Pages
Recent updates
A TO Z
A TO LA
BILINGUAL
KANNADA
ENGLISH
RESULTS
SATS
SCHOOL
NOTES
GENERAL
EXAMS
JOBES
Saturday, 18 May 2024
ಕವಿತೆ | ಆಕೆ | ವೆಂಕಟೇಶ ಚಾಗಿ
**ಆಕೆ***
ಆಕೆ ಅಂತಿಂತವಳಲ್ಲ
ಬಿಳಿಗೂದಲು ಅವಸರದಿಂದ
ಬಂದಿರಬಹುದೇನೋ,
ವಯಸ್ಸು ಅದೆಕೋ
ಅವಳ ಪಾಲಿಗೆ ಮಂದಗಾಮಿ
ಕಾಲುಗಳಂತೂ ಚಕ್ರಗಳೇ ಸರಿ
ಸುತ್ತುತ್ತವೆ ಅತ್ತಿತ್ತ ;
ಸದಾಕಾಲ.
ಜಗವ ಬೆಳಗುವ ಸೂರ್ಯನಿಗೆ
ಅವಳು ಆಪ್ತ ಪರಿಚಯದವಳು.
ಸೂರ್ಯನನ್ನೇ ಇವಳು
ಎಚ್ಚರಿಸುವಳೆನೋ
ಎನ್ನುವಂತೆ..!
ತಲೆಯ ಮೇಲೊಂದು
ಹಸಿವ ನೀಗಿಸುವ
ತರತರದ ಕಾಯಿಪಲ್ಯ ಬುಟ್ಟಿ
ಹಸಿವು ಅವಳದೂ ಆಯ್ತು
ಮತ್ತೆ
ಕೊಳ್ಳುವವರದ್ದೂ ಇರಬಹುದು ;
ತಲೆಗೂ ರೂಢಿ ಆದಂತಿದೆ
ಭಾರ ಹೊತ್ತು ಹೊತ್ತು.!
ಹನಿ ಸುರಿಯುವುದಂತೂ ನಿಜ
ಆಗಾಗ ಮಳೆಯಾಗಿ ಬೆವರಾಗಿ.
ಗಳಿಸಿದ್ದು ನಾಲ್ಕು ಮನಸುಗಳು
ಮತ್ತೆ ನಾಲ್ಕು ಕಾಸು;
ಗುಣಿ ಸೇರಿದ್ದ ಅವ್ವ ಕೊಟ್ಟ
ಸೀರೆಗೂ
ಇವಳೆಂದರೆ ಬಿಟ್ಟು ಬಿಡದಷ್ಟು ಇಷ್ಟ.
ಸ್ವಾಭಿಮಾನದ ಉಡುಗೆಯಂತೂ
ತೊಟ್ಟು ಹಳೆಯದಾಗಿದೆ.!
ಬೆಟ್ಟದಂತೆ ಅಲ್ಲದಿದ್ದರೂ
ದಿನ್ನೆಗಳಂಥ ಕನಸುಗಳೂ
ಅವಳ ಸುತ್ತ ಸುಳಿದಿಲ್ಲ.
ಅದೆಷ್ಟೋ ಬಾರಿ ಹಸಿವ
ನೂಕಿದರೂ
ಮತ್ತೆ ಮತ್ತೆ ಅದರದೇ ನಂಟು
ಆಪ್ತ ಬಡತನದೊಂದಿಗೆ..!
ದೇವರಿಗೆ ಒಂದಿಷ್ಟು
ಲಂಚಕೊಟ್ಟು ಕೇಳಿದ್ದರೂ
ಹುಟ್ಟಬಹುದಿತ್ತು ಒಂದೆರಡು ಹೂಗಳು
ಅವಳ ಒಡಲೊಳಗೆ;
ಎಲ್ಲ ಗಡಿಗಳ ದಾಟಿ
ಅರಿವಿಲ್ಲದೆ ಮುಂದೆ ಸಾಗಿದೆ
ರವಿಯೊಂದಿಗೆ
ಮೂಡಣದ ಕಡೆಗೆ..!
=> ವೆಂಕಟೇಶ ಚಾಗಿ
Comment on WhatsApp : 9611311195)
No comments:
Post a Comment
Newer Post
Older Post
Home
Subscribe to:
Post Comments (Atom)
ಶಾಲಾ ಉಪಯುಕ್ತ
SCHOOL - ಶಾಲಾ ಉಪಯುಕ್ತ
No Bag day
ನಾವು ಮನುಜರು
ಗಣಿತ ಗಣಕ
21 ದಿನಗಳ ಓದು
100 ದಿನಗಳ ಓದು
FLN PROGRAM
ಕಲಿಕಾ ಹಬ್ಬ
ಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮ
ವೀರಗಾಥಾ program
20 ಅಂಶಗಳ ಕಾ
ರ್ಯಕ್ರಮ
ಜಯಂತಿಗಳು
ನಮೂನೆಗಳು
ಗೋಡೆ ಬರಹಗಳು
ಶೈಕ್ಷಣಿಕ ಪ್ರವಾಸ
ಭಾಷಣಗಳು
ADMISSION ದಾಖಲಾತಿ
SATS LOGIN
POST SANCTION ED
U DICE + LOGIN
10 ಅಂಶಗಳ ಕಾರ್ಯಕ್ರಮ
SDMC ಸಮಗ್ರ
PM - SHRI
ಅನುದಾನ ಬಳಕೆ
SAP
SDP
ವಿದ್ಯಾಂಜಲಿ 2.0
ಗ್ರಂಥಾಲಯ ಅನುದಾನ
TOFIE
ಪ್ರತಿಭಾ ಕಾರಂಜಿ
SSP ಶಾಲಾ ಲಾಗಿನ್
FIND SCHOOL
ಶೈಕ್ಷಣಿಕ ಮಾರ್ಗದರ್ಶಿ
ವಾರ್ಷಿಕ ಪಠ್ಯ ವಿಭಜನೆ
ಅಂದಾಜು ಪತ್ರಿಕೆ
ತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt
ಸಸ್ಯ ಶ್ಯಾಮಲಾ
ವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳು
ಶಾಲಾ ವಿದ್ಯಾರ್ಥಿ ಸಂಘಗಳು
ಮುಖ್ಯ ಗುರುಗಳ ಕರ್ತವ್ಯಗಳು
Text Books
ಉಚಿತ ವಿದ್ಯುತ್
ಗ್ರೇಡ್ - GRADE
ಪ್ರಗತಿ ಪತ್ರಗಳು
ವೇಳಾಪಟ್ಟಿ
Gjhn
MDM - ಮದ್ಯಾಹ್ನ ಬಿಸಿಯೂಟ ಯೋಜನೆ
No comments:
Post a Comment