Tuesday, 10 September 2024
ಮಕ್ಕಳ ಕವನ | ನಮ್ಮೂರ ಜಾತ್ರೆ | ವೆಂಕಟೇಶ ಚಾಗಿ | makkala kavana | nammoora jatre | venkatesh chagi
**ನಮ್ಮೂರ ಜಾತ್ರೆ***
ಬಂತು ಬಂತು ನಮ್ಮೂರ ಜಾತ್ರೆ
ಹೇಳಿಬಿಡುವೆ ಜಾತ್ರೆಯ ವಾರ್ತೆ
ಬನ್ನಿರಿ ನೀವು ಮರೆಯದೆ ಊರಿಗೆ
ನಮಿಸಲು ನಮ್ಮ ದೇವರ ತೇರಿಗೆ ||
ಬಣ್ಣ ಬಣ್ಣದ ಬಳೆಗಳ ನೋಟ
ಗಿಲ್ ಗಲ್ ಗೆಜ್ಜೆಯ ಬಂಡಿ ಓಟ
ರೈಲಲಿ ಕುಳಿತು ಸುತ್ತೋಣ
ಜೋಕಾಲಿ ಜೀಕುತ ನಲಿಯೋಣ ||
ಹಣ್ಣು ಕಾಯಿ ದೇವರ ಮಡಿಲಿಗೆ
ಬೆಂಡು ಬೆತ್ತಾಸು ನಮ್ಮ ಬಾಯಿಗೆ
ಅಣ್ಣ ತಮ್ಮ ಅಕ್ಕ ತಂಗಿ
ಸೇರಿ ನಲಿಯುವ ಕಷ್ಟವ ನುಂಗಿ ||
ಬಜ್ಜಿ ಬೋಂಡಾ ಬದನೆಕಾಯಿ
ಕಂಡಿದ್ದೇಲ್ಲಾ ಬೇಡೀತು ಬಾಯಿ
ಮಾತು ಕಥೆಗಳ ಸಮಯದಲಿ
ಕೈಯಲಿ ಇರಲಿ ಕಡಲೆಕಾಯಿ..||
ಜಾತ್ರೆಗೆ ಬಂದ ಜನರೆಲ್ಲಾ
ತೇರನು ಎಳೆದು ನಮಿಸುವರೆಲ್ಲಾ
ಬಣ್ಣದ ಬಲೂನು ಪೀಪಿಯ ಶಬ್ದ
ಜಾತ್ರೆಯ ಖುಷಿಗೆ ನೋವೆ ಸ್ಥಬ್ದ ..||
.
=> ವೆಂಕಟೇಶ ಚಾಗಿ
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment