Tuesday, 6 May 2025

KSGEA SCHOLARSHIP - ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

  *ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ*

ಕಬ್ಬನ್ ಉದ್ಯಾನವನ, ಬೆಂಗಳೂರು-01


*ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025*



*ಆತ್ಮೀಯ ನೌಕರ ಬಾಂಧವರೇ......*

 *2025ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.*

-------------------------


_*ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು.*_


https://ksgeanews.blogspot.com/2025/05/sslc-puc-2025.html 



 *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2025.*


*Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ.*

-----*-*-*-*-*-*-*-*-*--------


*_ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು_*


* ವಿದ್ಯಾರ್ಥಿಯು 2025ರ SSLC & PUC  ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.    

* ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು. 

* ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ.

---*-*-*-*-*-*-*-*-*-*-*---


*Online ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು.*


* ವಿದ್ಯಾರ್ಥಿಯ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

* ದೃಢೀಕೃತ ಅಂಕಪಟ್ಟಿ

* ಇಲಾಖೆಯ ಸೇವಾ ದೃಢೀಕರಣ ಪತ್ರ ಹಾಗೂ ಸಂಘದ ಜಿಲ್ಲಾ/ ತಾಲ್ಲೂಕು/ ಯೋಜನಾ ಶಾಖೆ ಅಧ್ಯಕ್ಷರು / ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ. (Ksgea news Blogspot ನಲ್ಲಿ PDF File ಲಭ್ಯವಿದೆ).


*ಈ ಮೇಲ್ಕಂಡ ಲಗತ್ತುಗಳನ್ನು ನಿಗದಿತ JPG format ನಲ್ಲಿ ( 1 mb ಮೀರದಂತೆ) ಅಪ್‌ಲೋಡ್ ಮಾಡುವುದು.*


*ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್‌ಗೆ ಸ್ವೀಕೃತಿ ರವಾನೆಯಾಗಲಿದೆ.*


*ಶೇಕಡವಾರು ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿರುತ್ತದೆ.*


*ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 10.30 ರಿಂದ ಸಂಜೆ 6.00ವರೆಗೆ  080 22354784/83.*


More :-

ಜಾತಿ ತಿದ್ದುಪಡಿ | ಶಾಲಾ ಪ್ರಭಾರ | ವೇತನ ಪ್ರಮಾಣಪತ್ರಗಳು |ಶಾಲಾ ದಾಖಲೆಗಳು | ನಲಿಕಲಿ ಹಾಡು | ಭಾಷಣಗಳು | ಶಾಲೆಯ ವಿವರ | ಸುಶ್ರಾವ್ಯ ಹಾಡುಗಳು | ದಿನಪತ್ರಿಕೆಗಳು | ನಲಿಕಲಿ | ಗ್ರೇಡ್ | ದಿನಪತ್ರಿಕೆಗಳು | ಸಮುದಾಯದತ್ತ ಶಾಲೆ ನಮೂನೆ | ಪ್ರಾರ್ಥನಾ ವೇಳೆಯ ಚಟುವಟಿಕೆ | ಓದುವೆ ನಾನು  | 100 ದಿನಗಳ ಓದು | ಗ್ರಂಥಾಲಯ ಅನುದಾನ ಬಳಕೆ | ಸಚೇತನ | ಅನುದಾನ ಬಳಕೆ | ದಾಖಲಾತಿ | ರಜೆ |

No comments: