳ್ಳೆಯವನು..!!


ನಿನ್ನ ಕರುಣೆಗಾಗಿ 
ಅದೆಷ್ಟು ಪ್ರಾರ್ಥನೆಗಳು ಪೂಜೆಗಳು
ಬಡವರು ಬಡವರಾಗಿ
ಶ್ರೀಮಂತರು ಶ್ರೀಮಂತರಾಗಿ
ಮೂಕಜೀವಿಗಳು ಮೂಕವಾಗಿ
ಸತ್ಯಗಳು ಅಸತ್ಯಗಳಾಗಿ
ಎಲ್ಲವನ್ನೂ ನೋಡುತ್ತಿರುವೆ
ನಿನಗಿರುವ ಸಹನೆ ಯಾರಿಗೂ ಇಲ್ಲ
ತೆಗಳಿದರೂ ಹೊಗಳಿದರೂ
ಆರಾಧಿಸಿದರೂ ಕಡೆಗಣಿಸಿದರೂ
ಕೊಟ್ಟರೂ ಕೊಡದಿದ್ದರೂ
ನಿನ್ನ ಪ್ರತಿಕ್ರಿಯೆ ಏನೂ ಇಲ್ಲ
ದೇವರೇ, ನೀನೆಷ್ಟು ಒಳ್ಳೆಯವನು..!!



=> ವೆಂಕಟೇಶ ಚಾಗಿ
















A

👉Adarsha exam (A142)

👉ANUDANA BALAKE - ಅನುದಾನ ಬಳಕೆ (A137)

👉Alvas ಮೂಡಬಿದರೆ school Admission (A141)

👉Assistant profecer exam qp (B107)

C

👉Corona statistics india A117

👉CASTE INCOME CERTIFICATE (A146)

👉CATOGARY 3A CASTES (B109)

👉CAT 1 CASTES (B110)

D

👉

👉DIKSHA P0RTAL (A143)

E

👉EEDS LOGIN (A148)

👉Egg calculation (A139)

👉English figuers of speech (B105)

F

👉FA 1 (A131)

👉FA 2 (A132)

👉FA 3 (A133 )

👉FA 4 (A134)

G

👉

👉General Quiz (A140)

👉GPF STATEMENT A122


H

👉

👉Health tips - ಆರೋಗ್ಯ ಸಲಹೆಗಳು A110

👉HRMS LOGIN A125

👉High school ನೇಮಕಾತಿ -ಅರ್ಹತೆ- ವಿಧಾನ- ಪರೀಕ್ಷೆ (A149)


I

👉Income tax - IT RETURN (A112)

J

👉

👉JANAPADA - ಜನಪದ ಹಾಡುಗಳು - A103

👉JAYANTI - ಜಯಂತಿಗಳು ಮತ್ತು ರಜೆಗಳು 2024 - A108

K

👉 KCSR RULES IN OFFICE A120

👉KSQAAC EXAMS (A144)

👉KARTET - LOGIN - RESULT (A150)


L

👉LESSON PLANS - ಪಾಠ ಯೋಜನೆಗಳು - A105


M


👉

👉

👉

👉

👉 MURARJI - ಮುರಾರ್ಜಿ ಪರೀಕ್ಷೆ - ಅರ್ಜಿ ,ಫಲಿತಾಂಶ ಇತರೆ - A104

👉MATHS FORMULA-ಗಣಿತ ಸೂತ್ರಗಳು (A130)

N

👉NEWS PAPERS - ದಿನಪತ್ರಿಕೆಗಳು (A119)

👉NOTES 4 -10 (A126)

👉NAVODAYA EXAM (A145)

👉NUDIGATTUGALU - ನುಡಿಗಟ್ಟುಗಳು (B101)

👉ನಲಿಕಲಿ ಸರಳ ಶಬ್ದಗಳು (B103)

👉

👉

👉NOTES 4 -10 - ಪಠ್ಯ ಪುಸ್ತಕಗಳ ಪ್ರಶ್ನೋತ್ತರಗ (A126 )

O

👉ODUVE NANU - ಓದುವೆ ನಾನು ಕಾರ್ಡುಗಳು A123

P

👉

👉

👉PAN CARD - A102

👉PANCHANGA - ಇಂದಿನ ಪಂಚಾಂಗ (A138)

👉puc 2nd  maths exam points (B104)

Q

👉QUIZ - 250 QUESTIONS ABOUT CONSTITUTION (B111)


S

👉SA 1 (A135)

👉SA 2 ( A136 )

👉

👉Sarkari corner - A109

👉SIDDAGANGA - ಸಿದ್ದಗಂಗಾ ಶಾಲಾ ಪ್ರವೇಶ A113

👉School news A111

👉SR BOOK - ಸೇವಾ ಪುಸ್ತಕ A107

👉SONGS - ಸುಶ್ರಾವ್ಯ ಹಾಡುಗಳು A101

👉Singular plural (ನಿಯಮದಂತೆ ) - A106

👉SONGS - ಚಿಕ್ಕ ಮಕ್ಕಳ ಪದ್ಯಗಳು A114

👉ಸಾಧನಾ ಕಾರ್ಡುಗಳು (B102)

👉STHOTRAGALU ಕ್ಕಳಿಗಾಗಿ ಸ್ತೋತ್ರಗಳು (B112)

👉SSLC HINDI PASSING PACKEGE (B113)

👉SSLC ESSAY & LETTER WRITING (B114)

👉SSLC HINDI PASSING PACKEGE MADAD (B115)

T

👉

👉ToFie Log in A116

👉Text books  A118

👉Tables 5&6 (B106)

U

👉

V

👉Vehicle details RTO A121

👉Voter id login A115

👉U - dice plus log in A124

👉VOTERS LIST - ತದಾರರ ಪಟ್ಟಿ (B108)


Y

👉


Saturday, 3 February 2024

Sahitya / kavana / makkala kavana / ಮಕ್ಕಳ ಕವನ / ಕಾಮನಬಿಲ್ಲು / by venkatesh chagi / ವೆಂಕಟೇಶ ಚಾಗಿ

  


ಕಾಮನಬಿಲ್ಲು




ಏಳು ಬಣ್ಣದ ಕಾಮನಬಿಲ್ಲು
ನೋಡಲು ಎಷ್ಟು ಸುಂದರ
ಸಂಜೆ ಬಾನಿಗೆ ಅಂದಚಂದ
ಭೂಮಿಯೆ ದೇವರ ಮಂದಿರ ||

ತುಂತುರು ಹನಿಗಳ ತಂದಾನ
ದೇವರು ನೀಡಿದ ಅಭಿದಾನ
ಮೋಡದ ನಡುವೆ ರವಿ ಬಂದ
ಕಾಮನಬಿಲ್ಲನು ನೋಡುತ ನಿಂತ ||

ಎಲೆಯ ಮೇಲಿನ ಹನಿಯಲ್ಲಿ
ಕಾಮನಬಿಲ್ಲನು ನಾ ಕಂಡೆ
ಅಮ್ಮನ ಕರೆದು ಬಣ್ಣಗಳೆಣಿಸಿ
ಬೊಗಸೆಯಲ್ಲಿ ಹಿಡಿದುಕೊಂಡೆ ||

ಬಂದರು ಗೆಳೆಯರು ಅಂಗಳಕೆ
ಕಾಮನಬಿಲ್ಲನು ನೋಡಲಿಕೆ
ಕೆಕೆಯ ಹಾಕಿ ಬಂಡೆಯ ಏರಿ
ಜಿಗಿದೆವು ಎಲ್ಲರೂ ಆಕಾಶಕ್ಕೆ ||


ಸೂರ್ಯನು ಈಗ ಮುಳುಗಿದನು
ಅಮ್ಮನ ಮಡಿಲನು ಸೇರಿದನು
ಕಾಮನ ಬಿಲ್ಲದು ಮರೆಯಾಯ್ತು
ನಮ್ಮಯ ಕಣ್ಣಲಿ ಸೆರೆಯಾಯ್ತು ||


=> ವೆಂಕಟೇಶ ಚಾಗಿ

9611311195









Images : pixabay.com

Thursday, 1 February 2024

Sahitya / kavana / makkala kavana / ಮಕ್ಕಳ ಕವನ / ಗೆಲುವು / by venkatesh chagi / ವೆಂಕಟೇಶ ಚಾಗಿ



 ಗೆಲುವು



ಹತ್ತು ಹತ್ತು ಇಪ್ಪತ್ತು
ಓಟದ ಆಟವು ನಡೆತಿದ್ದು|


ಇಪ್ಪತ್ತು ಹತ್ತು ಮುವತ್ತು
ಆಮೆ ಮೊಲಕೆ ಓಟವು ನಡೆದಿತ್ತು


ಮುವತ್ತು ಹತ್ತು ನಲವತ್ತು
ಮೊಲವು ಓಟದಿ ಮುಂದಿತ್ತು


ನಲವತ್ತು ಹತ್ತು ಐವತ್ತು
ಆಮೆಯು ಮೆಲ್ಲಗೆ ನಡೆದಿತ್ತು


ಐವತ್ತು ಹತ್ತು ಅರವತ್ತು
ಮೊಲವು ಮರದಡಿ ಮಲಗಿತ್ತು


ಅರವತ್ತು ಹತ್ತು ಎಪ್ಪತ್ತು
ಆಮೆಯು ಗುರಿಯನು ಮುಟ್ಟಿತ್ತು


ಎಪ್ಪತ್ತು ಹತ್ತು ಎಂಬತ್ತು
ಮೊಲಕೆ ಎಚ್ಚರವಾಗಿತ್ತು

ಎಂಬತ್ತು ಹತ್ತು ತೊಂಬತ್ತು
ಆಮೆಯು ಆಟದಿ ಗೆದ್ದಿತು

ತೊಂಬತ್ತು ಹತ್ತು ನೂರು
ಈಕಥೆ ನೀತಿಯ ಸಾರು ||


✍ವೆಂಕಟೇಶ ಚಾಗಿ




School / C101 / science / simple experiments / ವಿಜ್ಞಾನದ ಸರಳ ಪ್ರಯೋಗಗಳು

 


























































LBA Question papers | orders | formats | vktworld

  👉  LBA ORDERS ಆದೇಶಗಳು       👉  Question papers      Header Cell Cell ...